ಮಗನ ಕೈ ಕಚ್ಚಿ ಹಲ್ಲೆಗೈದ ವಿಂಗ್ ಕಮಾಂಡರ್ ವಿರುದ್ಧ ಬೈಕ್ ಸವಾರನ ತಾಯಿ ಪ್ರತಿಕ್ರಿಯೆ..
ಬೆಂಗಳೂರು, ಏಪ್ರಿಲ್ 22: ರಸ್ತೆಯಲ್ಲಿ ವಾಹನ ಓವರ್ ಟೆಕ್ ವಿಚಾರಕ್ಕೆ ನಡೆದ ವಿಂಗ್ ಕಮಾಂಡರ್ ಹಾಗೂ ಬೈಕ್ ಸವಾರನ ಮಧ್ಯದ ಗಲಾಟೆ ಬೆಂಗಳೂರಿನಾದ್ಯಂತ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ವಿಡಿಯೋ ಮೇಲಿಂದ ಮೇಲೆ ವೈರಲ್ ಆಗುತ್ತಲೇ ಇವೆ. ಇದೀಗ ಖಾಸಗಿ ಕಂಪನಿ ಉದ್ಯೋಗಿ, ಬೈಕ್ ಸವಾರನ ತಾಯಿ ಜ್ಯೂತಿ ಅವರು ಪ್ರತಿಕ್ರಿಯಿಸಿದ ವಿಡಿಯೋ ಹರಿದಾಡುತ್ತಿದೆ. ತನ್ನ ಮಗನನ್ನೆ ತಪ್ಪಿತಸ್ಥ ಎಂಬಂತೆ ಮಾಡಲಾಗಿದೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಅವರು ಆಗ್ರಹಿಸಿದ್ದಾರೆ. ಬೈಕ್ ಸವಾರನ ಬಂಧನ ಬಳಿಕ ವಿಂಗ್ ಕಮಾಂಡ್ ಮೇಲೆ FIR ದಾಖಲಾಗಿದೆ.
ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಖಾಸಗಿ ಕಂಪನಿ ಉದ್ಯೋಗಿಯಾದ ಬೈಕ್ ಸವಾರ ವಿಕಾಸ್ ಕುಮಾರ್ ಗಲಾಟೆ ಮಾಡಿಕೊಂಡವರು. ಈ ಗಲಾಟೆ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಮೊದಲು ಗಲಾಟೆಯಲ್ಲಿ ಸವಾರನ ತಪ್ಪು ಎನ್ನಲಾಗಿತ್ತು. ನಂತರ ವಿಂಗ್ ಕಮಾಂಡ್ ತಪ್ಪಿರುವ ಬಗ್ಗೆ ವಿಡಿಯೋ ಲಭಿಸಿತು. ಇದೆಲ್ಲ ಬೆಳವಣಿಗೆ ಬಗ್ಗೆ ಸ್ವತಃ ಬೈಕ್ ಸವಾರನ ತಾಯಿ ಬಹಿರಂಗವಾಗಿ ಮಾತನಾಡಿ, ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಅನ್ನು ಕರ್ನಾಟಕ ಪೋರ್ಟ್‌ಫೋಲಿಯೋ (@karnatakaportf) ಹಂಚಿಕೊಂಡಿದೆ.

ಮಗನ ಮೇಲೆ ಹಲ್ಲೆ, ಅಪರಾಧಿಯಂತೆ ಬಿಂಬಿಸುವ ಯತ್ನ..
ವಿಂಗ್ ಕಮಾಂಡರ್ ನನ್ನನ ಮಗನ ಮೇಲೆ ಹೇಗೆ ಸುಳ್ಳು ಆರೋಪ ಹೊರಿಸಿದ್ದಾರೆ. ಇದರಲ್ಲ ತಮ್ಮ ಮಗನ ತಪ್ಪಿಲ್ಲ ಎಂದು ಗಲಾಟೆಯ ಕುರಿತು ತಾಯಿ ಬೆಳಕು ಚೆಲ್ಲಿದ್ದಾರೆ. ಪುತ್ರನ ಮೇಲಾದ ಹಲ್ಲೆ ಕುರಿತು ತಾಯಿ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ವಿಂಗ್ ಕಮಾಂಡರ್ ಅಧಿಕಾರಿಯು ತನ್ನ ಮುಗ್ಧ ಮಗನನ್ನು ಅಪರಾಧಿ ಎಂದು ಬಿಂಬಿಸಲು ಸತ್ಯಗಳನ್ನು ತಿರುಚಿದ್ದರ ಬಗ್ಗೆ ವಿವರಿಸಿದ್ದಾರೆ.
ಆಗಿದ್ದಾಯ್ತು ಎಂದು ನಾವು ಸುಮ್ಮನಾಗಿದ್ದೆವು. ಅವರು ಮಾಡಿತ ತಪ್ಪನ್ನು ನನ್ನ ಮಗನ ಮೇಲೆ ಹಾಕಿದ್ದಾರೆ. ಕಮಾಂಡರ್ ಆಗಿ ಅನ್ಯಾಯ ಮಾಡಿರುವುದು ತಪ್ಪು. ಮಗನ ಕೈ ಕಚ್ಚಿದ್ದಾರೆ. ಬೈಕ್ ಎತ್ತಿ ಬಿಸಾಡಿದ್ದಾರೆ. ಇದೆಲ್ಲ ಮಾಡಿದ್ದರು ಸಹ ನಾವು ಇದೊಂದು ಸಣ್ಣ ಗಲಾಟೆ ಎಂದು ವಾಪಾಸ್ ಮನೆಗೆ ಬಂದಿದ್ದೇವೆ. ಇವರು ಇದೀಗ ಗಲಾಟೆ ದೊಡ್ಡದು ಮಾಡಿದ್ದಾರೆ. ದೂರು ನೀಡಿದ್ದಾರೆ. ಇದರಿಂದ ನನ್ನ ಮಗನಿಗೆ ಸಮಸ್ಯೆ ಕೊಡುತ್ತಿದ್ದಾರೆ. ನಾವೇ ಮೊದಲು ದೂರು ನೀಡಿದ್ದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಸಮಸ್ಯೆ ಆಗುತ್ತಿತ್ತು ಎಂದು ತಾಯಿ ಹೇಳಿದ್ದಾರೆ. ನನ್ನ ಮಗನನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
The mother of the biker who was arrested has finally spoken out, shedding light on how her son was falsely accused by a DRDO-IAF Wing Commander. In her emotional statement, she explains how the officer twisted the entire narrative, manipulating facts to portray her innocent son… pic.twitter.com/F8G352cD3l
— Karnataka Portfolio (@karnatakaportf) April 21, 2025
ಪ್ರಕರಣದ ನ್ಯಾಯಯುತ ತನಿಖೆಗೆ ತಾಯಿ ಆಗ್ರಹ
ಈ ಮೂಲಕ ಗಲಾಟೆ ನಡೆದ ಬಳಿಕ ಅದರ ತಪ್ಪು ನಿರೂಪಣೆಯಿಂದಾಗಿ ತಮ್ಮ ಮಗನನ್ನು ಸಿಲುಕಿಸಲು ಯತ್ನಿಸಿದ್ದಾರೆ. ಮಾಡದ ತಪ್ಪು, ಅಪರಾಧಕ್ಕೆ ನನ್ನ ಮಗ ಶಿಕ್ಷೆ ಅನುಭವಿಸುತ್ತಿದ್ದಾನೆ. ಈ ಗಲಾಟೆ ಪ್ರಕರಣದ ನ್ಯಾಯಯುತ ತನಿಖೆ ನಡೆಸಿ ಸತ್ಯತೆ ಜನರಿಗೆ ತಿಳಿಸಬೇಕು ಎಂದು ಬೈಕ್ ಸವಾರ ಹಲ್ಲೆಗೊಳಗಾದ ವಿಕಾಸ್ ಕುಮಾರ್ ತಾಯಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನಲೆ ಏನು?
ವಿಂಗ್ ಕಮಾಂಡ್ ಶಿಲಾದಿತ್ಯ ಬೋಸ್ ಅವರು ತಮ್ಮ ಪತ್ನಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ಸೋಮವಾರ ಬೆಳಗ್ಗೆ ತೆರಳಿದ್ದಾರೆ. ಈ ವೇಳೆ ಬೈಕ್ ಸವಾರ ವಿಕಾಸ್ ಅವರು ಓವರ್ ಟೆಕ್ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ನೋಡ ನೋಡುತ್ತಿದ್ದಂತೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಆರಂಭದಲ್ಲಿ ವಿಕಾಸ್ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಬೋಸ್ ತಾನು ಅಮಾಯಕ ಎಂಬಂತೆ ವಿಡಿಯೋ ಮಾಡಿದ್ದ. ಘಟನೆ ವಿವರಿಸಿದ್ದ. ಬಳಿಕ ದೊರೆ ವಿಡಿಯೋ ನೋಡಿದರೆ, ಈ ಬೋಸ್ ಎರಗಿ ಎರಡಿ ಬೈಕ್ ಸವಾರನ ಮೇಲೆ ಬಿದ್ದು ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಕಾಸ್ ಬಂಧನ ಬಳಿಕ ಬೋಸ್ ವಿರುದ್ಧವು ಎಫ್‌ಐಆರ್ ಆಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications