• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

By Mahesh
|
   ಕರ್ನಾಟಕ, ಕೇರಳ ಪ್ರವಾಹದ ನೈಜ ಕಾರಣ ಬಹಿರಂಗ | Oneindia Kannada

   ಬೆಂಗಳೂರು, ಆಗಸ್ಟ್ 19: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು(IISc) ನ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕ ಪ್ರೊ. ಮಾಧವ್ ಗಾಡ್ಗೀಳ್ ಅವರು ಕೇರಳ ಹಾಗೂ ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಪಡಿಸಿದ್ದಾರೆ.

   ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಧವ್ ಗಾಡ್ಗೀಳ್, ಜವಾಬ್ದಾರಿಯಿಲ್ಲದ ಪರಿಸರ ನಿಯಮಗಳು, ಕಲ್ಲು ಕ್ವಾರಿ, ಪ್ರವಾಸೋದ್ಯಮದ ಹೆಸರಿನಲ್ಲಿ ಭೂ ಕಬಳಿಕೆ, ಅರಣ್ಯ ನಾಶ ಎಲ್ಲವೂ ಇಂದಿನ ಪ್ರವಾಹ ಪರಿಸ್ಥಿತಿ, ಭೂಕುಸಿತಕ್ಕೆ ಕಾರಣ ಎನ್ನಬಹುದು.

   ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?

   ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯ ಎಂದು ತಜ್ಞರು ಸೂಚಿಸಿದ್ದ ಪ್ರದೇಶಗಳ ಮೇಲೆ ಮಾರಣಾಂತಿಕವಾಗಿ ನಿರಂತರ ದಾಳಿ ನಡೆದಿದೆ. 2010ರಲ್ಲೇ ಕೇಂದ್ರ ಸರ್ಕಾರ ನಿಯೋಜಿಸಿದ್ದ ಗಾಡ್ಗೀಳ್ ಸಮಿತಿ ನೀಡಿದ್ದ ವರದಿ ಶಿಫಾರಸುಗಳು 2011ರಿಂದ ಜಾರಿಗೆ ಬರಬೇಕಾಗಿತ್ತು. ನೈಸರ್ಗಿಕ ವಿಕೋಪಕ್ಕೆ ಕಾರಣವಾಗಬಲ್ಲ ಕಲ್ಲು ಕ್ವಾರಿಗಳ ಅಕ್ರಮವನ್ನು ನಿಗ್ರಹಿಸುವ ಬಗ್ಗೆ ಎಚ್ಚರಿಸಲಾಗಿತ್ತು.

   ಆದರೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ತೀವ್ರ ವಿರೋಧ ಎದುರಾಯಿತು. ಸುಮಾರು 552 ಪುಟಗಳ ವರದಿ ಧೂಳು ಹಿಡಿಯತೊಡಗಿತು.

   ಡಾ.ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿದ ಕರ್ನಾಟಕ ಸರ್ಕಾರ

   ಇದಾದ ಬಳಿಕ ಬಂದ ಕಸ್ತೂರಿ ರಂಗನ್ ವರದಿಯನ್ನು ಕೂಡಾ ಕೇರಳ ತಳ್ಳಿ ಹಾಕಿತ್ತು. ಅತಿ ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆ, ರಸ್ತೆ ನಿರ್ಮಾಣಕ್ಕೆ ಕಡಿವಾಣವಾಗಲು ಸೂಚಿಸಿದ್ದ ಶಿಫಾರಸ್ಸನ್ನು ಬದಿಗೊತ್ತಿ, ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡಲಾಯಿತು.

   ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ

   ಅರಣ್ಯ ನಾಶ ಮುಂದುವರೆದಿದೆ

   ಅರಣ್ಯ ನಾಶ ಮುಂದುವರೆದಿದೆ

   ಅಕ್ರಮ ಕಲ್ಲು ಗಣಿಗಾರಿಕೆ, ಕ್ವಾರಿಗಳು ಕರ್ನಾಟಕದಲ್ಲೂ ಇವೆ, ಅರಣ್ಯ ನಾಶ ಮುಂದುವರೆದಿದೆ. ಗುಡ್ಡದಲ್ಲಿ ಮನೆ, ಕೆರೆಗಳಲ್ಲಿ ಅಪಾರ್ಟ್ಮೆಂಟ್ ಕಟ್ಟುವುದು ಮುಂದುವರೆದರೆ ಇನ್ನಷ್ಟು ದುರಂತಗಳಿಗೆ ಮುನ್ನುಡಿ ಬರೆದ್ದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

   ಐಐಎಸ್ಸಿ ವರದಿ: ಸರಿ ಸುಮಾರು 40ಕ್ಕೂ ಅಧಿಕ ನದಿ, ತೊರೆ, ಹಳ್ಳಗಳನ್ನು ಹೊಂದಿರುವ ಕೇರಳದಲ್ಲಿ 1973ರಿಂದ 2016ರ ಅವಧಿಯಲ್ಲಿ ಸುಮಾರು 906,440 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ.

   6 ರಾಜ್ಯಗಳಲ್ಲಿ ಜಾರಿಗೆ ಬರಬೇಕಿತ್ತು

   6 ರಾಜ್ಯಗಳಲ್ಲಿ ಜಾರಿಗೆ ಬರಬೇಕಿತ್ತು

   ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಯೋಜನಾ ಆಯೋಗದ ಸದಸ್ಯ ಕೆ. ಕಸ್ತೂರಿರಂಗನ್ ಮತ್ತು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗಿಳ್ ಸಮಿತಿ ನೀಡಿರುವ ಎರಡು ಪ್ರತ್ಯೇಕ ವರದಿಗಳನ್ನು ಪರಿಗಣಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವೆ ಜಯಂತಿ ನಟರಾಜನ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದರ ಅನುಸಾರ ಸುಮಾರು ಶೇ.37ರಷ್ಟು ಪಶ್ಚಿಮ ಘಟ್ಟ ಅರಣ್ಯವು ಸಂರಕ್ಷಿತ ವ್ಯಾಪ್ತಿಗೆ ಒಳಪಡಲಿದೆ. ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟದ 60 ಸಾವಿರ ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 2013ರಲ್ಲಿ ಇದಕ್ಕೆ ವಿರೋಧ ವ್ಯಕ್ತವಾಯಿತು.

   ಇಡುಕ್ಕಿ ಹಾಗೂ ವಾಯನಾಡ್ ಪ್ರದೇಶದಲ್ಲಿ ಭೀತಿ

   ಇಡುಕ್ಕಿ ಹಾಗೂ ವಾಯನಾಡ್ ಪ್ರದೇಶದಲ್ಲಿ ಭೀತಿ

   ಕೇರಳದಲ್ಲಿ ಮಾಧವ ಗಾಡ್ಗಿಳ್ ಸಮಿತಿ ವರದಿ ಬಗ್ಗೆ ಒಲವು ಕಂಡು ಬಂದಿತ್ತು. ಆದರೆ, ಇಡುಕ್ಕಿ ಹಾಗೂ ವಾಯನಾಡ್ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಾ ಬಂದಿರುವ ಜನಾಂಗ ಈಗ ಊರು ಕೇರಿ ಬಿಟ್ಟು ಬೀದಿಗೆ ಬೀಳಬೇಕಾಗುವ ಪರಿಸ್ಥಿತಿ ಬರಲಿದೆ ಎಂಬ ಸುದ್ದಿ ಹಬ್ಬಿತು. ಕ್ಯಾಥೋಲಿಕ್ ಚರ್ಚ್, ರೈತ ಸಂಘಟನೆಗಳು ಒಟ್ಟಾಗಿ ಮಾಧವ್ ಗಾಡ್ಗಿಳ್ ಹಾಗೂ ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರತಿಭಟನೆ ನಡೆಸಿದವು. ಕೇರಳ ಸರ್ಕಾರವು ಎರಡು ವರದಿ ಒಪ್ಪಲು ನಿರಾಕರಿಸಿತು.

   ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

   ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

   ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಮಾಧವ ಗಾಡ್ಗೀಳ್ ವರದಿ ಬಂದ ನಂತರ ಕೇಂದ್ರ ಸರ್ಕಾರ 2012 ಆಗಸ್ಟ್ 17ರಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಸಮಿತಿ ರಚಿಸಿತ್ತು.

   ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ನಿಷೇಧಿಸು­ವುದು, ಪರಿಸರದ ಮೇಲೆ ಹಾನಿ­ಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ ಮುಂತಾದ ಪ್ರಸ್ತಾವನೆಗಳಿವೆ. ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ. ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡುಗು ಜಿಲ್ಲೆಯ 53 ಗ್ರಾಮಗಳ ಇದರಲ್ಲಿವೆ.

   English summary
   Ecologist Madhav Gadgil, founder of the Centre for Ecological Sciences at the Indian Institute of Science, Bengaluru, has described the floods in Kerala as a man-made disaster; a reaction to the illegal excavations, stone quarrying done over a decade.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more