ದೇವೇಗೌಡರ ವಿರುದ್ಧ ಸ್ಪರ್ಧೆಗೆ ನಾನು ರೆಡಿ: ಸದಾನಂದಗೌಡ

ಬೆಂಗಳೂರು, ಮಾರ್ಚ್‌ 11: ದೇವೇಗೌಡ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ತಯಾರಿದ್ದೇನೆ ಎಂದು ಬಿಜೆಪಿ ಸಚಿವ ಸದಾನಂದಗೌಡ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸದಾನಂದಗೌಡರು, ಇಲ್ಲಿವರೆಗೆ ನನಗಿಂತ ವಯಸ್ಸಿನಲ್ಲಿ ಚಿಕ್ಕವರ ಎದುರು ಸ್ಪರ್ಧೆ ಮಾಡಿದ್ದೇನೆ, ಮೊದಲ ಬಾರಿಗೆ ದೊಡ್ಡವರ ಎದುರು ಸ್ಪರ್ಧೆ ಮಾಡಲಿದ್ದೇನೆ, ಅದನ್ನು ಗೌರವಯುತವಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸವಿದೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.

ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದು ಬಹುತೇಕ ಅಂತಿಮವಾಗಿದೆ. ಸದಾನಂದ ಗೌಡ ಅವರು ಅಲ್ಲಿನ ಹಾಲಿ ಸಂಸದರಾಗಿದ್ದು, ಈ ಬಾರಿ ಸಹ ಅದೇ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ.

I am ready to face Deve Gowda in elections: Sadananda Gowda

ನಾನು ಬೆಂಗಳೂರು ಉತ್ತರ ಕ್ಷೇತ್ರದಿಂದ ಬೇರೆಡೆಗೆ ವಲಸೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ನಾನು ಎಲ್ಲಿಯೂ ಹೋಗುವುದಿಲ್ಲ. ಪಕ್ಷ ಟಿಕೆಟ್ ನೀಡಿದ ಕಡೆ ಸ್ಪರ್ಧಿಸುತ್ತೇನೆ, ನನಗೆ ಪಕ್ಷ ಗೆಲ್ಲುವುದು ಮುಖ್ಯ ಎಂದು ಹೇಳಿದರು.

ಕಳೆದ ಐದು ವರ್ಷದಲ್ಲಿ ನಾನು ಸಚಿವನಾಗಿ ಮಾಡಿದ ಕೆಲಸ ಹಾಗೂ ಸಂಸದನಾಗಿ ಕ್ಷೇತ್ರಕ್ಕೆ ಮಾಡಿದ ಕೆಲಸಗಳೇ ನನ್ನನ್ನು ಗೆಲ್ಲಿಸುತ್ತವೆ ಎಂದ ಅವರು, ಬಿಜೆಪಿಯು ಫೆಬ್ರವರಿ ಮೊದಲಿನಿಂದಲೂ ಚುನಾವಣಾ ತಯಾರಿಯಲ್ಲಿ ನಿರತವಾಗಿದೆ. ರಾಜ್ಯದ ಉಳಿದೆರಡು ಪಕ್ಷಗಳಿಗಿಂತಲೂ ಬಿಜೆಪಿ ಮುಂದಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+