ಬೆಂಗಳೂರಿನ ಮನೆ ಮಾಲೀಕರೇ ಗಮನಿಸಿ, 8,00,00,000 ರೂಪಾಯಿ ಮೌಲ್ಯದ ಆಸ್ತಿ ರಕ್ಷಣೆ... Bengaluru Property
ಬೆಂಗಳೂರಲ್ಲಿ ಆಸ್ತಿ ಮಾಡಿದ್ದೀರಾ? ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ನಿಮಗೆ ಕಡಿಮೆ ಹಣಕ್ಕೆ ಆಸ್ತಿ ಕೊಡಿಸುವ & ಮನೆ ಕೊಡಿಸುವ ಆಸೆ ತೋರಿಸುತ್ತಿದ್ದಾರಾ? ಹಾಗಾದ್ರೆ ನೀವು ಹುಷಾರಾಗಿ ಇರಬೇಕು. ಯಾಕಂದ್ರೆ ನೀವು ಕಡಿಮೆ ಹಣಕ್ಕೆ ಆಸ್ತಿ ಸಿಗುತ್ತೆ & ಮನೆ ಸಿಗುತ್ತೆ ಅಂತಾ ಹೋದರೆ ರಾತ್ರೋರಾತ್ರಿ ಆ ಎಲ್ಲಾ ಆಸ್ತಿ ಕಳೆದುಕೊಂಡು ಬೀದಿಗೆ ಬೀಳಬೇಕಾದ ಪರಿಸ್ಥಿತಿ ಬರಬಹುದು ಹುಷಾರ್. ಇದೇ ರೀತಿ, ಅಕ್ರಮವಾಗಿ ಆಸ್ತಿ ಒತ್ತುವರಿ ಮಾಡಿಕೊಂಡವರ ಎದೆ ನಡುಗಿಸಲು ಬೆಂಗಳೂರು ಜಿಲ್ಲಾಡಳಿತ ಹೊಸ ಅಸ್ತ್ರ ಪ್ರಯೋಗ ಮಾಡಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರಲ್ಲಿ ಭೂಮಿಗೆ ಚಿನ್ನಕ್ಕೂ ಮೀರಿದ ಬೆಲೆ ಬಂದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬೆಂಗಳೂರಲ್ಲಿ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರ ಕಾಟ ಹೆಚ್ಚಾಗಿದೆ. ಒತ್ತುವರಿ ಜಾಗದಲ್ಲಿ ಈಗಾಗಲೇ ದೊಡ್ಡ ಕಟ್ಟಡ & ಲೇಔಟ್ ನಿರ್ಮಾಣವು ಕೂಡ ನಡೆದಿದೆ. ಆದರೆ ಇಂತಹ ಭೂಗಳ್ಳರಿಗೆ ಇದೀಗ ದೊಡ್ಡ ಆಘಾತ ಸಿಗುತ್ತಿದ್ದು, ಬೆಂಗಳೂರು ಜಿಲ್ಲಾಡಳಿತ ಭಾರಿ ದೊಡ್ಡ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಸರ್ಕಾರದ ಜಮೀನು ಕದ್ದು ಆರಾಮವಾಗಿ ಇದ್ದವರಿಗೆ ಎದೆಯಲ್ಲಿ ನಡುಕ ಹುಟ್ಟಿದೆ. ಹೀಗಿದ್ದಾಗಲೇ, ಬೆಂಗಳೂರಿನ ಮನೆ ಮಾಲೀಕರೇ ಗಮನಿಸಿ, 8,00,00,000 ರೂಪಾಯಿ ಮೌಲ್ಯದ ಆಸ್ತಿ ರಕ್ಷಣೆ...

8,00,00,000 ರೂಪಾಯಿ ಮೌಲ್ಯದ ಆಸ್ತಿ...
ಬೆಂಗಳೂರಲ್ಲಿ ಒತ್ತುವರಿ ಮಾಡುವವರಿಗೆ ಇಂದು ಭಾರಿ ಆಘಾತ ನೀಡಿರುವ ಬೆಂಗಳೂರು ಜಿಲ್ಲಾಡಳಿತ, ಸುಮಾರು 8,00,00,000 ರೂಪಾಯಿ ಮೌಲ್ಯದ ಆಸ್ತಿ ರಕ್ಷಣೆ ಮಾಡಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿ ಆಗಿದ್ದ ಸುಮಾರು 8,00,00,000 ರೂಪಾಯಿ ಮೌಲ್ಯದ ಆಸ್ತಿ ಈಗ ರಕ್ಷಿಸಿದೆ ಬೆಂಗಳೂರು ಜಿಲ್ಲಾಡಳಿತ. ಬರೋಬ್ಬರಿ 7.69 ಕೋಟಿ ರೂಪಾಯಿ ಮೌಲ್ಯದ ಸುಮಾರು 5 ಎಕರೆಯಷ್ಟು ಸರ್ಕಾರಿ ಜಮೀನು ರಕ್ಷಣೆ ಮಾಡಲಾಗಿದೆ. ಈಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಸರ್ಕಾರಿ ಜಮೀನು ಸರ್ಕಾರಕ್ಕೆ ವಾಪಸ್!
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ದೇವಗೆರೆ ಗ್ರಾಮದ ಗುಂಡುತೋಪು, ತಾವರೆಕೆರೆ ಹೋಬಳಿ ದೊಡ್ಡೇರಿ ಗ್ರಾಮದ ಸ್ಮಶಾನ ಸೇರಿ, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಶಿವನಪುರ ಸರ್ಕಾರಿ ಓಣಿ, ಯಲಹಂಕ ತಾಲೂಕು ಹೆಸರಘಟ್ಟ-1 ಹೋಬಳಿಯ ಕೊಡಿಗೆ ತಿರುಮಳಾಪುರ ಗ್ರಾಮದ ಗೋಮಾಳ, ಕಾಕೋಳು ಗ್ರಾಮದ ಒತ್ತುವರಿಯನ್ನ ತೆರವುಗೊಳಿಸಿದ್ದಾರೆ. ಆಯಾ ತಾಲೂಕುಗಳ ತಹಸೀಲ್ದಾರ್ & ಸರ್ಕಾರಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಾರ್ಯಾಚರಣೆಯ ಮೂಲಕ ಬೆಂಗಳೂರು ಜಿಲ್ಲಾಡಳಿತ ಮತ್ತೊಮ್ಮೆ ಭೂಗಳ್ಳರಿಗೆ ಶಾಕ್ ಕೊಟ್ಟಿದೆ.












Click it and Unblock the Notifications