ಬಿಜೆಪಿ ಟಿಕೆಟ್ ನೀಡದಿದ್ದರೆ, ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ: ಶರತ್ ಬಚ್ಚೇಗೌಡ
ಬೆಂಗಳೂರು, ನವೆಂಬರ್ 2: ಒಂದೊಮ್ಮೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಕೊಂಡು ಕೋರ್ಟ್ಗಳಿಗೆ ಅಲೆದಾಡಿದವರಿಗೆ ಇಂದು ವಂಚನೆಯಾಗಿದೆ.ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.
ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇ ಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ದ ಅಲ್ಲ ಎಂದು ಶರತ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಪಕ್ಷವನ್ನು ನಮ್ಮ ಕಾರ್ಯಕರ್ತರು ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದರು, ಈ ಕ್ಷೇತ್ರದಲ್ಲಿ 3 ಸಾವಿರ ಇದ್ದ ಬಿಜೆಪಿ ಮತಗಳನ್ನು ಶಾಸಕರನ್ನು ಗೆಲ್ಲಿಸುವ ಹಂತಕ್ಕೆ ತಂದು ನಿಲ್ಲಿಸಲಾಗಿದೆ.
ಇದೇ ವೇಳೆ ನನ್ನ ತಂದೆ ಮಗನ ಪರ ಬರಲ್ಲ, ಅವರ ಬದಲು ನೀವೇ ನಿಂತು ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕ್ಷೇತ್ರದ ಜನರಿಗೆ ಶರತ್ ಬಚ್ಚೇಗೌಡ ಕರೆ ನೀಡಿದ್ದಾರೆ.'ಉಪ ಚುನಾವಣೆಗೆ ನೂರಕ್ಕೆ ನೂರು ನಾನೇ ಅಭ್ಯರ್ಥಿ. ಇಂದಿಗೂ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಹೊಸ ಚಿಹ್ನೆ ಕ್ಷೇತ್ರಕ್ಕೆ ಬರುತ್ತದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಈ ಬಾರಿ ನನ್ನ ಪರ ಕೆಲಸ ಮಾಡಿ. ಗ್ರಾಮ ಮನೆ ಹೊಲ ತೋಟಗಳಿಗೆ ಹೋಗಿ ಮತದಾರರಿಗೆ ಹೊಸ ಚಿಹ್ನೆ ಗುರುತು ಮಾಡಿಕೊಡಿ. ಪಕ್ಷ ಬಿಟ್ಟು ಪ್ರಚಾರ ಮಾಡುವಾಗ ನನ್ನ ತಂದೆ ಬಚ್ಚೇಗೌಡರು ನನ್ನ ಪರ ನಿಲ್ಲಲು ಸಾಧ್ಯವಾಗಲ್ಲ. ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಮತ್ತು ಜನರಿಗೆ ಕರೆ ನೀಡಿದ್ದಾರೆ.












Click it and Unblock the Notifications