ಸಿಎಂ ಇಬ್ರಾಹಿಂ ಪರ ಎಚ್‌.ವಿಶ್ವನಾಥ್ ಗುಡುಗು: ನಾನಾಗಿದ್ದರೆ 6 ವರ್ಷ ಅಮಾನತು ಮಾಡುತ್ತಿದ್ದೆ

ಬೆಂಗಳೂರು, ಅಕ್ಟೋಬರ್ 17: ಲೋಕಸಭಾ ಚುನಾವಣೆ 2024 ಸಿದ್ಧತೆಯ ಭಾಗವಾಗಿ ಬಿಜೆಪಿ ಹಾಗೂ ಕರ್ನಾಟಕ ಸ್ಥಳೀಯ ಪಕ್ಷ ಜೆಡಿಎಸ್ ಮೈತ್ರಿ ಮುಂದಾಗಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪರ ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾತ್ ಬ್ಯಾಟ್ ಬೀಸಿದ್ದಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದರೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು 6 ವರ್ಷ ಅಮಾನತು ಮಾಡುತ್ತಿದ್ದೆ ಎಂದು ಅವರು ಗುಡುಗಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್‌ ವಿಶ್ವನಾಥ್ ಅವರು, ಒಬ್ಬ ರಾಜ್ಯಾಧ್ಯಕ್ಷನಾಗಿ ಸಿಎಂ ಇಬ್ರಾಹಿಂ ಅವರ ನಿಲುವು ಸರಿಯಾಗಿದೆ. ಏಕೆಂದರೆ ಅವರಿಗೆ ಉಚ್ಛಾಟನೆ ಮಾಡುವ ಅಧಿಕಾರ ಇದೆ ಎಂದು ಅವರ ಸ್ಟ್ಯಾಂಡ್ ಅನ್ನು ವಿಶ್ವನಾಥ್ ಬೆಂಬಲಿಸಿ ಮಾತನಾಡಿದರು.

If I Become JDS State President HD Kumaraswamy Suspended For 6 Years, H Vishwanath Said

ಎಚ್‌ಡಿ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕುಮಾರಸ್ವಾಮಿ ಅವರ ಜಾತ್ಯಾತೀತ ಎನ್ನುವ ಪದವನ್ನೇ ತೆಗೆದುಹಾಕಿ ಬಿಟ್ಟಿದ್ದಾರೆ. ಯಾರು ಚಮಚಾಗಿರಿ ಮಾಡುತ್ತಾರೆ ಅವರು ಮೈತ್ರಿಗೆ ಒಪ್ಪುತ್ತಾರೆ ಎಂದು ಸೋಮವಾರ ಸಿಎಂ ಇಬ್ರಾಹಿಂ ಹೇಳಿಕೆ ಬೆಂಬಲಿಸಿ ಜೆಡಿಎಸ್ ನಾಯಕ ಮೈತ್ರಿ ವಿರುದ್ಧ ಎಚ್‌ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಸಿಡಿದೆದ್ದಿದ್ದ ಸಿಎಂ ಇಬ್ರಾಹಿಂ ಅವರು ಸ್ವಪಕ್ಷದ ವಿರುದ್ಧವೇ ಗುಡುಗಿದ್ದರು. ಎಚ್‌ಡಿ ಕುಮಾರಸ್ವಾಮಿ ಅವರ ಉಚ್ಚಾಟನೆ ಕುರಿತು ಮಾತನಾಡಿದ್ದರು.

If I Become JDS State President HD Kumaraswamy Suspended For 6 Years, H Vishwanath Said

ಸಿಎಂ ಇಬ್ರಾಹಿಂ ಹೆಸರಲ್ಲಿ ಉಚ್ಛಾಟನೆಯ ನಕಲಿ ಪತ್ರ

ಇದೀಗ ಮಂಗಳವಾರ ಸಿಎಂ ಇಬ್ರಾಹಿಂ ಅವರ ಲೆಟರ್‌ಹೆಡ್‌ನಲ್ಲಿ ಅವರ ನಕಲಿ ಸಹಿ ಒಳಗೊಂಡ ಪತ್ರ ಓಡಾಡುತ್ತಿದೆ. ಅದರಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದರೆಂದು ಪತ್ರದಲ್ಲಿ ಉಲ್ಲೇಖಿಸಿ ಹರಿಬಿಡಲಾಗಿದೆ. ಆದರೆ ಇದೆಲ್ಲವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ತಳ್ಳಿ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+