• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಯಾರಿಗಾದರೂ ನೋವಾಗಿದ್ದರೆ ಸ್ಸಾರಿ' ಎಂದ ಬೇಳೂರು ಗೋಪಾಲಕೃಷ್ಣ

|

ಬೆಂಗಳೂರು, ಮಾರ್ಚ್ 5: "ನನಗೆ ಪ್ರಧಾನಮಂತ್ರಿ ಅವರ ಬಗ್ಗೆ ಗೌರವ ಇದೆ. ಪ್ರಧಾನಿ ಅವರ ಹತ್ಯೆ ಆಗಬೇಕು ಅಂತ ನಾನು ಹೇಳಿಲ್ಲ. ಗಾಂಧೀಜಿಗೆ ಅವಮಾನ ಆಗುವಾಗ ನಾನು ಸುಮ್ಮನಿರಲು ಹೇಗೆ ಸಾಧ್ಯ? ನಾನು ಹೇಳಿದ್ದು; ನೀವು ಇದೇ ಕೆಲಸವನ್ನು ಪ್ರಧಾನಿಗಳಿಗೂ ಮಾಡ್ತೀರಾ? ಅಂತ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ".

-ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಹೇಳಿಕೆಗೆ ನೀಡಿದ ಸ್ಪಷ್ಟೀಕರಣ ಇದು. ಬುಧವಾರ ಮಧ್ಯಾಹ್ನದಿಂದ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆ ಭಾರೀ ಚರ್ಚೆಗೆ ಒಳಗಾಗಿತ್ತು. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಬೆಂಬಲಿಸುವಂಥವರು ತಮ್ಮ ಪ್ರಧಾನಿಗೆ ಗುಂಡಿಟ್ಟು ಹತ್ಯೆ ಮಾಡಲಿ ಎಂದು ಸಮಾರಂಭವೊಂದರಲ್ಲಿ ಅವರು ಹೇಳಿದ್ದರು.

ಬೇಕಾದರೆ ಪ್ರಧಾನಿ ಮೋದಿಯನ್ನು ಗುಂಡಿಕ್ಕಿ ಸಾಯಿಸಿ: ಬೇಳೂರು ಗೋಪಾಲಕೃಷ್ಣ ಉದ್ದಟತನ

ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಬಿಜೆಪಿ ಮುಖಂಡರ ನಿಯೋಗವು ಮಾರ್ಚ್ 6ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಿದೆ ಎಂದು ತಿಳಿಸಲಾಗಿದೆ.

ಬೇಳೂರು ಗೋಪಾಲಕೃಷ್ಣ ಉದ್ಧಟತನ ಹೇಳಿಕೆ: ಬಿಜೆಪಿಗರ ಉಗ್ರ ಪ್ರತ್ಯುತ್ತರ

ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣ, ಸಹ ವಕ್ತಾರ ಎಸ್.ಪ್ರಕಾಶ್, ಮಾಜಿ ಉಪ ಮೇಯರ್ ಎಸ್. ಹರೀಶ್, ಮುಖಂಡರಾದ ಚಲವಾದಿ ನಾರಾಯಣ ಸ್ವಾಮಿ ಅವರು ನಿಯೋಗದಲ್ಲಿರುತ್ತಾರೆ ಎನ್ನಲಾಗಿದೆ.

English summary
I have respect for the Prime Minister, I never said PM has to be assassinated. How can I be silent when Gandhiji is disrespected? I said will you do the same thing to the PM? I will definitely apologise if my statements hurt anyone, said Congress leader Belur Gopalkrishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X