ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಆನ್ ಲೈನ್ ನಲ್ಲಿ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ನ.21: ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸರಳ ಸುಲಭವಾಗಿ ವಿಧಾನದ ಬಗ್ಗೆ ವಿವರಣೆ ಇಲ್ಲಿದೆ.

2013-14ರ ಅವಧಿಯಲ್ಲಿ ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು.

2008-09,2009-10,2010-11-12 ಹಾಗೂ ಕಳೆದ ವರ್ಷ ತೆರಿಗೆ ಪಾವತಿಸಿದ ಮಾಹಿತಿ ನಿಮ್ಮ ಬಳಿ ಇದ್ದರೆ ಈ ಬಾರಿಯ ಆಸ್ತಿ ತೆರಿಗೆ ಪಾವತಿ ಸುಲಭವಾಗಲಿದೆ. ಬಿಬಿಎಂಪಿ ವಾರ್ಷಿಕವಾಗಿ ಎರಡು ಬಾರಿ ಪಾವತಿ ಮಾಡುವ ಅವಕಾಶ ನೀಡುತ್ತದೆ.

ಆನ್ ಲೈನ್ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದ್ದು. ಈ ಸೇವೆ ಉಚಿತವಾಗಿದ್ದು, ತೆರಿಗೆ ಪಾವತಿಸಲು ಯಾವುದೇ ಮೊತ್ತ ಪಾವತಿಸಬೇಕಿಲ್ಲ. ಐಡಿಬಿಐ ಬ್ಯಾಂಕ್ ನ ಹಣಪಾವತಿ ಗೇಟ್ ವೇ ಮೂಲಕ ಸುರಕ್ಷಿತವಾಗಿ ಹಣ ಸಂದಾಯ ಮಾಡಬಹುದು. ಹಂತ ಹಂತವಾಗಿ ಆನ್ ಲೈನ್ ಪಾವತಿ ಮಾಹಿತಿಗಾಗಿ ಮುಂದೆ ಓದಿರಿ...step by step ಪೇಮೆಂಟ್ ಮಾಡುವ ವಿಧಾನದ ಬಗ್ಗೆ ನಿರೀಕ್ಷಿಸಿ...

ಆನ್ ಲೈನ್ ತಾಣಕ್ಕೆ ಭೇಟಿ ಕೊಡಿ

ಆನ್ ಲೈನ್ ತಾಣಕ್ಕೆ ಭೇಟಿ ಕೊಡಿ

ಬಿಬಿಎಂಪಿ ಅಧಿಕೃತ ಆನ್ ಲೈನ್ ವೆಬ್ ತಾಣಕ್ಕೆ http://bbmp.gov.in/ ಭೇಟಿ ಕೊಡಿ.ಈ ಸಾಲಿನ ಆಸ್ತಿ ತೆರಿಗೆ ಪಾವತಿಗಾಗಿ ಕ್ಲಿಕ್ ಮಾಡಿ ಎಂದು ಮುಖಪುಟದ ಮೊದಲ ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ

ಇಲ್ಲದಿದ್ದರೆ ನೇರವಾಗಿ ಈ ಪುಟಕ್ಕೆ ಭೇಟಿ ಕೊಡಿ

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ

ಕಳೆದ ಸಾಲಿನ ನಿಮ್ಮ ಆಸ್ತಿ ವಿವರಗಳನ್ನು ನೀವು ತುಂಬಿದ್ದರೆ ಈ ಸಾಲಿನ ಆಸ್ತಿ ತೆರಿಗೆ ಪಾವತಿ ಇನ್ನಷ್ಟು ಸುಲಭವಾಗುತ್ತದೆ. ಆನ್ ಲೈನ್ ಮೂಲಕ ಪಾವತಿಗೆ ನಿರ್ವಹಣಾ ವೆಚ್ಚ ಇರುವುದಿಲ್ಲ. ಡೆಬಿಟ್ /ಕ್ರೆಡಿಟ್ ಕಾರ್ಡ್ ಬಳಸಿ ಐಡಿಬಿಐ ಬ್ಯಾಂಕ್, ಕಾರ್ಪೊರೇಷನ್, ಐಸಿಐಸಿಐ(ನೆಟ್ ಬ್ಯಾಕಿಂಗ್) ಮೂಲಕ ಪಾವತಿ ಮಾಡಬಹುದು.

ಖಾತಾ ನಂಬರ್, ಪಿಐಡಿ ಸಂಖ್ಯೆ ಇದ್ದರೆ ಡಿಡಿ/ನಗಗಿ ಅಥವಾ ಪೇ ಆರ್ಡರ್ ಮೂಲಕ ಕಂದಾಯ ಕಚೇರಿ ಅಥವಾ ಬಿಬಿಎಂಪಿ ಸಹಾಯ ಕೇಂದ್ರಗಳಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡಲಾಗುತ್ತದೆ.

ತೆರಿಗೆ ಕಟ್ಟುವ ಮುನ್ನ

ತೆರಿಗೆ ಕಟ್ಟುವ ಮುನ್ನ

* ಬೆಸ್ಕಾಂ, ಜಲಮಂಡಳಿ ಸಂಪರ್ಕದ ಆರ್ ಆರ್ ನಂಬರ್ ಇಟ್ಟುಕೊಳ್ಳಿ, ಹೆಚ್ಚು ವಿದ್ಯುತ್ ಮೀಟರ್ ಹೊಂದಿದ್ದರೆ ಎಲ್ಲಾ ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ.

* Form IV ( ಕಟ್ಟಡ ಮಾಲೀಕರಿಗೆ) ನಿರ್ಮಿತ ಕಟ್ಟಡದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಈ ಅರ್ಜಿಯನ್ನು ತುಂಬಿಸಿ. ನಿಮ್ಮ ತೆರಿಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ

* ಅರ್ಜಿ ತುಂಬುವ ಮೊದಲು ನಿಯಮಗಳನ್ನು ಓದಿಕೊಳ್ಳಿ. ನಂತರ ಅರ್ಜಿ ತುಂಬಿದ ಮೇಲೆ ನಿಮ್ಮ ಆಸ್ತಿ ತೆರಿಗೆ ಲೆಕ್ಕಚಾರ ವಿವರಗಳು ಲಭ್ಯವಾಗುತ್ತದೆ. ನಂತರ ಪೇಮೆಂಟ್ ಮಾಡಬಹುದು.

ರಿಯಾಯಿತಿ ಇದೆಯಾ?

ರಿಯಾಯಿತಿ ಇದೆಯಾ?

* 30 ಏಪ್ರಿಲ್ 2014ರೊಳಗೆ ಪೂರ್ಣ ವರ್ಷದ ಆಸ್ತಿ ತೆರಿಗೆ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಈ ಸೌಲಭ್ಯ ಪ್ರತಿ ವರ್ಷ ಜಾರಿಯಲ್ಲಿರುತ್ತದೆ.
* ಆಸ್ತಿ ತೆರಿಗೆಯನ್ನು 2 ಕಂತುಗಳಲ್ಲಿ ಕಟ್ಟಬಹುದು. ಮೊದಲ ಆರ್ಧ ವಾರ್ಷಿಕ ಕಂತು ಬಡ್ಡಿ ರಹಿತವಾಗಿ 30 ಮೇ 2014ರೊಳಗೆ ಹಾಗೂ ಎರಡನೇ ಕಂತನ್ನು ಬಡ್ಡಿ ರಹಿತವಾಗಿ 30 ನವೆಂಬರ್ 2014ರೊಳಗೆ ಕಟ್ಟ ಬಹುದು
* ಘನ ತ್ಯಾಜ್ಯ ವಸ್ತು ಉಪಕರ(solid waste cess) ತೆರಿಗೆಗೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ಕಟ್ಟಬೇಕು

ಸಹಾಯವಾಣಿ ಲಭ್ಯ

ಸಹಾಯವಾಣಿ ಲಭ್ಯ

ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಸಹಾಯವಾಣಿ : 65683804/5, 23365007/8

Email: [email protected]

ಆನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತವಿಧಾನವಾಗಿದೆ.

English summary
BBMP now offers tax payers to pay property tax online this year. The good news is that there are no transaction charges for the card users making online payment. Payment gateway facilitated by Banks. Kindly ensure BESCOM & BWSSB connection R.R. Numbers(Meter Number) are available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X