ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ QR ಟಿಕೆಟ್‌ಗೆ ಭರ್ಜರಿ ಬೇಡಿಕೆ, ಎಷ್ಟು ಟಿಕೆಟ್‌ ಮಾರಾಟ?

|
Google Oneindia Kannada News

ಬೆಂಗಳೂರು, ನವೆಂಬರ್‌ 2: ಬೆಂಗಳೂರಿನ ನಮ್ಮ ಮೆಟ್ರೋಗೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವುದರ ಮೂಲಕ ಟಿಕೆಟ್‌ ಖರೀದಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಮೊದಲನೇ ದಿನ (ನವೆಂಬರ್ 1) ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಖರೀದಿಸುವ ಟಿಕೆಟ್‌ ಸೇವೆಗೆ ಮೊದಲ ದಿನವಾದ ಮಂಗಳವಾರ ಸುಮಾರು 2,000 ಪ್ರಯಾಣಿಕರು ನಮ್ಮ ಮೆಟ್ರೋ ಆಪ್‌ ಮತ್ತು ವಾಟ್ಸಾಪ್‌ನಲ್ಲಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ನವೆಂಬರ್ 1 ರಿಂದ, ಪ್ರಯಾಣಿಕರು ಏಕಮುಖ ಪ್ರಯಾಣದ ಟಿಕೆಟ್‌ಗಳನ್ನು ಖರೀದಿಸಲು ಮತ್ತು ಸ್ಮಾರ್ಟ್‌ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮೆಟ್ರೋ ನಿಲ್ದಾಣಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ಕಾಯುವುದು ಮತ್ತು ಕೌಂಟರ್‌ನಲ್ಲಿ ಬದಲಾವಣೆಗಾಗಿ ಪರದಾಡುವುದು ಕಡಿಮೆಯಾಗಿತ್ತು.

ನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿ

ಪ್ರಯಾಣಿಕರು ಮಟ್ರೋ ಟಿಕೆಟ್‌ ಖರೀದಿಸಲು ನಮ್ಮ ಮೆಟ್ರೋ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬಹುದು ಅಥವಾ ವಾಟ್ಸಾಪ್‌ ಚಾಟ್‌ಬಾಟ್ ಸಂಖ್ಯೆಯನ್ನು (810 555 66 77) ಅನ್ನು ಬಳಸಬಹುದು. ನಮ್ಮ ಮೆಟ್ರೋ ಅಥವಾ ವಾಟ್ಸಾಪ್ ಬಳಸಿ ಪಾವತಿಗಳನ್ನು ಮಾಡಬಹುದು. ಇದಕ್ಕೆ ಬಳಕೆದಾರರು ಟೋಕನ್ ದರದಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನೂ ಪಡೆಯುತ್ತಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಪ್ರಕಾರ, ಮಂಗಳವಾರ ರಾತ್ರಿ 8.45 ರವರೆಗೆ 1,669 ಪ್ರಯಾಣಿಕರು ನಮ್ಮ ಮೆಟ್ರೋ ಅಪ್ಲಿಕೇಶನ್ ಮತ್ತು ವಾಟ್ಸಾಪ್ ಮೂಲಕ ಕ್ಯೂಆರ್‌ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಒಟ್ಟು 14,400 ಜನರು ವಾಟ್ಸಾಪ್ ಚಾಟ್‌ಬಾಟ್ ಬಳಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

Namma Metro: ಆರ್‌.ವಿ.ರಸ್ತೆ- ಬೊಮ್ಮಸಂದ್ರ 'ಹಳದಿ ಮಾರ್ಗ'ದಲ್ಲಿ ಶೀಘ್ರವೇ ಸಂಚಾರNamma Metro: ಆರ್‌.ವಿ.ರಸ್ತೆ- ಬೊಮ್ಮಸಂದ್ರ 'ಹಳದಿ ಮಾರ್ಗ'ದಲ್ಲಿ ಶೀಘ್ರವೇ ಸಂಚಾರ

ಟಿಕೆಟ್‌ ಖರೀದಿಸಲು ಸರತಿಯಲ್ಲಿ ನಿಲ್ಲಬೇಕಿಲ್ಲ

ಟಿಕೆಟ್‌ ಖರೀದಿಸಲು ಸರತಿಯಲ್ಲಿ ನಿಲ್ಲಬೇಕಿಲ್ಲ

ಬೆಂಗಳೂರು ಮೆಟ್ರೋದ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 5.5 ಲಕ್ಷ. ಮುಂದಿನ ವರ್ಷದ ಆರಂಭದಲ್ಲಿ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮಾರ್ಗವು ತೆರೆದ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಈಗ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದರಿಂದ ಈಗ ಮುಕ್ತವಾಗಬಹುದಾಗಿದೆ. ನಮ್ಮ ಮೆಟ್ರೋ ಆಪ್‌ ಇಲ್ಲವೇ ವಾಟ್ಸಾಪ್ ಮೂಲಕ ನೇರವಾಗಿ ಒಂದೇ ಪ್ರಯಾಣದ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸಲು ಈಗ ಸಾಧ್ಯವಾಗುತ್ತದೆ.

ಆನ್‌ಲೈನ್‌ ಟಿಕೆಟ್‌ ಖರೀದಿಸುವ ವಿಧಾನ

ಆನ್‌ಲೈನ್‌ ಟಿಕೆಟ್‌ ಖರೀದಿಸುವ ವಿಧಾನ

ಈ ಮೂಲಕ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ವಾಟ್ಸಾಪ್‌ನಲ್ಲಿ ಎಂಡ್ ಟು ಎಂಡ್ ಕ್ಯೂಆರ್‌ ಟಿಕೆಟಿಂಗ್ ಅನ್ನು ಸಕ್ರಿಯಗೊಳಿಸುವ ವಿಶ್ವದ ಮೊದಲ ಸಾರಿಗೆ ಸಂಸ್ಥೆಯಾಗಿದೆ. ಕ್ಯೂಆರ್‌ ಟಿಕೆಟ್‌ಗಳನ್ನು ಹೇಗೆ ಖರೀದಿಸಬಹುದು ಎಂಬ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಅಪ್ಲಿಕೇಶನ್ ಅನ್ನು ಪ್ರಯಾಣಿಕರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಟಿಕೆಟ್‌ಗಳನ್ನು ಖರೀದಿಸಲು ತಮ್ಮನ್ನು ನೋಂದಾಯಿಸಿಕೊಳ್ಳಬೇಕು.

ಹತ್ತುವ ಹಾಗೂ ಇಳಿಯುವ ಸ್ಥಳ ಆಯ್ಕೆ ಮಾಡಿ

ಹತ್ತುವ ಹಾಗೂ ಇಳಿಯುವ ಸ್ಥಳ ಆಯ್ಕೆ ಮಾಡಿ

ಬಿಎಂಆರ್‌ಸಿಎಲ್‌ನ ಅಧಿಕೃತ ವಾಟ್ಸಾಪ್‌ ಚಾಟ್‌ಬಾಟ್ ಸಂಖ್ಯೆ 8105556677 ಅನ್ನು ಸೇವ್‌ ಮಾಡಿ ಮತ್ತು ಕ್ಯೂಆರ್‌ ಟಿಕೆಟ್‌ಗಳನ್ನು ಖರೀದಿಸಲು ಅಥವಾ ಮೆಟ್ರೋ ಪ್ರಯಾಣದ ಪಾಸ್‌ಗಳನ್ನು ರೀಚಾರ್ಜ್ ಮಾಡಲು ಅದಕ್ಕೆ ಹಾಯ್ ಎಂದು ಕಳುಹಿಸಬೇಕು. ನಂತರ ಪ್ರಯಾಣದ ಮೆಟ್ರೋ ಹತ್ತು ಸ್ಥಳ ಹಾಗೂ ಇಳಿಯುವ ಸ್ಥಳದ ವಿವರಗಳನ್ನು ಆಯ್ಕೆ ಮಾಡಿದ ನಂತರ ಯುಪಿಐ ಪಿನ್‌ ನಂಬರ್‌ನೊಂದಿಗೆ ವಹಿವಾಟನ್ನು ದೃಢೀಕರಿಸುವ ಮೂಲಕ ನೀವು ವಾಟ್ಸಾಪ್‌ ಪಾವತಿ ಆಯ್ಕೆಯ ಮೂಲಕ ಪಾವತಿಸಬಹುದು.

ಸ್ವಯಂಚಾಲಿತ ಗೇಟ್‌ಗಳಲ್ಲಿ ಕ್ಯೂಆರ್ ರೀಡರ್‌

ಸ್ವಯಂಚಾಲಿತ ಗೇಟ್‌ಗಳಲ್ಲಿ ಕ್ಯೂಆರ್ ರೀಡರ್‌

ವಾಟ್ಸಾಪ್‌ ಚಾಟ್‌ಬಾಟ್ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎರಡಲ್ಲೂ ಲಭ್ಯವಿದೆ. ಪ್ರಯಾಣಿಕರು ನಮ್ಮ ಮೆಟ್ರೋ ಆಪ್‌ ಅಥವಾ ವಾಟ್ಸಾಪ್‌ನಲ್ಲಿ ಕ್ಯೂಆರ್ ಟಿಕೆಟ್ ಅನ್ನು ಪ್ರಯಾಣದ ದಿನದಂದು ಹತ್ತುವ ಹಾಗೂ ಇಳಿಯುವ ನಿಲ್ದಾಣಗಳನ್ನು ನಿರ್ದಿಷ್ಟವಾಗಿ ಆಯ್ಕೆ ಮೂಲಕ ಖರೀದಿಸಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಸ್ವಯಂಚಾಲಿತ ಗೇಟ್‌ಗಳ ಕ್ಯೂಆರ್ ರೀಡರ್‌ಗಳು ಹತ್ತು ಹಾಗೂ ಇಳಿಯುವ ಎರಡೂ ನಿಲ್ದಾಣಗಳಲ್ಲಿ ಸ್ಕ್ಯಾನ್ ಮಾಡಬೇಕು.

English summary
The system of purchasing tickets by scanning the QR code has been launched for our Metro in Bengaluru and has received a good response on the first day (Nov 1).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X