ಬಿಜೆಪಿ ವಿರುದ್ಧ ಎಚ್.ಎಸ್.ದೊರೆಸ್ವಾಮಿ ಅಸಮಾಧಾನ

HS Doreswamy
ಬೆಂಗಳೂರು, ಜ.13 : ಬಿಜೆಪಿ ರಾಜಕೀಯ ಲಾಭಕ್ಕಾಗಿ ಸ್ವಾಮಿ ವಿವೇಕಾನಂದರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ. ವಿವೇಕಾನಂದರು ಯಾವುದೇ ಪಕ್ಷದ ಆಸ್ತಿಯಲ್ಲ ಎಂದು ಅವರು ಹೇಳಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ, ಸ್ವಾಮಿ ವಿವೇಕಾನಂದರು ಯಾವುದೇ ಪಕ್ಷದ ಆಸ್ತಿಯಲ್ಲ. ಅವರು ಭಾರತದ ಸಂಸ್ಕೃತಿ ಮತ್ತು ಗೌರವವನ್ನು ವಿಶ್ವಕ್ಕೆ ತಿಳಿಸಿಕೊಟ್ಟವರು. ಜಾತಿ, ಧರ್ಮವನ್ನು ಮೀರಿ ಚಿಂತಿಸಿದ ಅವರು ಮಾನವ ಧರ್ಮ ಒಂದೇ ಎಂದು ಸಾರಿದವರು ಎಂದು ದೊರೆಸ್ವಾಮಿ ಅಭಿಪ್ರಾಯಪಟ್ಟರು.

ವಿವೇಕಾನಂದರು ಯಾವುದೇ ಪಕ್ಷದ ಆಸ್ತಿಯಲ್ಲ. ಆದರೆ, ಬಿಜೆಪಿ ಸ್ವಾಮಿ ವಿವೇಕಾನಂದರನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ನಿಜಕ್ಕೂ ಇದೊಂದು ಹೇಯ ಕೃತ್ಯ ಇಂತಹ ಪ್ರಯತ್ನಗಳನ್ನು ಪಕ್ಷ ಮಾಡಬಾರದು ಎಂದರು.

ಆಮ್ ಆದ್ಮಿ ನೋಡಿ ಕಲಿಯಿರಿ : ನವ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಸಾಧನೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಎಚ್ಚರಿಕೆ ಪಾಠವಾಗಿದೆ ಎಂದು ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ. ಪಕ್ಷಗಳು ಜನತೆಗೆ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದಾಗ ಈಡೇರಿಸಲಿದ್ದರೆ ಏನಾಗುತ್ತದೆ ಎನ್ನುವುದನ್ನು ದೆಹಲಿ ಚುನಾವಣೆ ಫಲಿತಾಂಶ ತೋರಿಸಿದೆ ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳು ಜನರಿಗೆ ಕೊಟ್ಟ ಮಾತಿಗೆ ತಪ್ಪಿದರೆ ಜನರು ಕಸದಂತೆ ಗುಡಿಸುತ್ತಾರೆ ಎನ್ನುವುದನ್ನು ದೆಹಲಿ ಚುನಾವಣೆ ಫಲಿತಾಂಸ ನೋಡಿ ಪಕ್ಷಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ದೊರೆಸ್ವಾಮಿ ಹೇಳಿದರು. ರಾಜಕೀಯ ಪಕ್ಷಗಳು ತಮ್ಮ ತಪ್ಪುಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಜನರ ಆಶಯಗಳಿಗೆ ತೆರೆದುಕೊಳ್ಳಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+