ನಿಮ್ಮ ಕನ್ನಡ language nonsense ಬೇಕಿಲ್ಲ, ನಾನು ಪುಣೆಗೆ ಹೋಗುತ್ತೇನೆ ಉದ್ಯಮಿ ಪೋಸ್ಟ್!
ಬೆಂಗಳೂರಿನಲ್ಲಿ ಹಿಂದಿ ಹಾಗೂ ಕನ್ನಡೇತರರ ಮೇಲೆ ದಿನೇ ದಿನೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಬೆಂಗಳೂರು ಬಿಡುವುದಕ್ಕೆ ನಿರ್ಧರಿಸಿದ್ದೇನೆ. ಇನ್ನು ಆರು ತಿಂಗಳಿನಲ್ಲಿ ನಾವು ಕಂಪನಿಯನ್ನು ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರಿಸಲಿದ್ದೇವೆ ಎಂದು ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ಘಟನೆಗೆ ಖಂಡನೆ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಉದ್ಯಮಿಯೊಬ್ಬರು ಮಾಡಿದ್ದು. ಈ ವಿಚಾರದಲ್ಲಿ ಮಹಾರಾಷ್ಟ್ರದ ಜನತೆ ಸಹ ಕನ್ನಡಿಗರು ಹೇಳುವುದು ಸರಿಯಾಗಿದೆ ಅಂತ ಹೇಳಿದ್ದಾರೆ.
ಉದ್ಯಮಿ ಕೌಶಿಕ್ ಮುಖರ್ಜಿ ಎಂಬ ವ್ಯಕ್ತಿ (ಉದ್ಯಮಿ ಎಂದು ಹೇಳಿಕೊಂಡಿದ್ದು) ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಸಣ್ಣದೊಂದು ಪೋಸ್ಟ್ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುವುದಕ್ಕೆ ಕಾರಣವಾಗಿದೆ. ಎಸ್‌ಬಿಐನ ಲೇಡಿ ಬ್ಯಾಂಕ್ ಮ್ಯಾನೇಜರ್‌ನ ವರ್ತನೆಯನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ಅವರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಹಂಚಿಕೊಂಡು ಬರೆದುಕೊಂಡಿರುವ ಕೌಶಿಕ್, ನಾನು & ನಮ್ಮ ಕಂಪನಿ ಬೆಂಗಳೂರು ತೊರೆದು ಪುಣೆಗೆ ಹೋಗುವುದಕ್ಕೆ ನಿರ್ಧರಿಸಿದ್ದೇವೆ ಎಂದಿದ್ದಾರೆ.

ಕೌಶಿಕ್ ಮುಖರ್ಜಿ, ಇಂದು ನಾನು ನಮ್ಮ ಬೆಂಗಳೂರಿನ ಕಚೇರಿಯನ್ನು ಮುಂದಿನ 6 ತಿಂಗಳ ಒಳಗಾಗಿ ಮುಚ್ಚಿ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ಭಾಷಾ ಅವಿವೇಕತನ ಮುಂದುವಯುತ್ತಿರುವಾಗ ನನ್ನ ಕಂಪನಿಯ ಕನ್ನಡ ಮಾತನಾಡದ / ಕನ್ನಡೇತರ ಸಿಬ್ಬಂದಿ ಇದರ ಮುಂದಿನ "ಬಲಿಪಶು" ಆಗಬಾರದು ಎಂದು ನಾನು ಬಯಸುತ್ತೇನೆ. ಈ ವಿಷಯವನ್ನು ಸಿಬ್ಬಂದಿಯೇ ಪ್ರಸ್ತಾಪಿಸಿದರು. ಅವರ ನಿರ್ಧಾರ ನನಗೆ ಸರಿ ಅಂತ ಅನಿಸಿದೆ. ಹೀಗಾಗಿ, ನಮ್ಮ ಕಂಪನಿಯನ್ನು ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.
Today I took a decision to wind up our Bangalore office in the next 6 months and move it to Pune. If this language nonsense is to continue, I do not want my non Kannada speaking staff to be the next "victim".
— Kaushik Mukherjee 🇮🇳 (@kush07) May 22, 2025
This idea was mooted by the staff themselves.
I agreed to their POV. https://t.co/M9abD2OYOD
ಕನ್ನಡಿಗರ ಆಕ್ರೋಶ: ಇನ್ನು ಈ ಪೋಸ್ಟ್‌ಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಪೋಸ್ಟ್‌ಗೆ ಅರುಣ್ ಜಾವಗಲ್ ಅವರು ಬಾಯ್ ಬಾಯ್ ಅಂತ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೌಶಿಕ್ ನೀವು ಮುಂದಿನ ದಿನಗಳಲ್ಲಿ ಈ ರೀತಿ ಪೋಸ್ಟ್ ಮಾಡುತ್ತಿರಬೇಕಾಗುತ್ತದೆ. ಅರ್ಥಾತ್ ತುಂಬಾ ಜನ ಬೆಂಗಳೂರು ಬಿಡಲಿದ್ದಾರೆ ಎಂಬರ್ಥದಲ್ಲಿ ರಿಯಾಕ್ಟ್ ಮಾಡಿದ್ದಾರೆ.
ಸರ್, ನೀವು ಕರ್ನಾಟಕದಲ್ಲಿ ಲಾಭ ಗಳಿಸುತ್ತೀರಿ ಆದರೆ ಅವರ ಭಾಷೆಯನ್ನು ಕಲಿಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ?? ಒಳ್ಳೆಯ ನಡತೆ ಅಲ್ಲ ಅಂತ ಉತ್ತರ ಭಾರತೀಯರೇ ರಿಯಾಕ್ಟ್ ಮಾಡಿದ್ದಾರೆ. "ಕರ್ನಾಟಕ ಎಂದರೆ ಭಾರತ. ನಾನು ಭಾರತದ ನಾಗರಿಕ. ನಮಗೆ ಬೇಕಾಗಿರುವುದು ಅಷ್ಟೇ.
ನನಗೆ ಭಾಷೆಯ ಬಗ್ಗೆ ಕಾಳಜಿ ಇಲ್ಲ. ನಾನು ನನ್ನ ಸ್ವಂತ ದೇಶದಲ್ಲಿರುವಾಗ ನನ್ನನ್ನು ಹೊರಗಿನವನೆಂದು ಭಾವಿಸಬೇಡಿ" ಅಂತ ಹೇಳಿರುವುದು ಕನ್ನಡಿಗರನ್ನ ಇನ್ನಷ್ಟು ಕೆರಳಿಸಿದೆ.
ಶತ್ರುಘ್ನ ಎನ್ನುವವರು ಕನ್ನಡ ಕಲಿಯಲು ಕನಿಷ್ಠ ಕೆಲವು ಪ್ರಯತ್ನಗಳನ್ನಾದರೂ ನೀವು ಮಾಡಬೇಕು. ಕನ್ನಡದಲ್ಲಿ ಕೆಲವು ವಾಕ್ಯಗಳನ್ನು ಕಲಿಯುವುದರಿಂದ ಕರ್ನಾಟಕದಲ್ಲಿ ಆರಾಮಾಗಿ ನೀವು ವಾಸಿಸಬಹುದು. ಬೆಂಗಳೂರು ಬಿಡುವುದು ಬುದ್ಧಿವಂತರ ನಿರ್ಧಾರವಲ್ಲ. ಈ ದೇಶದಲ್ಲಿ ಯಾರಾದರೂ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು/ವಾಸಿಸಬಹುದು. ಯಾವುದೇ ವ್ಯಕ್ತಿಯನ್ನು ಒಂದು ಪ್ರದೇಶದಿಂದ ಹೊರಗೆ ತಳ್ಳುವ ಹಕ್ಕು ಯಾರಿಗೂ ಇಲ್ಲ ಅಂತ ಹೇಳಿದ್ದಾರೆ.
ಪ್ರಕಾಶ್ ಎಂ ಟೀ ಅವರು, ಕೌಶಿಕ್ ಮುಖರ್ಜಿ ಕಂಪನಿ ಇರೋದು ಮುಂಬೈನಲ್ಲಿ.. ಸುಮ್ನೆ ವಿವಾದ ಹುಟ್ಟು ಹಾಕೋಕೆ ಆತ ಈ ರೀತಿ ಟ್ವಿಟ್ ಮಾಡಿರೋದು.. ಆತನದು ಬೆಂಗಳೂರನಲ್ಲಿ ಯಾವ್ದೇ ಬ್ರಾಂಚ್ ಕೂಡ ಅಲ್ಲ ಅಂತ ಹೇಳಿದ್ದಾರೆ.












Click it and Unblock the Notifications