ನಾನು ಅತ್ಯಂತ ಸಂತುಷ್ಟ ವ್ಯಕ್ತಿ: ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಜುಲೈ 25: "ನಾನು ಅತ್ಯಂತ ಸಂತುಷ್ಟ ವ್ಯಕ್ತಿ. ಅಧಿಕಾರ ಹೋಗಿದ್ದಕ್ಕೆ ನನಗೆ ಚಿಂತೆ ಇಲ್ಲ. ಆದರೆ ಹದಿನಾಲ್ಕು ತಿಂಗಳಲ್ಲಿ ನಾನು ಏನೆಲ್ಲ ಕೆಲಸ ಮಾಡಿದ್ದೇನೋ ಅದರ ಬಗ್ಗೆ ನನಗೆ ತೃಪ್ತಿ ಇದೆ" ಎಂದು ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
"ಅಧಿಕಾರ ಹೋಗಿದ್ದರ ಬಗ್ಗೆ ನನಗೆ ಬೇಸರವಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎಷ್ಟೋ ಅಡಚಣೆಗಳ ನಡುವಲ್ಲೇ ನಾನು ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಇದೀಗ ನನ್ನ ಸ್ಥಾನದಿಂದ ಕೆಳಗಿಳಿಯಬೇಕಾದಾಗಲೂ ನಾನು ಅತ್ಯಂತ ಸಂತೋಷದಿಂದ ಹೊರಬರುತ್ತಿದ್ದೇನೆ" ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.

ಜುಲೈ 23 ರಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ, 205 ಶಾಸಕರ ವಿಧಾನಸಭೆಯಲ್ಲಿ 99 ಶಾಸಕರ ಮತವನ್ನಷ್ಟೇ ಪಡೆದು, ಬಹುಮತಕ್ಕೆ ಅಗತ್ಯವಿದ್ದ ಮ್ಯಾಜಿಕ್ ನಂಬರ್ 103 ನ್ನು ಪಡೆಯಲು ಎಚ್ ಡಿ ಕುಮಾರಸ್ವಾಮಿ ವಿಫಲರಾದರು. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಪತನವಾಗಿತ್ತು. 105 ಶಾಸಕರ ಬೆಂಬಲ ಪಡೆದ ಬಿಜೆಪಿ ಬಹುಮತದ ಮೂಲಕ ಸರ್ಕಾರ ರಚಿಸುವ ಚಿಂತನೆ ನಡೆಸುತ್ತಿದೆ.












Click it and Unblock the Notifications