ಸಿದ್ದರಾಮಯ್ಯ ಸರ್ಕಾರ ಬಂದರೆ ಅವರಿಗೂ ಬೆಂಬಲ ಕೊಡ್ತೀನಿ: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 2: ನಮ್ಮ ರೈತರಿಗೆ ಬರುವ ಹಣ ಬಂದು ಬಿಟ್ಟರೆ, ಯೋಜನೆಗಳು ಸಮರ್ಪಕವಾಗಿ ಜಾರಿಯಾದರೆ ನಾನು ಯಡಿಯೂರಪ್ಪ ಅವರಿಗೂ ಬೆಂಬಲ ಕೊಡ್ತೀನಿ. ಸಿದ್ದರಾಮಯ್ಯ ಸರ್ಕಾರ ಬಂದರೆ ಅವರಿಗೂ ಬೆಂಬಲ ಕೊಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಿಎಂ ಪಟ್ಟ ಬೇಕಿರಲಿಲ್ಲ ಎಂದು ಯಡಿಯೂರಪ್ಪ ಅವರೇ ಹೇಳುವ ಮೂಲಕ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.
ಇಂಥ ಸಂದರ್ಭದಲ್ಲಿ ಸರ್ಕಾರವೂ ಹೋಗಿ ರಾಷ್ಟ್ರಪತಿ ಆಡಳಿತ ಬಂದರೆ ನೆರೆ ಪರಿಹಾರದ ಕತೆ ಏನು? ಇನ್ನೂ ನಮ್ಮಲ್ಲಿ ಆತ್ಮಹತ್ಯೆ ಆಗಬೇಕಾ ಎಂದು ಪ್ರಶ್ನಿಸಿದರು. ನೆರೆ ಪೀಡಿತ ಉತ್ತರ ಕರ್ನಾಟಕದ ಜನತೆಯ ಹಿತ ದೃಷ್ಟಿಯಿಂದ ಮಾತ್ರವೇ ನಾನು ಮಧ್ಯಂತರ ಚುನಾವಣೆ ಬೇಡ ಎನ್ನುತ್ತಿದ್ದೇನೆ.

ನನ್ನ ಅಭಿಪ್ರಾಯದಲ್ಲಿ ಮತ್ತೆ ಚುನಾವಣೆ ಆದರೆ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲ್ಲ. ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತೆ. ಇದು ಬೇಕಾ ಅನ್ನೋದೇ ಪ್ರಶ್ನೆಯಾಗಿದೆ ಎಂದರು ಹೇಳಿದರು.
ಶಿಕಾರಪುರ ಸುತ್ತಮುತ್ತ ಕೆರೆ ತುಂಬಿಸಲು ನಾನು ಸಿಎಂ ಆಗಿದ್ದಾಗ 450 ಕೋಟಿ ರೂ ನೀಡಿದ್ದೆ. ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಇದನ್ನು 850 ಕೋಟಿಗೆ ಏರಿಕೆ ಮಾಡಿಕೊಂಡರು. ಇದೇ ಇವರ 100 ದಿನದ ಸಾಧನೆ ಎಂದು ವ್ಯಂಗ್ಯವಾಡಿದರು.












Click it and Unblock the Notifications