• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

By ಮಹೇಶ್ ಮಲ್ನಾಡ್
|

ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್, ಫನ್ನಿ ವಿಡಿಯೋ, ನಿಮ್ಮ ಗೆಳಯ ಗೆಳತಿಯ ಸಿಹಿ ಮಾತುಗಳು ಸೇರಿದಂತೆ ಸರಿ ಸುಮಾರು 10 ಬಿಲಿಯನ್ ಗೂ ಅಧಿಕ ಸಂದೇಶಗಳನ್ನು ದಿನವೊಂದರಲ್ಲಿ ನಿಭಾಯಿಸಲ್ಲ ಸಾಮರ್ಥ ವಾಟ್ಸಾಪ್ ಗಿದೆ. ಆದರೆ, ವಾಟ್ಸಾಪ್ ಎಷ್ಟು ಸುರಕ್ಷಿತ? ನಿಮ್ಮ ಸಂದೇಶವನ್ನು ಬೇರೆಯವರು ಕದ್ದು ಓದಬಹುದೆ? ಚಾಟ್ ಇತಿಹಾಸ ಬಹಿರಂಗ ಪಡಿಸಬಹುದೆ? ಸಂದೇಶಗಳ ಸಂರಕ್ಷಣೆ ಹೇಗೆ? ಮುಂದೆ ಓದಿ...

ವಾಟ್ಸಪ್ ಬಳಕೆದಾರರಿಗೆ ಮೊಟ್ಟ ಮೊದಲ ಕಿವಿಮಾತು: ನಿಮ್ಮ ಮೊಬೈಲಿಗೆ ವಾಟ್ಸಪ್ ಅಪ್ಡೇಟ್ ಬಂದಾಗ ತಕ್ಷಣವೇ ಅಪ್ಡೇಟ್ ಮಾಡಿ. ನಿಧಾನ ಮಾಡಿದರೆ ಅಪಾಯಕ್ಕೆ ಆಹ್ವಾನ. ಈಗ ವಾಟ್ಸಪ್ ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸೌಲಭ್ಯವಿದೆ. ಅಂದರೆ ನೀವು ಕಳಿಸುವ ಸಂದೇಶ ಈ ಹಿಂದಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. [ವಾಟ್ಸಪ್ ರಿಪ್ಲೈ, ಉಲ್ಲೇಖ ಸಂದೇಶ ಸೌಲಭ್ಯ ಬಳಕೆ ಹೇಗೆ?]

ಹ್ಯಾಕ್ ಹೇಗೆ ಸಾಧ್ಯ? : ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಪರರ ಕೈಗೆ ಸೇರಿದರೆ, ಕಳ್ಳತನವಾಗಿದ್ದರೆ ಅಥವಾ ನಿಮ್ಮ ವಾಟ್ಸಪ್ ಚಾಟ್ ಹಿಸ್ಟರಿ ಪರರ ಕೈಗೆ ಸಿಕ್ಕರೆ ಮಾತ್ರ ಸಾಧ್ಯ.[ವಾಟ್ಸಪ್ ಮೆಸೇಜ್ ಇನ್ನು ಮುಂದೆ ಕದಿಯಲಾರದ ಸ್ವತ್ತು]

ನಾನು ಎಲ್ಲಾ ಚಾಟ್ ಗಳನ್ನು ಅಳಿಸಿ ಹಾಕಿದ್ದೇನೆ? ಏನ್ಮಾಡ್ತೀರಾ?

ನಿಮ್ಮ ಚಾಟಿಂಗ್ ಬಾಕ್ಸ್ ನಲ್ಲಿ ಸಂದೇಶಗಳನ್ನು ಕ್ಲಿಯರ್ ಮಾಡಿದರೂ ಅದೆಲ್ಲವೂ ಮೊಬೈಲ್ ನಲ್ಲಿ ಒಂದು ಕಡೆ ಭದ್ರವಾಗಿ ಸೇವ್ ಆಗಿರುತ್ತದೆ. ಈ ಸೇವ್ ಆದ ಫೈಲ್ ಸಿಕ್ಕರೆ ನಿಮ್ಮ ಗುಟ್ಟು ರಟ್ಟಾಗುತ್ತದೆ.[ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?]

ನನ್ನ ಸಂದೇಶಗಳು ಎಲ್ಲಿ ಸ್ಟೋರ್ ಆಗುತ್ತದೆ

ಸಾಮಾನ್ಯವಾಗಿ ವಾಟ್ಸಪ್ ಸಂದೇಶಗಳು File Manager>>Internal Memory(sd card)>>WhatsApp>>Databases ಫೋಲ್ಡರ್ ನಲ್ಲಿರುತ್ತದೆ. ನಿಮ್ಮ ವಾಟ್ಸಪ್ ಅಪ್ಡೇಟ್ ಆಗಿಲ್ಲದಿದ್ದರೆ ಸಂದೇಶಗಳು msgstore.db ಎಂದು ಸ್ಟೋರ್ ಆಗಿರುತ್ತದೆ. ಈ ಫೈಲ್ ಸಿಕ್ಕರೆ ಸುಲಭವಾಗಿ ನಿಮ್ಮ ಜಾತಕ ಬಿಚ್ಚಿಡಬಹುದು. [ವಾಟ್ಸಪ್ ಗೆ ಕಾಸು ಕೊಡಬೇಕಾಗಿಲ್ಲ, ಮಜಾ ಮಾಡಿ]

ನನ್ನ ಫೈಲ್ ನಿಮಗೆ ಕೊಡುತ್ತೀನಿ ಅದು ಹೇಗೆ ವಿವರಿಸಿ?

ಮೇಲ್ಕಂಡ ತಾಣದಲ್ಲಿ ಸೇವ್ ಆಗಿರುವ msgstore.db ಸಿಕ್ಕ ಮೇಲೆ ಆ ಫೈಲ್ ಅನ್ನು, recoverymessages.com ಗೆ ಭೇಟಿ ಕೊಟ್ಟು ಅಲ್ಲಿ ಹಾಕಿ. ಚೆಕ್ ಬಾಕ್ಸ್ ಒತ್ತಿ, ಕೆಲ ಸೆಕೆಂಡುಗಳಲ್ಲಿ ಚಾಟ್ ಹಿಸ್ಟರಿ ಎಲ್ಲವೂ ನಿಮ್ಮ ಪರದೆ ಮೇಲೆ ಕಾಣಿಸುತ್ತದೆ.

ಗಮನಿಸಿ ಈ ವೆಬ್ ತಾಣ ಸರ್ಕಾರಿ ತಾಣವಾಗಿದ್ದು, ಎಲ್ಲೋ ಕದ್ದ ಡಾಟಾಬೇಸ್ ಇಲ್ಲಿ ಹಾಕಿ ಕಂಡಕಂಡವರ ಚಾಟ್ ಹಿಸ್ಟರಿ ನೋಡುವ ಆಸೆ ಇದ್ದರೆ ಹುಷಾರು, ನಿಮ್ಮ ಬ್ರೌಸರ್ ಐಪಿ ಮೂಲಕ ನಿಮ್ಮ ಜಾತಕ ಬಹಿರಂಗವಾಗುತ್ತದೆ[ಮದ್ವೆಯಾದ 4 ವಾರಕ್ಕೆ ವಾಟ್ಸಪ್ ಮೂಲಕ ತಲಾಖ್]

ಅಯ್ಯೋ ಈಗೇನು ಮಾಡಲಿ?

ಚಿಂತೆ ಬೇಡ, ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಥವಾ ವಾಟ್ಸಪ್ ನಿಂದ ಇತ್ತೀಚಿನ ಆವೃತ್ತಿಯ ವಾಟ್ಸಪ್ ಪಡೆದುಕೊಳ್ಳಿ, ಅಥವಾ ನಿಮ್ಮ ಮೊಬೈಲಿನಲ್ಲಿರುವ ವಾಟ್ಸಪ್ ಅನ್ನು ಅಪ್ಗ್ರೇಡ್ ಮಾಡಿಕೊಳ್ಳಿ.[ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?]

ಅಪ್ಗ್ರೇಡ್ ನಿಂದ ಏನು ಪ್ರಯೋಜನ?

ಇದರಿಂದ ಮೇಲೆ ಹೇಳಿದಂತೆ ಸಂದೇಶಗಳು msgstore.db ಬದಲಾಗಿ msgstore.db.crypt7 ಎಂದು ಬದಲಾಗಿರುತ್ತದೆ. ಏನಿದು ಕ್ರಿಪ್ಟ್ -ಇದು ನಿಮ್ಮ ಸಂದೇಶಗಳನ್ನು ಗುಪ್ತಮಾದರಿಯಲ್ಲಿ ಶೇಖರಿಸಿಟ್ಟು ಸಂದೇಶಗಳನ್ನು ರಕ್ಷಿಸುತ್ತದೆ.[ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್ ಗೆ ರಿಯಾಯಿತಿ]

ಕ್ರಿಪ್ಟ್ ಅದ ಸಂದೇಶ ಕದ್ದು ನೋಡಲು ಸಾಧ್ಯವೇ?

msgstore.db.crypt7 ಅಥವಾ ಎಕ್ಸ್ ಟೇನ್ಶನ್ crypt8,9 ಎಂದು ಇರುವ ಡಾಟಾಬೇಸ್ ಗಳನ್ನು ಮೇಲೆ ಹೇಳಿದಂತೆ recoverymessage.com ವೆಬ್ ಸೈಟ್ ಬಳಸಿ ಸುಲಭವಾಗಿ ಚಾಟ್ ಹಿಸ್ಟರಿ ಹೊರತೆಗೆಯಲು ಆಗುವುದಿಲ್ಲ. ಆದರೆ, ಕ್ರಿಪ್ಟ್ ಆದ ಫೈಲ್ ಗಳನ್ನು ನಾರ್ಮಲ್ ಡಾಟಾಬೇಸ್ ಆಗಿ ಪರಿವರ್ತಿಸಿದರೆ(msgstore.db ರೀತಿ) ವೆಬ್ ಸೈಟ್ ಬಳಸಿ ಸುಲಭವಾಗಿ ಸಂದೇಶ ಹೊರ ತೆಗೆಯಬಹುದು.

ಕ್ರಿಪ್ಟ್ ಸಂದೇಶ ಕನ್ವರ್ಟ್ ಮಾಡುವುದು ಹೇಗೆ?

WhatsApp Crypt DB converter ಎಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಷನ್ ಲಭ್ಯವಿದೆ. ಇದನ್ನು ಇನ್ ಸ್ಟಾಲ್ ಮಾಡಿಕೊಂಡು Crypt ಆದ ಫೈಲ್ ಗಳನ್ನು De crypt ಮಾಡಿ msgstore.db ರೀತಿ ಫೈಲ್ ಪಡೆದುಕೊಳ್ಳಬಹುದು. ಗಮನಿಸಿ: crpty DB ಅಪ್ಲಿಕೇಷನ್ ಗಳು ರೂಟೆಡ್ ಮೊಬೈಲ್ ಫೋನ್ ಗಳಲ್ಲಿ ಮಾತ್ರ ವರ್ಕ್ ಆಗುತ್ತದೆ. ಅಥವಾ ಲಿನಾಕ್ಸ್ ಬೆಂಬಲಿತ ಓಎಸ್ ಇದ್ದು ನಿಮಗೆ ಅಡ್ಮಿನ್ ಪರ್ಮಿಷನ್ ಇರಬೇಕು. ಇಲ್ಲದಿದ್ದರೆ ಕನ್ವರ್ಟ್ ಮಾಡಲು ಸಾಧವಿಲ್ಲ.

-

-

-

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ಒಟ್ಟಾರೆ, ನನ್ನ ಚಾಟ್ ಯಾರು ಕದಿಯಬಾರದು, ಮೊಬೈಲ್ ಕಳೆದು ಹೋದರು ಸೇಫ್ ಇರಬೇಕು, ಇದು ಸಾಧ್ಯವೇ?

ಸಾಧ್ಯ. ವಾಟ್ಸಪ್ ನಲ್ಲಿ ನಿಮಗೆ ಬೇಕಾದ ಸಂದೇಶವನ್ನು ನಿಮ್ಮ ಮೈಲ್ ಬಾಕ್ಸ್ ಗೆ ರವಾನಿಸಿಕೊಳ್ಳಿ, ಅಥವಾ settings>>Chat>>Chat backup ಒತ್ತಿ, ಜೊತೆಗೆ ಚಾಟ್ ಹಿಸ್ಟರಿ ಕೂಡಾ ಅಕ್ರೈವ್ ಮಾಡಿಕೊಳ್ಳಿ. [ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್ ಗೆ ರಿಯಾಯಿತಿ]

ಅಥವಾ ನನಗೆ ಯಾವ ಸಂದೇಶಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕಾಗಿಲ್ಲ ಎಂದೆನಿಸಿದರೆ ಎಲ್ಲವನ್ನು ಡಿಲೀಟ್ ಮಾಡಿ. ಅದರೆ, ಇದು ಒಂದು ಹಂತದ ಸುರಕ್ಷತೆ ಅಷ್ಟೆ. [ಮದ್ವೆಯಾದ 4 ವಾರಕ್ಕೆ ವಾಟ್ಸಪ್ ಮೂಲಕ ತಲಾಖ್]

ಇದಾದ ಬಳಿಕ ನಿಮ್ಮ ಮೊಬೈಲಿನಲ್ಲಿ File Manager>>Internal Memory(sd card)>>WhatsApp>>Databases ಫೋಲ್ಡರ್ ಗೆ ಹೋಗಿ ಅಲ್ಲಿ ಕಾಣುವ msgstore.db ಅಥವಾ msgstore.db.Crypt8 ಫೈಲ್ ಗಳನ್ನು ಡಿಲೀಟ್ ಮಾಡಿ ನೆಮ್ಮದಿಯಿಂದಿರಿ. ಈಗ ನಿಮ್ಮ ಫೋನ್ ಪರರ ಪಾಲಾದರೂ ನಿಮ್ಮ ವಾಟ್ಸಪ್ ಚಾಟ್ ಸಂದೇಶ ಯಾರು ಕದ್ದು ನೋಡಲು ಆಗುವುದಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to Protect your WhatsApp Chat History? How to convert crypted file in to normal database file? How to check chat history? How to safeguard the entire messages of WhatsApp? Here is the step by step method.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more