ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಸ್ಕಫೊರ್ಸ್ ಉಸ್ತುವಾರಿಗೆ ಸಚಿವರ ಮಧ್ಯೆ ತೀವ್ರ ಪೈಪೋಟಿ, ಸುಸ್ತಾದ ಸಿಎಂ!

|
Google Oneindia Kannada News

ಬೆಂಗಳೂರು, ಜೂ. 30: ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದೇ ರೀತಿ ಬೆಂಗಳೂರು ಕೋವಿಡ್-19 ಉಸ್ತುವಾರಿಗಾಗಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪೈಪೋಟಿಯೂ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.

Recommended Video

COVAXIN India's first vaccine for human trial|ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿಕ್ತು ಅನುಮತಿ|Oneindia Kannada

ಒಟ್ಟು ಮೂವರು ಸಚಿವರು ಬೆಂಗಳೂರು ಕೋವಿಡ್-19 ಟಾಸ್ಕ್‌ಫೋರ್ಸ್‌ ಉಸ್ತುವಾರಿಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಏರಿಕೆಯಾಗುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದೆಡೆಯಾದರೇ, ಅದರ ನಿಯಂತ್ರಣ ಮಾಡಲು 3 ಮಂದಿ ಪೈಪೋಟಿ ನಡೆಸಿರುವುದು ಮತ್ತೊಂದೆಡೆ ಬೆಂಗಳೂರು ಜನರನ್ನು ಚಿಂತೆಗೀಡು ಮಾಡಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಆದರೂ ರಾಜಕೀಯ ಪೈಪೋಟಿ ಬಿಟ್ಟು ನಮ್ಮತ್ತ ನೋಡಿ ಎಂದು ಜನರು ಅವಲತ್ತುಕೊಳ್ಳುವಂತಾಗಿದೆ.

ನಾನೇ ಉಸ್ತುವಾರಿ

ನಾನೇ ಉಸ್ತುವಾರಿ

ತಂದೆ, ಪತ್ನಿ ಹಾಗೂ ಮಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದ ಕ್ವಾರಂಟೈನ್‌ನಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೆಲಸಕ್ಕೆ ಮರಳಿದ್ದಾರೆ. ಜೊತೆಗೆ ನಮ್ಮ ಹಿರಿಯ ಸಚಿವರಾದ ಅಶೋಕ್ ಅವರು ನನ್ನ ಅನುಪಸ್ಥಿತಿಯಲ್ಲಿ ಬಹಳ ಚೆನ್ನಾಗಿ ಉಸ್ತುವಾರಿ ನಿರ್ವಹಿಸಿದ್ದಾರೆ ಎನ್ನುವ ಮೂಲಕ ಬೆಂಗಳೂರು ಕೋವಿಡ್ -19 ಟಾಸ್ಕ್‌ಫೋರ್ಸ್‌ಗೆ ನಾನೇ ಉಸ್ತುವಾರಿ ಎಂದು ಹೇಳಿದರು.

ಆರ್. ಅಶೋಕ್‌ಗೆ ಬೆಂಗಳೂರಿನ 'ಸಾಮ್ರಾಟ್' ಪಟ್ಟ ತಾತ್ಕಾಲಿಕ?ಆರ್. ಅಶೋಕ್‌ಗೆ ಬೆಂಗಳೂರಿನ 'ಸಾಮ್ರಾಟ್' ಪಟ್ಟ ತಾತ್ಕಾಲಿಕ?

ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸ್ವಲ್ಪ ನೋಡಿಕೊಳ್ಳಲು ಹೇಳಿದ್ದರು. ಅನುಭವಿ ಕಂದಾಯ ಸಚಿವರು ಬಹಳ ಸಮರ್ಥವಾಗಿ ನೋಡಿಕೊಂಡಿದ್ದಾರೆ. ಸಾಮೂಹಿಕವಾಗಿ ನಾವೆಲ್ಲ ಉಸ್ತುವಾರಿ ನೋಡಿಕೊಳ್ಳುತ್ತೇವೆ ಎಂದು ಡಾ. ಸುಧಾಕರ್ ಸ್ಪಷ್ಟಪಡಿಸಿದರು.

ಆರ್. ಅಶೋಕ್ ಹೆಸರು

ಆರ್. ಅಶೋಕ್ ಹೆಸರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನಗೆ ಬೆಂಗಳೂರು ಕೋವಿಡ್-19 ಉಸ್ತುವಾರಿ ನಿರ್ವಹಣೆ ಕೊಟ್ಟಿದ್ದಾರೆ. ನಮ್ಮಲ್ಲಿ ಯಾರಿಗೂ ಗೊಂದಲ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ. ಆದರೆ ಡಾ. ಸುಧಾಕರ್ ಅವರು ಮಾತನಾಡುವಾಗ ಆರ್. ಅಶೋಕ್ ಅವರ ಹೆಸರು ಹೇಳದೇ ಪದೇ ಪದೇ ಕಂದಾಯ ಸಚಿವರು ಎಂದರು.

ಅನುಭವಿ ಕಂದಾಯ ಸಚಿವರು ಬಹಳ ಸಮರ್ಥವಾಗಿ ನೋಡಿಕೊಂಡಿದ್ದಾರೆ. ಸಾಮೂಹಿಕವಾಗಿ ನಾವೆಲ್ಲ ಉಸ್ತುವಾರಿ ನೋಡಿಕೊಳ್ಳುತ್ತೇವೆ. ಸಿಎಂ ನನಗೆ ಪೊರ್ಟ್‌ಫೊಲಿಯೊ ಕೊಟ್ಟಿದ್ದಾರೆ. ಹೀಗಾಗಿ ಯಾರಿಗೂ ಗೊಂದಲ ಇಲ್ಲ ಎಂದು ಡಾ. ಸುಧಾಕರ್ ಹೇಳಿದ್ದಾರೆ.

ಸೋಮವಾರ ಮಾತನಾಡುತ್ತೇನೆ

ಸೋಮವಾರ ಮಾತನಾಡುತ್ತೇನೆ

ಕಳೆದ ಶನಿವಾರ (ಜೂ.28) ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರುಗಳ ಸಭೆ ಮಾಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಸೋಮವಾರ (ಜೂ.30) ಕೋವಿಡ್ -19 ಚಿಕಿತ್ಸೆ ಕುರಿತು ಕೈಗೊಳ್ಳುವ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಇವತ್ತು ಸಭೆಯಲ್ಲಿ ಅವರು ಭಾಗವಹಿಸಿದ್ದರೂ ಸಭೆಯ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಕೊಟ್ಟರು.

ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!

ಮೊದಲಿನಿಂದಲೂ ಪೈಪೋಟಿ

ಮೊದಲಿನಿಂದಲೂ ಪೈಪೋಟಿ

ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಾಗಿನಿಂದಲೂ ಕೋವಿಡ್ ಟಾಸ್ಕ್‌ಫೊರ್ಸ್‌ ಉಸ್ತುವಾರಿಗೆ ಸಚಿವರಲ್ಲಿ ಪೈಪೋಟಿ ನಡೆದಿದೆ. ಬಜೆಟ್ ಅಧಿವೇಶನ ನಡೆದಾಗಲೇ ರಾಜ್ಯದಲ್ಲಿ ಮೊದಲ ಕೋವಿಡ್-19 ಪ್ರಕರಣ ದೃಢಪಟ್ಟು ದೇಶದ ಮೊದಲ ಸಾವು ಕಲಬುರಗಿಯಲ್ಲಿ ಆಗಿತ್ತು. ಆಗ ಆರೋಗ್ಯ ಸಚಿವ ತಮ್ಮ ಪುತ್ರಿಯ ವಿವಾಹದಲ್ಲಿ ಬ್ಯೂಸಿ ಆಗಿದ್ದರು. ವಿಧಾನಸಭೆಯಲ್ಲಿ ಡಾ. ಸುಧಾಕರ್ ಸರ್ಕಾರದ ಕ್ರಮಗಳನ್ನು ಸದನಕ್ಕೆ ವಿವರಿಸಿದ್ದರು.

ಆರೋಗ್ಯ ಸಚಿವ ಶ್ರೀರಾಮುಲು ಅವರು ಬಂದ ನಂತರ ಕೋವಿಡ್ ಉಸ್ತವಾರಿ ಯಾರಿಗೆ ಕೊಡಬೇಕು ಎಂಬ ಸಮಸ್ಯೆ ಸಿಎಂ ಯಡಿಯೂರಪ್ಪ ಅವರಿಗೆ ಎದುರಾಗಿತ್ತು. ಕೊನೆಗೆ ರಾಜ್ಯದ ಉಸ್ತುವಾರಿಯನ್ನು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಬೆಂಗಳೂರು ಕೊವೀಡ್-19 ಟಾಸ್ಕ್‌ಫೊರ್ಸ್‌ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಹಂಚಿಕೆ ಮಾಡಿದ್ದರು.

ಸಮನ್ವಯದ ಕೊರತೆ

ಸಮನ್ವಯದ ಕೊರತೆ

ಉಸ್ತುವಾರಿ ಹಂಚಿಕೆ ಬಳಿಕವೂ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಎದ್ದು ಕಂಡಿತ್ತು. ಅದು ವಿರೋಧ ಪಕ್ಷಗಳ ನಾಯಕರ ಮಾತಿಗೆ ಆಹಾರವಾಗುವ ಮೊದಲೇ, ಕೋವಿಡ್-19 ಕುರಿತು ಪ್ರತಿದಿನ ಮಾಧ್ಯಮಗಳಿಗೆ ಮಾಹಿತಿ ಕೊಡುವ ಜವಾಬ್ದಾರಿಯನ್ನು ಮೂರನೆಯವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಿದ್ದರು.

ಹೋಂ ಕ್ವಾರಂಟೈನ್‌ನಲ್ಲಿ ನನ್ನನ್ನು ಕಟ್ಟಿಹಾಕಿದಂತೆ ಆಗಿತ್ತು: ಡಾ. ಸುಧಾಕರ್ಹೋಂ ಕ್ವಾರಂಟೈನ್‌ನಲ್ಲಿ ನನ್ನನ್ನು ಕಟ್ಟಿಹಾಕಿದಂತೆ ಆಗಿತ್ತು: ಡಾ. ಸುಧಾಕರ್

ಹೀಗಾಗಿ ಕೋವಿಡ್-19 ಕುರಿತು ಪ್ರತಿದಿನ ಮಾಧ್ಯಮಗಳಿಗೆ ಮಾಹಿತಿ ಕೊಡುವ ಜವಾಬ್ದಾರಿಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಸಿಎಂ ಯಡಿಯೂರಪ್ಪ ವಹಿಸಿದ್ದರು. ಈಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಕ್ವಾರಂಟೈನ್‌ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುದರಿಂದ ಮತ್ತೆ ಗೊಂದಲ ಎದ್ದಿತ್ತು.

English summary
The number of Coronavirus infections in Bengaluru is increasing day by day. Similarly, the rivalry in the State BJP government has came to a critical stage for the Covid-19 taskforce incharge in Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X