ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Iam Ready To Face ಎಂದು ಸಿದ್ದುಗೆ ಚಾಲೆಂಚ್ ಹಾಕಿದ ವಿ ಸೋಮಣ್ಣ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ವಸತಿ ಸಚಿವ ವಿ ಸೋಮಣ್ಣ ವಿಧಾನಸೌಧದಲ್ಲಿ ನಿಗಿ ನಿಗಿ ಕೆಂಡರಾಗಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಕೃಷ್ಣಪ್ಪ ಹಗರಣ ವಿಲ್ಲದೇ ವಸತಿ ಹಂಚಿದ್ದರು ಇವನ್ಯಾರೋ ಸೋಮಣ್ಣ ಬಂದು ಹಾಳು ಮಾಡಿದ್ದಾನೆ ಎಂದಿದ್ದರಂತೆ ಇದರಿಂದ ಕೋಪಗೊಂಡ ಸೋಮಣ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಓಪನ್ ಚಾಲೆಂಜ್ ಹಾಕಿದ್ದಾರೆ.

ಸಚಿವ ಸೋಮಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ನಿನ್ನೆ ನನ್ನ ಕ್ಷೇತ್ರಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ನಾವು ಒಂದು ಲಕ್ಷ ಮನೆಗಳನ್ನ ಬೆಂಗಳೂರಿಗೆ ಹಂಚಿಕೆ ಮಾಡಿದದೆವು. ನಮ್ಮ ಕೃಷ್ಣಪ್ಪ ಹಗರಣ ಇಲ್ಲದೆ ಮಾಡಿದ್ದ, ಇವನ್ಯಾರೋ ಸೋಮಣ್ಣ ಬಂದು ಹಾಳು ಮಾಡಿದ್ದಾನೆ ಅಂತ ಏಕವಚನ ಪದಪ್ರಯೋಗ ಮಾಡಿದ್ದಾರೆ ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರೇ, ನೀವು ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು. ವಾಸ್ತವಾಂಶ ತಿಳಿಯದೆ ಮಾತನಾಡಿದ್ದೀರಿ, ನಿಮ್ಮ ಮಾತುಗಳು ನನಗೆ ಬಹಳಷ್ಟು ಬೇಸರ ತರಿಸಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

 ಕೃಷ್ಣಪ್ಪ ವಿರುದ್ದ ಕೋರ್ಟ್‌ನಲ್ಲಿ ಕೇಸ್

ಕೃಷ್ಣಪ್ಪ ವಿರುದ್ದ ಕೋರ್ಟ್‌ನಲ್ಲಿ ಕೇಸ್

ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣಾ ಪೂರ್ವಾಪರ ಏನು ಅನ್ನೋದು ಎಲ್ಲರಿಗೂ ಗೊತ್ತು. 10,000 ಕೋಟಿ ರೂ.‌ಬೆಲೆ ಬಾಳುವ 800 ಎಕರೆ ಕಬಳಿಸಿದ್ದಾರೆ. ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕಬಳಿಸಿದ ಮಾಜಿ ವಸತಿ ಮಂತ್ರಿ ವಿರುದ್ಧ ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶವಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಅದನ್ನ ಹಂಚೋ ಕೆಲಸ ಮಾಡಿದ್ದರು. ಇವರ ಕಾಲದಲ್ಲಿ ಆದ ಹಗರಣ ಅದು. ನಾನು ಯಾವುದು ಕ್ಯಾನ್ಸಲ್ ಮಾಡಿದ್ದೇನೆ ತೋರಿಸಲಿ, ಒಂದೇ ಒಂದು ಮನೆ ಕೂಡ ಕಟ್ಟಿಲ್ಲ. ಅವರ ಜೊತೆ ನೀವು ಕೂತು ಮಾತನಾಡೋದು ಎಷ್ಟರ ಮಟ್ಟಿಗೆ ಸರಿ ಅಂತ ಸಚಿವ ಸೋಮಣ್ಣ ಪ್ರಶ್ನಿಸಿದರು. ‌

 ಮನೆಗಳ ಹಂಚಿಕೆ ಬಗ್ಗ ವಿವರ

ಮನೆಗಳ ಹಂಚಿಕೆ ಬಗ್ಗ ವಿವರ

2017ರಲ್ಲಿ ಬೆಂಗಳೂರು ನಗರದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಸಿದ್ದರಾಮಯ್ಯನವರ ಸರ್ಕಾರ ಘೋಷಿಸಿತ್ತು. 2018-19ನೇ ಸಾಲಿನಲ್ಲಿ 46,499 ಮನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, 28,754 ಮನೆಗಳಿಗೆ ಎಲ್.ಒ‌.ಎ ನೀಡಿದ್ದು, ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಳ್ಳಲಾಗಿತ್ತು. 1070 ಎಕರೆ ಜಮೀನು ನೀಡಲಾಗಿದೆ ಅಂತಾರೆ ಆದರೆ 1014 ಎಕರೆ ಕಾಗದದಲ್ಲಿ‌ ಮಂಜೂರಾಗಿದ್ದು ಬಿಟ್ಟರೆ ಯಾವುದೇ ಜಮೀನು ವಾಸಕ್ಕೆ ಯೋಗ್ಯವಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 553 ಎಕರೆ ಜಮೀನನ್ನು ವಶಕ್ಕೆ ಪಡೆದು, 168 ಎಕರೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಲಾಗಿದ್ದು,
493 ಎಕರೆ ಜಮೀನನ್ನು ಗುತ್ತಿಗೆದಾರರಿಗೆ ಹಸ್ತಾಂತರ ಮಾಡಲಾಗಿದ್ದು 48,018 ಮನೆಗಳ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.‌ 2,000 ಮನೆಗಳು ಪೂರ್ಣಗೊಂಡಿದ್ದು ಸೆಪ್ಟೆಂಬರ್ 7 ರಂದು ಸಾಂಕೇತಿಕವಾಗಿ ಹಸ್ತಾಂತರ ಮಾಡಲಿದ್ದೇವೆ. ಇವರು ಕೊಟ್ಟಿದ್ದು ಸೇರಿ ನಾವು ಹಣ ಬಿಡುಗಡೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಮನೆಗಳನ್ನು ಪಾರದರ್ಶಕವಾಗಿ ಮಾಡಿದ್ದೇವೆ. ಈಗಾಗಲೇ 44,510 ಅರ್ಜಿಗಳನ್ನು ಸ್ವೀಕರಿಸಿದ್ದು 6,499 ಅರ್ಜಿದಾರರು ತಾವು ಬಯಸಿದ ಮನೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

 I am Redy to face ಎಂದ ಸೋಮಣ್ಣ

I am Redy to face ಎಂದ ಸೋಮಣ್ಣ

ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿದೆ ಅಂದರು. ಆದರೆ‌ ಅವರು ನಿರ್ಮಾಣ ಮಾಡಿದ್ದು ಕೇವಲ 7 ಲಕ್ಷ ಮನೆ ಮಾತ್ರ. ಕೊನೆಯದಾಗಿ 2 ಕೋಟಿ ಬಿಟ್ಟು 18 ಲಕ್ಷ ಮನೆ ಕಟ್ಟಲು ಸ್ಯಾಂಕ್ಷನ್ ಮಾಡಿ ಹೋಗಿದ್ದೀರಾ. ಏನೂ ಮಾಡಲಿಲ್ಲ ಅಂತ ಆರೋಪ ಮಾಡ್ತೀರಾ‌. ಯಾವ ಮಾನದಂಡವನ್ನು ಇಟ್ಟುಕೊಂಡು ನೀವೂ ಆರೋಪ ಮಾಡ್ತೀರಾ‌. ನೀವೇ ದಿನಾಂಕ ನಿಗದಿ ಮಾಡಿ, ಸಾರ್ವಜನಿಕವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ‌‌ I am Redy to face ಅಂತ ಸಚಿವರು ಬಹಿರಂಗವಾಗೇ ಸವಾಲು ಹಾಕಿದ್ದಾರೆ.

 ನಮ್ಮ ಕ್ಷೇತ್ರದಲ್ಲೇ ನೀವಿದ್ದರೀರಿ ಏನು ಅನ್ನೋದು ಗೊತ್ತಿದೆ

ನಮ್ಮ ಕ್ಷೇತ್ರದಲ್ಲೇ ನೀವಿದ್ದರೀರಿ ಏನು ಅನ್ನೋದು ಗೊತ್ತಿದೆ

ಕನಕ ಭವನ ಕಟ್ಟಿಸಿ, ಅದರ ಹಣದಲ್ಲೇ ಮನೆ ಕಟ್ಟಿಸಿಕೊಂಡ ಆಂತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಗೊತ್ತು. ನನ್ನ ಕ್ಷೇತ್ರದಲ್ಲೇ ಅವರ ಬಂಗಲೆ ಇದೆ, ಅದರ ಬಗ್ಗೆ ನಾನು ಮಾತನಾಡಲ್ಲ. ಯಾವ್ಯಾವ ರಸ್ತೆಯಲ್ಲಿ ಆಸ್ತಿ ಇದೆ ಅಂತ ನಾನೂ ಹೇಳಲಾ ಅಂತ ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ನೀವು ಸೋತಿಲ್ವಾ.? ಅದೃಷ್ಟ ಯಾವಾಗಲೂ ಇರಲ್ಲ, ನಿಮಗೂ ಅದೃಷ್ಟ ಕೈಕೊಡುತ್ತೆ. ನೀವು ಎಷ್ಟು ಪರ್ಸೆಂಟ್ ಪಡೆದಿದ್ದೀರಿ ನಮಗೂ ಗೊತ್ತಿದೆ. 600 ಚಿಲ್ಲರೆ ಎಕರೆಗೆ ರೀಡೂ ಮಾಡಿದ್ರಲ್ಲ, ನಿಮಗೆ ಎಷ್ಟು ಸಿಕ್ಕಿದೆ. ನಾಳೆ ಬೆಳಗ್ಗೆ ಸಾರ್ವಜನಿಕರ ಮುಂದೆ ಕ್ಷಮೆ ಅಲ್ಲ, ನೇಣಿಗೆ ಏರಲು ಸಿದ್ಧ. ನೀವು, ನಾವು ಇಬ್ಬರೂ ಒಂದೇ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟವರೇ, ಬಾಯಿ ಬಿಟ್ರೆ ಸೋಮಣ್ಣ ಅಂತ ಆರೋಪ ಮಾಡ್ತೀರಿ. ನೀವು ಒಂದು ಸಮೂಹ ನಾಯಕರಾಗಿದ್ದೀರಿ.ಇನ್ನು ಮುಂದಾದ್ರೂ ಸರಿಯಾಗಿ ಮಾತನಾಡಿ ಅಂತ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ.

English summary
Leader of Opposition Siddaramaiah went to Govindaraja Nagar assembly constituency and He says Krishnappa distributed accommodation without scandal. Somanna got angry and held a press conference at Vidhansaudah and issued an open challenge,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X