ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?
ಬೆಂಗಳೂರು, ಏಪ್ರಿಲ್ 03: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಸಂಗ್ರಹ ಕಾರ್ಯ ಏಪ್ರಿಲ್ 01ರಿಂದಲೇ ಆರಂಭವಾಗಿದೆ. ಏ.30ರೊಳಗೆ ಪಾವತಿಸಿದರೆ 5% ರಿಯಾಯಿತಿ ಸಿಗಲಿದೆ. ಸುಲಭವಾಗಿ ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವ ವಿಧಾನ ಇಲ್ಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಆಸ್ತಿ ತೆರಿಗೆ ಪಾವತಿಸುವ ಮುನ್ನ ಈ ಅಂಶಗಳನ್ನು ನೆನಪಿಡಿ:
* ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬಹುದಾಗಿದೆ.
* ಪಾಲಿಕೆ ಕಚೇರಿಗಳಲ್ಲಿ 1000 ರೂ.ವರೆಗೆ ಮಾತ್ರ ನಗದು ಪಾವತಿಸಬಹುದಾಗಿದ್ದು, ಅದಕ್ಕಿಂತ ಹೆಚ್ಚು ಮೊತ್ತವಿದ್ದರೆ ಡಿ.ಡಿ ಮೂಲಕ ಸಲ್ಲಿಸಬೇಕು.
* ಆನ್‌ಲೈನ್ ಮೂಲಕ 5 ಸಾವಿರ ರೂ. ಮೇಲ್ಪಟ್ಟು ಆಸ್ತಿತೆರಿಗೆ ಪಾವತಿಸುವವರು ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.
* ಒಂಬತ್ತು ಬ್ಯಾಂಕ್ ಗಳು, 91 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಸಹಾಯಕ ಕಂದಾಯಾಧಿಕಾರಿ ಕಚೇರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.
* ಮೇ 31 ರವರೆಗೆ ದಂಡವಿಲ್ಲದೆ ಪಾವತಿಸಬಹುದಾಗಿದ್ದು, ಜೂ.1 ರಿಂದ ಶೇ.2 ದಂಡ ವಿಧಿಸಲಾಗುತ್ತದೆ.
* ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕೆನರಾ ಬ್ಯಾಂಕ್ ಶಾಖೆಯಲ್ಲಿ ನಗದು, ಡಿ.ಡಿ ಅಥವಾ ಪೇ-ಆರ್ಡರ್ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

ಆನ್ ಲೈನ್ ಪಾವತಿಗೂ ಮುನ್ನ ಗಮನಿಸಿ:
* ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ.
* ಸಹಾಯವಾಣಿ : +9108065683804/5, +9108023365007/8.
Email: [email protected]
* ಆನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತ ವಿಧಾನವಾಗಿದೆ.
ಪಾವತಿ ವಿಧಾನ ಹೀಗಿದೆ:
* ಬಿಬಿಎಂಪಿಯ bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿಸಲು ಮೊದಲು ಪ್ರವೇಶ ಪಡೆಯಿರಿ
* ಕ್ರೆಡಿಟ್/ಡೆಬಿಟ್ ಕಾರ್ಡ್ ಅಥಾ ನೆಟ್ ಬ್ಯಾಂಕಿಂಗ್ ವಿಧಾನ ಆಯ್ಕೆ ಮಾಡಿಕೊಳ್ಳಿ.
* ನಗದು/ಡಿಡಿ/ ಚೆಕ್ ಪಾವತಿಯಾದರೆ, ಚಲನ್ ಬಟನ್ ಕ್ಲಿಕ್ ಮಾಡಿ.
* ಮೂಲ SAS ಅರ್ಜಿ ಸಂಖ್ಯೆ ಅಥವಾ PID ಸಂಖ್ಯೆಯನ್ನು ನಮೂದಿಸಿ.
* ಕಲಂ 3ನಲ್ಲಿ ಏನಾದರೂ ಬದಲಾವಣೆ ವೃತ್ತಿ/ವಯಸ್ಸು/ದೂರವಾಣಿ ಸಂಖ್ಯೆ/ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ
* ಕಲಂ 1,2 ಹಾಗೂ 4 ಬದಲಾಯಿಸಲು ಆಗುವುದಿಲ್ಲ.
* ಬೆಸ್ಕಾಂ, ಬಿಡಬ್ಲ್ಯೂ ಎಸ್ಎಸ್ ಬಿ ಆರ್ ಆರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ
* ಕಲಂ 5ಎ ಹಾಗೂ 5ಬಿ ನಲ್ಲಿ ವಲಯವಾರು ಮಾಹಿತಿ ನೀಡಿ, ವಸತಿ/ವಾಣಿಜ್ಯ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಿ.
* ಇದೇ ರೀತಿ ಕಲಂ 7, 8ಯಲ್ಲಿ ನಿಮ್ಮ ಆಸ್ತಿ ವಿವರಗಳನ್ನು ತುಂಬಿ
* ಕಲಂ 9ರಲ್ಲಿ ಆಸ್ತಿ ಮೇಲೆ ಯಾವುದೇ ವ್ಯಾಜ್ಯ, ಕಟ್ಲೆ ಇದ್ದರೆ ನಮೂದಿಸಿ.
* ಕಲಂ 10 ರಲ್ಲಿ ಆಸ್ತಿ ತೆರಿಗೆ ರಿಟರ್ನ್ಸ್ ಬಗ್ಗೆ ಹಾಗೂ ಕಲಂ 11ರಲ್ಲಿ ವಸತಿಯೇತರ ಕಟ್ಟಡ ರಿಟರ್ನ್ಸ್ ಬಗ್ಗೆ ಮಾಹಿತಿ ಸಿಗಲಿದೆ.
* ಕಲಂ 17 ಒಟ್ಟಾರೆ ಪಾವತಿಬೇಕಾದ ಆಸ್ತಿ ತೆರಿಗೆ ಮೊತ್ತ ಸಿಗಲಿದೆ.











Click it and Unblock the Notifications