ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ದೂರು ದಾಖಲಿಸುವ ಪಬ್ಲಿಕ್ ಐ ಆಯುಧ ಬಳಸುವುದು ಹೇಗೆ?

ಬೆಂಗಳೂರು ನಗರ ಸಂಚಾರ ಪೊಲೀಸರ ವೆಬ್‌ಸೈಟ್ ಮೂಲಕ ದೂರು ದಾಖಲಿಸುವ ವಿಧಾನ ಈಗ ಹಳೆಯದಾಯಿತು. ಐಚೇಂಜ್ ಸಿಟಿ ಸಹಯೋಗದೊಂದಿಗೆ ಆಂಡ್ರಾಯ್ಡ್ ಆಪ್ ಮೂಲಕ ಸುಲಭವಾಗಿ ಸಾರ್ವಜನಿಕರೂ ಕೂಡಾ ಟ್ರಾಫಿಕ್ ಯೋಧರಾಗಬಹುದು.

By Mahesh
|
Google Oneindia Kannada News

ಎಲ್ಲಾದರೂ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದ್ದು, ಕಂಡು ಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್, ಕ್ಯಾಮರಾಗಳಲ್ಲಿ ಅದರ ದೃಶ್ಯ ಗಳನ್ನು ಸೆರೆ ಹಿಡಿದು ಬೆಂಗಳೂರು ನಗರ ಸಂಚಾರ ಪೊಲೀಸರ ವೆಬ್‌ಸೈಟ್ ಮೂಲಕ ದೂರು ದಾಖಲಿಸುವ ವಿಧಾನ ಈಗ ಹಳೆಯದಾಯಿತು. ಐಚೇಂಜ್ ಸಿಟಿ ಸಹಯೋಗದೊಂದಿಗೆ ಆಂಡ್ರಾಯ್ಡ್ ಆಪ್ ಮೂಲಕ ಸುಲಭವಾಗಿ ಸಾರ್ವಜನಿಕರೂ ಕೂಡಾ ಟ್ರಾಫಿಕ್ ಯೋಧರಾಗಬಹುದು.

ಬೆಂಗಳೂರಿನ ಸಂಚಾರ‌ ಪೊಲೀಸರು ಕೆಲ ವರ್ಷ‌ಗಳ ಹಿಂದೆ ಆರಂಭಿಸಿದ ಸಾರ್ವ‌ಜನಿಕ ಕಣ್ಣು(ಪಬ್ಲಿಕ್‌ ಐ) ಯಶಸ್ವಿಯಾಗಿ ಮೈಸೂರಿಗೂ ವಿಸ್ತರಣೆಯಾಗಿದ್ದು ತಿಳಿದಿರಬಹುದು. ಈಗ ichangemycity.com ಸಿಟಿ ಸಹಯೋಗದೊಂದಿಗೆ ಪಬ್ಲಿಕ್ ಐ ಆಂಡ್ರಾಯ್ಡ್ ಅಪ್ಲಿಕೇಷನ್ ಸುಧಾರಣೆ ಮಾಡಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆಯುವಾಗ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಕ್ಲಿಕ್‌ ಮಾಡಬೇಕು.

ಬಳಿಕ ನಿಯಮ ಉಲ್ಲಂಘಿಸಿದ ವಾಹನ ಸಂಖ್ಯೆ, ಸಂಚಾರ ಉಲ್ಲಂಘನೆಯ ಮಾದರಿ, ದಿನಾಂಕ, ಸಮಯ, ಸ್ಥಳವನ್ನು ನಮೂದಿಸಿ ತೆಗೆದ ಫೋಟೋವನ್ನು ಆಂಡ್ರಾಯ್ಡ್‌ ಆಪ್‌ ಮೂಲಕ ಅಪ್‌ ಲೋಡ್‌ ಮಾಡಿದರೆ ಆಯಿತು. ಸಂಚಾರ ಪೊಲೀಸರು ಈ ಮಾಹಿತಿಯ ಆಧಾರ ಮೇಲೆ ಸವಾರರ ಮೇಲೆ ಕ್ರಮ ಜರುಗಿಸುತ್ತಾರೆ. ಅಪ್ಲಿಕೇಷನ್ ಡೌನ್ ಲೋಡ್ ಲಿಂಕ್ ಇಲ್ಲಿದೆ

ಲಾಗಿನ್ ಆಗಿ ಬಳಸಿ

ಲಾಗಿನ್ ಆಗಿ ಬಳಸಿ

ಒಮ್ಮೆ ಪಬ್ಲಿಕ್ ಐ ಅಪ್ಲಿಕೇಷನ್ ನಿಮ್ಮ ಮೊಬೈಲ್ ನಲ್ಲಿ ಸ್ಥಾಪಿಸಿದ ಬಳಿಕ ಸುಲಭವಾಗಿ ದೂರು ದಾಖಲಿಸಬಹುದು. ಆದರೆ, ಅದಕ್ಕೂ ಮೊದಲು ಇಮೇಲ್ ಬಳಸಿ ಅಥವಾ ಫೇಸ್ ಬುಕ್ ಲಾಗಿನ್ ಬಳಸಿ ಲಾಗಿನ್ ಆಗಬೇಕು. ನಂತರ ಟ್ರಾಫಿಕ್ ಸಂಚಾರ ನಿಯಮ ಉಲ್ಲಂಘನೆಯ ಫೋಟೋ ತೆಗೆದು ಅಪ್ ಲೋಡ್ ಮಾಡಿ

ಏನೆಲ್ಲ ದೂರು ನೀಡಬಹುದು

ಏನೆಲ್ಲ ದೂರು ನೀಡಬಹುದು

1) ನೋ ಪಾರ್ಕಿಂಗ್
2) ಒನ್ ವೇ/ ನೋ ಎಂಟ್ರಿಯಲ್ಲಿ ಸಂಚಾರ
3) ಫುಟ್ ಪಾತ್ ಮೇಲೆ ಪಾರ್ಕಿಂಗ್
4) ಫುಟ್ ಪಾತ್ ಮೇಲೆ ವಾಹನ ಚಲಾಯಿಸುವುದು
5) ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ
6) ಹಾಳಾಗಿರುವ ನಂಬರ್ ಪ್ಲೇಟ್ ಹೊಂದಿರುವುದು
7) ಕಾರಿನಲ್ಲಿ ಸೀಟ್ ಬೆಲ್ಟ್ ಇಲ್ಲದೆ ಸಂಚಾರ
8) TRF ದೀಪದ ಬಳಿ ಅಥವಾ ಜೀಬ್ರಾ ಕ್ರಾಸಿಂಗ್ ನಿಯಮ ಉಲ್ಲಂಘನೆ
9) ಯೂ ಟರ್ನ್ ಇಲ್ಲದ ಕಡೆ ಯೂ ಟರ್ನ್ ತೆಗೆದುಕೊಳ್ಳುವುದು
10) ತ್ರಿಬ್ಬಲ್ ರೈಡಿಂಗ್, ವ್ಹೀಲಿಂಗ್,
11) ಮೊಬೈಲ್ ಫೋನ್ ಬಳಸಿಕೊಂಡು ವಾಹನ ಚಾಲನೆ
12) ಲೇನ್ ನಿಯಮ ಉಲ್ಲಂಘನೆ
13) ಪಾರ್ಕಿಂಗ್ ನಿಯಮ ಉಲ್ಲಂಘನೆ
14) ಕಾರಿನ ಗಾಜಿನ ಕಪ್ಪು ಹೊದಿಕೆ ನಿಯಮ ಉಲ್ಲಂಘನೆ

ಲೋಕೆಷನ್ ಇದ್ದರೆ ಒಳ್ಳೆಯದು

ಲೋಕೆಷನ್ ಇದ್ದರೆ ಒಳ್ಳೆಯದು

ಯಾವ ರೀತಿಯ ನಿಯಮ ಉಲ್ಲಂಘನೆ, ವಾಹನದ ಸಂಖ್ಯೆಯ ಜತೆಗೆ ನಿಯಮ ಉಲ್ಲಂಘನೆಯಾಗಿರುವ ಸ್ಥಳದ ಲೋಕೆಷನ್ ಹಂಚಿಕೊಂಡರೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಒಮ್ಮೆಗೆ ಎರಡು ದೂರು ಸಲ್ಲಿಸಲು ಸಾಧ್ಯವಿದೆ.

ದೂರನ್ನು ಪರಿಶೀಲಿಸಿ

ದೂರನ್ನು ಪರಿಶೀಲಿಸಿ

ಪಬ್ಲಿಕ್ ಐ ಮೂಲಕ ದೂರು ಸಲ್ಲಿಸಿದ ಮೇಲೆ ಏನಾಗಲಿದೆ? ದೂರು ಸಲ್ಲಿಸಿದ 48 ಗಂಟೆಯೊಳಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ದೂರಿನ ಬಗ್ಗೆ ತೆಗೆದುಕೊಂಡ ಕ್ರಮವನ್ನು ನಿಮಗೆ ತಿಳಿಸಲಿದ್ದಾರೆ. ನೀವು ಕೂಡಾ ಐಚೇಂಜ್ ಸಿಟಿ.ಕಾಂ ಮೂಲಕ ದೂರಿನ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಪರಿಶೀಲಿಸಬಹುದು.

ಪಬ್ಲಿಕ್ ಐ ಹಾಗೂ ಸುರಕ್ಷತೆ

ಬೆಂಗಳೂರು ಪೊಲೀಸರು ರಸ್ತೆ ನಿಯಮ, ಸುರಕ್ಷತೆ ಬಗ್ಗೆ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ನೆರವು ಕೂಡಾ ಅತ್ಯಗತ್ಯ

English summary
Bangalore Traffic Police in collaboration with ichangemycity.com launches Public Eye! Spotted a traffic violation? Take a picture/video of the erring vehicle along with its number plate and post it on Public Eye. Download the App now and be a traffic warrior!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X