ಮುಸ್ಲಿಮರಿಗೆ ಮೀಸಲಾತಿ ಸ್ಥಾನ ಕೊಡಲಿರುವ ಕಾಂಗ್ರೆಸ್‌ನಿಂದ ಒಬಿಸಿಯವರಿಗೆ ಚಿಪ್ಪು: ಬಿಜೆಪಿ ವಾಗ್ದಾಳಿ

ಬೆಂಗಳೂರು, ಏಪ್ರಿಲ್ 27: ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ (ಓಬಿಸಿ) ಕೆಟಗರಿಗೆ ತರಲು ಕರ್ನಾಟಕ ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ ಎನ್ನಲಾಗುತ್ತಿರುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬಗ್ಗೆ ಆರೋಪ ಪ್ರತ್ಯಾರೋಪ ಕೇಳಿ ಬಂದಿವೆ. ಇದೀಗ ಬಿಜೆಪಿಯು 'ಕಾಂಗ್ರೆಸ್‌ ಪಾಪದ ಪುರಾಣ ತಿಳಿಯಲು, ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ' ಎಂದು ಕ್ಯೂಆರ್ ಕೋಡ್ ಸಹಿತ ಜಾಹೀರಾತು ನೀಡಿದೆ.

ಹಿಂದುಳಿದ ವರ್ಗದವರ ಸಾಲಿಗೆ ಮುಸ್ಲಿಂರನ್ನು ಸೇರಿಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದರು. ಆಯೋಗ ಮರಳಿ ನೋಟಿಸ್ ಸಹ ಜಾರಿ ಮಾಡಿದೆ ಎಂದು ಬಿಜೆಪಿ ದೂರಿತ್ತ. ಇದೀಗ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಾಹೀರಾತು ಅಸ್ತ್ರ ಪ್ರಯೋಗಿಸಿದೆ.

If Congress Includes Muslims in the reservation list of backward classes you all will be shelled BJP

ಜಾಹೀರಾತಿನಲ್ಲಿ ''ಕಾಂಗ್ರೆಸ್ ಡೇಂಜರ್ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರ ಸೇರ್ಪಡೆ ಮಾಡುತ್ತಿದ್ದಾರೆ. ಇದರಿಂದ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಚಿಪ್ಪು ನೀಡಲಿದೆ'' ಎಂದು ಕಿಡಿ ಕಾರಿದೆ.

ಹಿಂದುಳಿದ ವರ್ಗದ ಸಮುದಾಯ ಹೆಸರಿಸಿರುವ ಬಿಜೆಪಿಯು ಮುಸ್ಲಿಮರ ಓಬಿಸಿ ಪಟ್ಟಿಗೆ ಸೇರಿದಂತೆ, ವಿಶ್ವಕರ್ಮ, ಈಡಿಗ, ಗಾಣಿಗ, ಕ್ಷತ್ರಿಯ, ಹಡಪದ/ಸವಿತಾ, ಕೋಲಿ, ಕುರುಂಬ, ಕುಂಬಾರ, ಉಪ್ಪಾರ, ಮಡಿವಾಳ, ನೇಕಾರ ಸೇರಿದಂತೆ ಇತರೆ ಹಿಂದುಳಿದ ಸಮುದಾಯಗಳು ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಚಿಪ್ಪು ನೀಡಲಿದೆ ಎಂದು ಬಿಜೆಪಿ ದೂರಿದೆ.

If Congress Includes Muslims in the reservation list of backward classes you all will be shelled BJP

ವಿಕಸಿತ ಭಾರತಕ್ಕಾಗಿ ಬಿಜೆಪಿ ಮತ ನೀಡಿ ಎಂದು ಪಕ್ಷವು ಜನರಲ್ಲಿ ಮತಯಾಚನೆ ಮಾಡಿದೆ. ಪತ್ರಿಕೆಗಳಲ್ಲಿ ಬೃಹತ್ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಆಡಳಿತಕ್ಕೆ ಪೆಟ್ಟು ನೀಡುತ್ತಿದೆ. ಈ ಮೂಲಕ ಚೊಂಬು, ಅಚ್ಚೆದಿನಗಳು ಬಗ್ಗೆ ಕಾಂಗ್ರೆಸ್ ನೀಡಿದ್ದ ಜಾಹೀರಾತಿಗೆ ತಿರುಗೇಟು ನೀಡುತ್ತಿದೆ.

ಮುಸ್ಲಿಮರಿಗೆ ಮೀಸಲಾತಿ: ಬಿಜೆಪಿಗೆ ಅಸ್ತ್ರ

ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಬೇಕು ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದಕ್ಕೆ ಕಾಂಗ್ರೆಸ್ ಸಮಜಾಯಿಷಿ ನೀಡುವ ಕೆಲಸ ಮಾಡಿತು. ಬಿಜೆಪಿಯೇ ಕಳೆದ ಬಾರಿ ಮುಸ್ಲಿಮರ ಮೀಸಲಾತಿ ಮುಂದುವರೆಸುವುದಾಗಿ ಹೇಳಿದೆ ಎಂದು ತಿಳಿಸಿತು.

ಸಂವಿಧಾನದಲ್ಲಿ ಹಾಗೂ ಸುಪ್ರೀಂ ಕೋರ್ಟ್ ಸಹ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದೆ ಎಂಬುದನ್ನು ಬಿಜೆಪಿ ಹಿರಿಯ ನಾಯಕರು ಹೇಳಿದರು. ಇದೇ ವಿಚಾರವನ್ನು ಅಸ್ತ್ರವಾಗಿಟ್ಟುಕೊಂಡ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲೆ ಪ್ರಕೋಪ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+