ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ ಕೈಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?

By ಒನ್ಇಂಡಿಯಾ ಸಿಬ್ಬಂದಿ
|
Google Oneindia Kannada News

ಬೆಂಗಳೂರು, ಡಿ. 13 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆಯ ಪರವಾಗಿ @shamiwitness ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ 'ಶಂಕಿತ ಉಗ್ರ' ಮೆಹದಿ ಮಸ್ರೂರ್ ಬಿಸ್ವಾಸ್ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಹಲವಾರು ಆಘಾತಕಾರಿ ಮಾಹಿತಿ ಬಯಲು ಮಾಡುವ ಸಾಧ್ಯತೆಯಿದೆ.

ಐಎಸ್ಐಎಸ್ ಪರವಾಗಿ ಕಳೆದ ಎರಡು ವರ್ಷಗಳಿಂದ ಮಹದಿ ಟ್ವೀಟ್ ಮಾಡುತ್ತಿದ್ದುದು ಬಹಿರಂಗವಾಗುತ್ತಿದ್ದಂತೆ, ಕ್ರೈಂ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮತ್ತು ಡಿಸಿಪಿ (ಕ್ರೈಂ) ಅಭಿಷೇಕ್ ಗೋಯೆಲ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಆತನನ್ನು ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪನಗರದಲ್ಲಿರುವ ಅಪಾರ್ಟ್ಮೆಂಟಿನಲ್ಲಿ ಶನಿವಾರ ಬೆಳಗಿನ ಜಾವ ಬಂಧಿಸಲಾಗಿದೆ.

ಆತ ಬೆಂಗಳೂರಿನಿಂದ ಟ್ವೀಟ್ ಮಾಡುತ್ತಿದ್ದಾನೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಆತನ ಕುರಿತು ಎಲ್ಲ ಮಾಹಿತಿ ಸಂಗ್ರಹಕ್ಕೆ ತನಿಖಾದಳ ಮುಂದಾಗಿದೆ. 2012ರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಆತ ಬೆಂಗಳೂರಿನ ಉತ್ತರ ಭಾಗದಲ್ಲಿ ವಾಸವಿರುವುದು ಪತ್ತೆ ಹಚ್ಚಿದ್ದಾರೆ. ಕೆಲವೇ ದಿನಗಳ ಹಿಂದೆ ಮೆಹದಿ ತಾಯಿ ಕೂಡ ಬೆಂಗಳೂರಿಗೆ ಬಂದು ಹೋಗಿದ್ದರು.

ನಂತರ ಕೋಲ್ಕತಾದಲ್ಲಿ ಹೋಮಿಯೋಪತಿ ವೈದ್ಯರಾಗಿರುವ ಆತನ ತಂದೆಯನ್ನು ಸಂಪರ್ಕಿಸಿ, 25 ವರ್ಷದ ಟೆಕ್ಕಿ ಮೆಹದಿಯ ಮತ ಗುರುತಿನ ಚೀಟಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಇತರ ಮಾಹಿತಿ ಸಂಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಿಂದ ಆತ ನಾಪತ್ತೆಯಾಗಿದ್ದರೂ, ತಾನು @shamiwitness ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿರುವುದಾಗಿ ಸ್ನೇಹಿತನಿಗೆ ತಿಳಿಸಿದ ಮಹತ್ವದ ಮಾಹಿತಿ ತನಿಖಾದಳಕ್ಕೆ ಸಿಕ್ಕಿದೆ. [ಬೆಂಗಳೂರು ಪೊಲೀಸ್ ವಶದಲ್ಲಿ ಮೆಹದಿ]

How Mehdi Masroor Biswas caught by Agencies in Bengaluru

ಸಾಯಲು ಹೆದರಿದ ಮೆಹದಿ ಶರಣಾಗಲು ಮುಂದಾದ

ಇನ್ನೇನು ಪರಾರಿಯಾಗಲು ಸಾಧ್ಯವೇ ಇಲ್ಲ ಎಂಬುದು ಮನವರಿಕೆಯಾದಾಗ, ಮತ್ತೊಮ್ಮೆ ಸಂದರ್ಶನ ನಡೆಸಿದ ಚಾನಲ್ 4ಗೆ ಮತ್ತು ತನಿಖಾದಳಕ್ಕೆ, ತಾನು ಸಾಯಲು ಸಿದ್ಧವಿಲ್ಲ, ಶರಣಾಗಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾನೆ. ತನ್ನನ್ನು ಎನ್‌ಕೌಂಟರ್ ಮಾಡಬಹುದು ಎಂಬ ಶಂಕೆ ವ್ಯಕ್ತವಾಗಿ, ತನ್ನ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಮತ್ತು ಪೊಲೀಸರಿಗೆ ಒಪ್ಪಿಸಿಕೊಳ್ಳಲು ಸಿದ್ಧ ಎಂದು ಗೋಗರೆದಿದ್ದಾನೆ.

ಮೊದಲಿಗೆ, ತನಗೂ @shamiwitness ಟ್ವಿಟ್ಟರ್ ಖಾತೆದೂ ಸಂಬಂಧವಿಲ್ಲ, ಟ್ವಿಟ್ಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರೂ, ತನಿಖೆಯ ಸಂದರ್ಭದಲ್ಲಿ ಐಎಸ್ಐಎಸ್ ಪರವಾಗಿ ತಾನು ಟ್ವೀಟ್ ಮಾಡಿದ್ದು ಒಪ್ಪಿಕೊಂಡಿದ್ದು, ತನಗೂ ಐಎಸ್ಐಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾನೆ. ['ಟ್ವಿಟ್ಟರ್' ಉಗ್ರನ ರಹಸ್ಯ ಬಯಲು]

ಸಿಕ್ಕಿಬೀಳಿಸಿದ ತದ್ವಿರುದ್ಧ ಹೇಳಿಕೆಗಳು

ರಾಷ್ಟ್ರೀಯ ತನಿಖಾದಳ ನಡೆಸಿದ ವಿಚಾರಣೆಯಲ್ಲಿ, ಐಎಸ್ಐಎಸ್ ಜೊತೆ ತಾನು ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ, ಉಗ್ರರನ್ನು ನೇಮಕ ಮಾಡಿಕೊಳ್ಳಲು ಯಾವುದೇ ಸಹಾಯ ಮಾಡಿಲ್ಲ, @shamiwitness ತನ್ನ ಖಾತೆ ಅಲ್ಲವೇ ಅಲ್ಲ, @ElSaltador ಟ್ವಿಟ್ಟರ್ ಖಾತೆ ತನ್ನದಾಗಿದ್ದು, Elsaltador@gmail ಈಮೇಲ್ ವಿಳಾಸ ಮಾತ್ರ ಬಳಸುತ್ತಿರುವುದಾಗಿ ಹೇಳಿದ್ದ.

ಆದರೆ, ಖಾತೆಗೆ ಯಾರೋ ಕನ್ನ ಹಾಕಿದ್ದಾರೆ ಎಂಬ ತಿಪ್ಪೆಸಾರುವ ಹೇಳಿಕೆಯನ್ನು ತನಿಖಾದಳ ನಂಬಲಿಲ್ಲ. ಮೆಹದಿ ಮಸ್ರೂರ್ ಬಿಸ್ವಾಸ್ ಫೇಸ್ ಬುಕ್ ಖಾತೆ ನಕಲಿಯಾಗಿರಲಿಲ್ಲ. ಅಲ್ಲಿದ್ದ ತನ್ನ ಚಿತ್ರ ಎಲ್ಲೆಡೆ ಹರಿದಾಡಲು ಪ್ರಾರಂಭಿಸಿದಾಗ ಅದನ್ನು ಕೂಡ ಮುಚ್ಚಲು ಯತ್ನಿಸಿದ್ದ. ಮತ್ತೊಂದು ಸಂಗತಿಯೇನೆಂದರೆ, @ElSaltador ಖಾತೆಯಲ್ಲಿ shamiwitness.blogspot.com ಕುರಿತು ನಮೂದಿಸಲಾಗಿತ್ತು. ಅದನ್ನು ಕ್ಲಿಕ್ಕಿಸಿದಾಗ @shamiwitness ಖಾತೆಗೆ ಹೋಗುತ್ತಿದ್ದರಿಂದ ಇದರ ಹಿಂದಿನ ವ್ಯಕ್ತಿ ಮೆಹದಿ ಮಸ್ರೂರ್ ಬಿಸ್ವಾಸ್‌ನೇ ಎಂಬುದು ಮನವರಿಕೆಯಾಯಿತು.

ಈ ನಡುವೆ, ಕೋಲ್ಕತಾದಲ್ಲಿರುವ ಮೆಹದಿಯ ಅಪ್ಪ, "ಮಗನನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ. ಜಿಹಾದಿ ಚಟುವಟಿಕೆಯಲ್ಲಿ ಆತ ಭಾಗಿಯಾಗಿದ್ದಾನೆ ಎಂದರೆ ನಂಬಲೇ ಸಾಧ್ಯವಿಲ್ಲ. ಆತನ ಜೊತೆ ಬೆಂಗಳೂರಿನಲ್ಲಿಯೇ ಹಲವಾರು ತಿಂಗಳು ಕಳೆದಿದ್ದೇನೆ. ಅಂತಹ ಯಾವ ಚಟುವಟಿಕೆಯನ್ನೂ ಆತ ನಡೆಸಿಲ್ಲ. ಆತ ನಿರಪರಾಧಿ" ಎಂದು ಹೇಳಿಕೆ ನೀಡಿದ್ದಾರೆ. [ಮೆಹದಿ ಕುರಿತು ಮತ್ತಷ್ಟು ವಿವರಗಳು]

ಮೆಹದಿ ಬಂಡವಾಳ ಬಯಲಾದದ್ದು ಹೀಗೆ

ಮೊದಲಿಗೆ ಚಾನಲ್ 4 ಪತ್ರಕರ್ತರು, ತಾವು ಬ್ರಿಟಿಷ್ ಹೋರಾಟಗಾರರಾಗಿದ್ದು, ಆತನ ಕೆಲಸವನ್ನು ತುಂಬಾ ಮೆಚ್ಚಿಕೊಂಡಿದ್ದೇವೆ ಎಂದು ಉಬ್ಬಿಸಿ ಆತನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಪತ್ರಕರ್ತರ ಮಾತಿನ ವೈಖರಿಗೆ ಮರುಳಾದ ಮೆಹದಿ, ತಾನು ಬೆಂಗಳೂರಿನಿಂದಲೇ ಟ್ವಿಟ್ಟರ್ ನಿರ್ವಹಿಸುತ್ತಿರುವ, ತನ್ನ ಮೂಲ ಪಶ್ಚಿಮ ಬಂಗಾಳದಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಕಡೆಗೆ ತಾನಾಗಿಯೇ ಎಲ್ಲ ವಿವರಗಳನ್ನು ಸಾರಿ ಸಿಕ್ಕಿಬಿದ್ದಿದ್ದಾನೆ.

English summary
It was no rocket science after all for the agencies to get Mehdi Masroor Biswas the man alleged to have run the @shammiwitness account for the ISIS. Agencies did thorough research, collected lot of information and arrested him after inquiry in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X