• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಉಚಿತ ಪ್ರಯಾಣ ಮಾಡಿದವರೆಷ್ಟು?

|
Google Oneindia Kannada News

ಬೆಂಗಳೂರು, ಆಗಸ್ಟ್‌ 16: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣದ ಕೊಡುಗೆಯನ್ನು ಬಿಎಂಟಿಸಿ ಒದಗಿಸಿತ್ತು. ಪ್ರಯಾಣದ ಕೊಡುಗೆ ಬಳಸಿಕೊಂಡ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಪ್ರಯಾಣ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರಯಾಣಿಕರಿಗೆ ತನ್ನ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತ್ತಿದ್ದು, ಬರೋಬ್ಬರಿ 35 ಲಕ್ಷ ಮಂದಿ ಪ್ರಯಾಣವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಾಕಷ್ಟು ಬಸ್‌ಗಳ ಕೊರತೆ ಇರುವುದು ಮುಖ್ಯವಾಗಿ ಗಮನಕ್ಕೆ ಬಂದಿದೆ.

ಬೆಂಗಳೂರಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಟ್ರಾಫಿಕ್ ಹೇಗಿರುತ್ತೆ?ಬೆಂಗಳೂರಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಟ್ರಾಫಿಕ್ ಹೇಗಿರುತ್ತೆ?

ಪ್ರಮುಖ ಬಸ್ ನಿಲ್ದಾಣ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ, ಕೆ.ಆರ್. ಮಾರುಕಟ್ಟೆಯಲ್ಲಿ ನೂರಾರು ಮಂದಿ ಬಸ್ ಗಳಿಗಾಗಿ ಕಾದು ನಿಂತಿದ್ದರು. ಕೆ.ಆರ್. ಮಾರುಕಟ್ಟೆಯಲ್ಲಿ ತಾಳ್ಮೆ ಕಳೆದುಕೊಂಡ ಜನಸಮೂಹ ಆಟೋ ರಿಕ್ಷಾಗಳನ್ನು ಹುಡುಕಲು ಯತ್ನಿಸಿದ್ದರಿಂದ ಹಲವು ಮಾರ್ಗಗಳಿಗೆ ಬಸ್‌ಗಳು ಸಮರ್ಪಕವಾಗಿ ದೊರಕಲಿಲ್ಲ ಎಂಬ ಮಾತು ಜನರಲ್ಲಿ ಕೇಳಿ ಬಂದಿತು.

ಸೋಮವಾರದಂದು ಪ್ರಯಾಣಿಕರ ಸಂಖ್ಯೆ 35 ಲಕ್ಷ ದಾಟಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಅಧಿಕಾರಿಗಳು ತಿಳಿಸಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಅಂದಾಜಿನ ದಿನದ 50 ಲಕ್ಷಕ್ಕೆ ಹೋಲಿಸಿದರೆ ಈ ಸಂಖ್ಯೆಯು ದೊಡ್ಡದಾಗದಿದ್ದರೂ, ವಾರದ ದಿನದ ಸರಾಸರಿ 27 ಲಕ್ಷ ಇದೆ. ಲಾಕ್‌ಡೌನ್ ನಂತರದ ಅವಧಿಯಲ್ಲಿ ಇದು ಒಂದು ರೀತಿಯ ದಾಖಲೆಯನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೆ ಬಿಎಂಟಿಸಿ ಬಸ್ಸು ಹತ್ತಿಸುವ ಉದ್ದೇಶ

ಮತ್ತೆ ಬಿಎಂಟಿಸಿ ಬಸ್ಸು ಹತ್ತಿಸುವ ಉದ್ದೇಶ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಟ್ಟುಕೊಂಡು ಬಿಎಂಟಿಸಿಯ ಈ ಪ್ರಯೋಗವು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಜನರನ್ನು ಆಕರ್ಷಿಸುವ ಗುರಿಯನ್ನು ಹೊಂದಿತ್ತು. ವಿಶೇಷವಾಗಿ ಬಿಎಂಟಿಸಿ ಸೇವೆಗಳನ್ನು ಬಳಸಿಕೊಳ್ಳದವರನ್ನು ಮತ್ತೆ ಬಸ್ಸು ಹತ್ತಿಸುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ, ನಗರದಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ಗಳು ಮಧ್ಯಾಹ್ನದ ವೇಳೆಯೂ ತುಂಬಿ ತುಳುಕುವಂತಿತ್ತು.

Breaking: ಸ್ವಾತಂತ್ರ್ಯ ಅಮೃತ ಮಹೋತ್ಸವ: ಆ.15ರಂದು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿBreaking: ಸ್ವಾತಂತ್ರ್ಯ ಅಮೃತ ಮಹೋತ್ಸವ: ಆ.15ರಂದು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ

ಬಸ್‌ ಬೇಡಿಕೆಯಲ್ಲಿ ಪ್ರಮುಖ ಏರಿಕೆ

ಬಸ್‌ ಬೇಡಿಕೆಯಲ್ಲಿ ಪ್ರಮುಖ ಏರಿಕೆ

ಈ ಕೊಡುಗೆಗೆ ಜನರ ಅಗಾಧ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ರಜಾದಿನವಾಗಿದ್ದರಿಂದ, ಉಚಿತ ಸೇವೆಯು ಬೇಡಿಕೆಯಲ್ಲಿ ಪ್ರಮುಖ ಏರಿಕೆಗೆ ಕಾರಣವಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು. ಬಸ್‌ಗಳಲ್ಲಿ ಇಂತಹ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಬಸ್‌ಗಳು ಮತ್ತು ಸಿಬ್ಬಂದಿಯ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನಾಕರ್ಷಣೆಯ ಕೇಂದ್ರಗಳಲ್ಲಿ ಜನವೋ ಜನ

ಜನಾಕರ್ಷಣೆಯ ಕೇಂದ್ರಗಳಲ್ಲಿ ಜನವೋ ಜನ

ಸ್ವಾತಂತ್ರ್ಯ ದಿನಾಚರಣೆಯೂ ಸೇರಿದಂತೆ ಹಿಂದಿನ ಮೂರು ದಿನದ ಸಾಲು ರಜೆಯೂ ಜನರು ಸಂಚಾರ ಕಡಿಮೆಯಾಗಬಹುದು ಎಂದು ಬಿಎಂಟಿಸಿ ಸಂಸ್ಥೆ ನಿರೀಕ್ಷಿಸಿತ್ತು. ಆದರೆ ಜನರು ಸಾಲು ರಜೆಗಳನ್ನು ವಿಳಂಬವಾಗಿದ್ದ ಕೆಲಸಗಳು ಮತ್ತು ಮತ್ತಷ್ಟು ನಗರವನ್ನು ಕಣ್ತುಂಬಿಕೊಳ್ಳಲು ಬಳಸುತ್ತಾರೆ ಎಂದು ಯಾರು ಅನಿಸಿರಲಿಲ್ಲ. ನಗರದ ಪ್ರಮುಖ ಜನಾಕರ್ಷಣೆಯ ಕೇಂದ್ರಗಳು, ಮಾಲ್‌ಗಳು, ಸಿನಿಮಾ ಮಂದಿರಗಳು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ನಿಲ್ದಾಣಗಳಲ್ಲಿ ಅಕ್ಷರಶಃ ಜನರ ಸಮೂಹ

ನಿಲ್ದಾಣಗಳಲ್ಲಿ ಅಕ್ಷರಶಃ ಜನರ ಸಮೂಹ

ಜನರು ಪ್ರಮುಖ ನಿಲ್ದಾಣಗಳಲ್ಲಿ ಕಾದು ಕಾದು ನಿಂತೇ ಇದ್ದದ್ದು ಎಲ್ಲೆಲ್ಲೂ ಕಂಡು ಬಂದಿತ್ತು. ಶಿವಾಜಿನಗರ, ಮೆಜಸ್ಟಿಕ್‌, ಯಶವಂತಪುರ ಹಾಗೂ ಬೆಂಗಳೂರು ಹೊರವಲಯ ಸೇರುವ ಬಹುತೇಕ ನಿಲ್ದಾಣಗಳು ಅಕ್ಷರಶಃ ಜನರ ಸಮೂಹದಿಂದ ಕಂಡುಬಂದವು ಬೆಂಗಳೂರಿಗೆ ಮೂರು ದಿನಗಳ ರಜೆ ಮುಗಿಸಿ ಬರುವವರ ಸಂಖ್ಯೆಯು ಅಧಿಕವಾಗಿತ್ತು. ಹೀಗಾಗಿ ಬಸ್‌ಗಳು ಜನರಿಗೆ ಸಾಲದೆ ಹೋದದ್ದು ಸುಳ್ಳಲ್ಲ. ಆದ್ದರಿಂದ ಜನರೇ ಸಿಕ್ಕ ಸಿಕ್ಕ ವಾಹನಗಳು ಆಟೋ, ಕ್ಯಾಬ್‌, ಖಾಸಗಿ ಸಾರಿಗೆ ವಾಹನಗಳ ಮೊರೆಹೋಗಿದ್ದರು. ಅಂತೂ ತಮ್ಮ ಮನೆ ಮುಟ್ಟುವಲ್ಲಿ ಹರಸಾಹಸಪಟ್ಟರು.

English summary
On the occasion of Independence Day, BMTC announced on Monday the offer of free bus travel. Number of passengers have traveled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X