ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿ ಸಂಪಾದನೆ ಸುಳಿಯಲ್ಲಿ ಬಿಎಸ್ವೈ ಕುಟುಂಬ

|
Google Oneindia Kannada News

ಬೆಂಗಳೂರು, ನ. 25 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಕ್ಕಳು ಮತ್ತು ಅಳಿಯಂದಿರ ವಿರುದ್ಧ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿದೆ. ಇದರಿಂದಾಗಿ ಯಡಿಯೂರಪ್ಪ ಮಕ್ಕಳು ಮತ್ತು ಅಳಿಯಂದಿರಿಗೆ ಮತ್ತೊಂದು ಕಂಟಕ ಎದುರಾಗಿದ್ದು, ನ್ಯಾಯಾಲಯ ಡಿ.21ರಂದು ದೂರಿನ ವಿಚಾರಣೆ ನಡೆಸಲಿದೆ.

ಶಿವಮೊಗ್ಗ ಮೂಲದ ವಕೀಲ ವಿನೋದ್ ಕುಮಾರ್ ಶಿವಮೊಗ್ಗ ಸಂಸದ ಮತ್ತು ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಉದಯ್ ವಿರುದ್ಧ ಸೋಮವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

Yeddyurappa

ವಕೀಲ ವಿನೋದ್ ಕುಮಾರ್ ಸಲ್ಲಿಸಿರುವ ದೂರು ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಶ್ರೀಶಾನಂದ ಡಿ.21ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದ ಯಡಿಯೂರಪ್ಪ ಪುತ್ರರು ಮತ್ತು ಅಳಿಯಂದರಿಗೆ ಮತ್ತಷ್ಟು ಕಂಟಕ ಎದುರಾಗಿದೆ.

ಈಗಾಗಲೇ ಯಡಿಯೂರಪ್ಪ ಪುತ್ರರ ವಿರುದ್ಧ ಕಿಕ್ ಬ್ಯಾಕ್ ಹಗರಣ, ಡಿನೋಟಿಫಿಕೇಷನ್ ಹಗರದಲ್ಲಿ ದೂರುಗಳು ದಾಖಲಾಗಿದ್ದು, ಅವುಗಳ ವಿಚಾರಣೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮತ್ತು ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತು ಅವರ ವಿರುದ್ಧ ದೂರುಗಳು ದಾಖಲಾಗಿವೆ.

ವಿನೋದ್ ಕುಮಾರ್ ಮೊದಲು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿದ್ದರು. ಸದ್ಯ ಬಿ.ಎಸ್.ಯಡಿಯೂರಪ್ಪ ಪುತ್ರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಈಶುಗೆ ಚುನಾವಣಾ ಕಾಲೇ ಲೋಕಾಯುಕ್ತ ಸ್ಮರಣೆ)

English summary
Shimoga based lawyer Vinod Kumar field private complaint against Yeddyurappa sons and son-in-law R.N.Sohan Kumar. On Monday, November 25 he field complaint before CBI Special Court Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X