ಆ ರಾಜಕಾರಣಿ ಜೊತೆ ಮಲಗು ಎಂದು ಪತಿ ಪೀಡಿಸುತ್ತಾನೆ: ಕಣ್ಣೀರಿಟ್ಟ ಮಹಿಳೆ
ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ರಾಜಕಾರಣಿ ಜೊತೆ ಮಲಗುವಂತೆ ಪೀಡಿಸಿ, ಬ್ಲ್ಯಾಕ್‌ಮೇಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪತಿಯ ಕಾಟದಿಂದ ನೊಂದ ಮಹಿಳೆಯು ನೇರವಾಗಿ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಕಣ್ಣೀರಿಡುತ್ತಾ ತನ್ನ ಪತಿಯ ನೀಚ ಕೃತ್ಯದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ರಾಜಕಾರಣಿಯ ಜೊತೆ ಸಹಕರಿಸಬೇಕು ಎಂದು ಪದೇ ಪದೇ ಬಲವಂತ ಮಾಡುತ್ತಿದ್ದ. ಇದಕ್ಕೆ ಒಪ್ಪಲಿಲ್ಲ ಎಂದು ನನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಆ ಮಹಿಳೆ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಗಂಡನೊಬ್ಬ ನೀಚ, ಆತ ವೇ*ಶ್ಯಾವಾಟಿಕೆ ದಂಧೆ ನಡೆಸುತ್ತಾನೆ. ಹುಡುಗಿಯರನ್ನು ಸಪ್ಲೈ ಮಾಡುತ್ತಾನೆ. ಹುಡುಗಿಯರನ್ನ ಹಣಕ್ಕಾಗಿ ಮಾರಾಟ ಕೂಡ ಮಾಡುತ್ತಾನೆ ಎಂದು ಪತಿಯ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ. ನನ್ನ ರಾಜಕಾರಣಿ ಜೊತೆ ಮಲಗು, ಅವರೊಂದಿಗೆ ಸಹಕರಿಸು ಎಂದು ಬಲವಂತ ಮಾಡುತ್ತಿದ್ದ. ಇದಕ್ಕೆ ನಾನು ಒಪ್ಪಲಿಲ್ಲ. ಹಾಗಾಗಿ ನನ್ನ ಫೋಟೋಗಳನ್ನು ಬೇರೆಯವರಿಗೆ ತೋರಿಸಿ ನನ್ನನ್ನೂ ಮಾರಾಟ ಮಾಡಲು ಯತ್ನಿಸಿದ್ದಾನೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ನೊಂದ ಮಹಿಳೆ ನೀಡಿರುವ ದೂರು ಆಧರಿಸಿ ಅವರ ಪತಿ ಯೂನಸ್ ಪಾಷಾ ಎಂಬುವವರ ವಿರುದ್ಧ ಬನಶಂಕರಿ ಪೊಲೀಸ್ ಸ್ಟೇಷನ್‌ನಲ್ಲಿ ಎಫ್ಐಆರ್ ದಾಖಲಾಗಿದೆ. ರಾಜಕಾರಣಿಗಳು ಮಾತ್ರವಲ್ಲ, ಅವರ ಸಹಚರರೊಂದಿಗೂ ಮಲಗು ಎಂದು ಬಲವಂತ ಮಾಡುತ್ತಿದ್ದ. ನನಗೆ ವರದಕ್ಷಿಣೆ ಕಿರುಕುಳವೂ ನೀಡಿ, ಗರ್ಭಪಾತ ಮಾಡಿಸಿದ್ದಾನೆ ಎಂದು ಸಂಕಟ ಹೊರಹಾಕಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪದ ಮೇರೆಗೆ ಆಕೆಯ ಅತ್ತೆ-ಮಾವನ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.
ʼನನಗೆ ರಾಜಕಾರಣಿಗಳು ಗೊತ್ತು, ನಮ್ದೇ ಕಾಂಗ್ರೆಸ್. ನೀನೂ ಏನೂ ಮಾಡೋಕಾಗಲ್ಲ, ನಿನ್ನ ಅಪ್ಪ ಹಾಗೂ ಸಹೋದರಿಗೆ ಹೊಡೆಯುತ್ತೇನೆ, ಕೊಲೆ ಮಾಡ್ತೀನಿ ಎಂದು ಬೆದರಿಕೆಯೂ ಹಾಕಿದ್ದಾನೆ. ಕಿಡ್ನ್ಯಾಪ್ ಮಾಡ್ತೀನಿ, ಮುಖಕ್ಕೆ ಆಸಿಡ್ ಹಾಕ್ತೀನಿ, ನೀನು ಹೆಸರಿಗೆ ಮಾತ್ರವೇ ಹೆಂಡತಿ ಎಂದು ಧಮ್ಕಿ ಹಾಕುತ್ತಾನೆ ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಮಹಿಳೆಯನ್ನು ಆಸ್ತಿಯಂತೆ ಪರಿಗಣಿಸಿ ಕಾಂಗ್ರೆಸ್ ನಾಯಕರೊಂದಿಗೆ "ರಾಜಿ ಮಾಡಿಕೊಳ್ಳಲು" ಹೇಳಿದಾಗ, ಅದು ಕೇವಲ ಕುಟುಂಬದ ಸಮಸ್ಯೆಯಲ್ಲ, ಕಾಂಗ್ರೆಸ್ ಪ್ರಾಯೋಜಿತ ದುರಹಂಕಾರ ಮತ್ತು ಸಮಾಧಾನದಿಂದ ಸ್ಥಾಪಿಸಲ್ಪಟ್ಟ ಭಯೋತ್ಪಾದಕ ಮನಸ್ಥಿತಿಯಾಗಿದೆ. "ಕಾಂಗ್ರೆಸ್ ಸರ್ಕಾರ ನಮ್ಮದು" ಎಂದು ಒಬ್ಬ ಮುಸ್ಲಿಂ ವ್ಯಕ್ತಿ ತನ್ನ ಸ್ವಂತ ಹೆಂಡತಿಯನ್ನು ಕೊಲ್ಲುವುದಾಗಿ, ಹೊಡೆಯುವುದಾಗಿ, ಮಾರಾಟ ಮಾಡುವುದಾಗಿ ಮತ್ತು ಆಸಿಡ್ ಎಸೆಯುವುದಾಗಿ ಬೆದರಿಕೆ ಹಾಕುತ್ತಾನೆ. ಇದು ಕಾಂಗ್ರೆಸ್ ಅಧಿಕಾರ ನೀಡುವ ಮನಸ್ಥಿತಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ, ಮಹಿಳೆಯರಿಗೆ ನ್ಯಾಯಕ್ಕಾಗಿ ಮಸೀದಿಗೆ ಹೋಗಲು ಹೇಳಲಾಗುತ್ತದೆ. ಆದರೆ ಮಹಿಳೆ ಸ್ವತಃ ಅಲ್ಲಿಯೂ ನ್ಯಾಯ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಇದು ಅಪಾಯಕಾರಿ. ಇದು ರಾಜಕೀಯವಲ್ಲ. ಇದು ಭಯೋತ್ಪಾದನೆ ಎಂದು ಬಿಜೆಪಿ ಹರಿಹಾಯ್ದಿದೆ.












Click it and Unblock the Notifications