ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಷಾರ್ ಕಣ್ರಿ: ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಹೀಗೇ ಹೇಳೋದಾ ಜೊಮ್ಯಾಟೋ?

|
Google Oneindia Kannada News

ಬೆಂಗಳೂರು, ನವೆಂಬರ್ 1: ನಮ್ಮ ಸೇವೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಅನ್ನೋದು ಫುಡ್ ಡೆಲಿವೆರಿ ಕಂಪನಿಗಳ ಸರ್ವೇ ಸಾಮಾನ್ಯ ಡೈಲಾಗ್. ಆದರೆ ಅದೇ ಪುಡ್ ಡೆಲಿವೆರಿ ಕಂಪನಿ ಬಗ್ಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿರುವ ವಿಮರ್ಶೆ(ಕಾಮೆಂಟ್) ಅನ್ನು ಸ್ವತಃ ಕಂಪನಿಯೇ ಅಳಿಸಿ ಹಾಕಿದೆ ಎಂದು ವರದಿಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಕುಳಿತಲ್ಲೇ ಜನರಿಗೆ ಆಹಾರ ತಲುಪಿಸುವ ಸಾಕಷ್ಟು ಡೆಲಿವೆರಿ ಕಂಪನಿಗಳಿವೆ. ಅದೇ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಜೊಮ್ಯಾಟೋ ಕಂಪನಿಯು ಮಹಿಳಾ ಗ್ರಾಹಕರು ತಾವು ಸ್ವೀಕರಿಸಿದ ಆಹಾರದ ಕುರಿತು ಬರೆದಿರುವ ವಿಮರ್ಶೆಯನ್ನು ಅಳಿಸಿ ಹಾಕಿದೆ ಎಂದು ಸ್ವತಃ ಮಹಿಳೆಯೇ ಆರೋಪಿಸಿದ್ದಾರೆ.

ವಿಳಂಬವಾದ ಡಿಲೆವರಿ, ಜೊಮ್ಯಾಟೋ, ಸ್ವಿಗ್ಗಿ ವಿರುದ್ಧ ಟ್ವೀಟ್ಸ್ವಿಳಂಬವಾದ ಡಿಲೆವರಿ, ಜೊಮ್ಯಾಟೋ, ಸ್ವಿಗ್ಗಿ ವಿರುದ್ಧ ಟ್ವೀಟ್ಸ್

ಜೊಮ್ಯಾಟೋ ಡೆಲಿವೆರಿ ಬಾಯ್ ನೀಡಿದ ಆಹಾರ ಸೇವಿಸಿದ ನಂತರದಲ್ಲಿ ಮಹಿಳೆ ಮಾಡಿದ ಆ ವಿಮರ್ಶೆಯಲ್ಲಿ ಏನಿತ್ತು?, ಕೋರಮಂಗಲದ ಅದೊಂದು ರೆಸ್ಟೋರೆಂಟ್ ನಿಂದ ತರಿಸಿಕೊಂಡ ಆಹಾರ ಗುಣಮಟ್ಟ ಯಾವ ರೀತಿ ಇತ್ತು?, ಜೊಮ್ಯಾಟೋ ಹುಡುಗ ನೀಡಿದ ಆಹಾರ ತಿಂದ ಮಹಿಳೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಿದ್ದೇನು?, ಸ್ವತಃ ಜೊಮ್ಯಾಟೋ ಕಂಪನಿಯು ಮಹಿಳೆಯ ಕಾಮೆಂಟ್ ಅನ್ನು ಡಿಲೀಟ್ ಮಾಡಿದ್ದು ಏಕೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ. ಬೆಂಗಳೂರಿಗರೇ ಎಚ್ಚರಿಕೆ ವಹಿಸಿ.

ಕೋರಮಂಗಲ ರೆಸ್ಟೋರೆಂಟ್ ಆಹಾರದ ಗುಣಮಟ್ಟದ ಬಗ್ಗೆ ಕಾಮೆಂಟ್

ಕೋರಮಂಗಲ ರೆಸ್ಟೋರೆಂಟ್ ಆಹಾರದ ಗುಣಮಟ್ಟದ ಬಗ್ಗೆ ಕಾಮೆಂಟ್

ಬೆಂಗಳೂರು ಮೂಲದ ದಿಶಾ ಸಾಂಘ್ವಿ, ಕೋರಮಂಗಲದ ಖಾಸಗಿ ರೆಸ್ಟೋರೆಂಟ್ ನಿಂದ ಆಹಾರವನ್ನು ಆರ್ಡರ್ ಮಾಡಿದ್ದರು. ಅದೇ ಆರ್ಡರ್ ಅನ್ನು ಜೊಮ್ಯಾಟೋ ಹುಡುಗನೊಬ್ಬ ತಂದು ಕೊಟ್ಟಿದ್ದನು. ಈ ಆಹಾರದ ಗುಣಮಟ್ಟವು ಸರಿಯಾಗಿರಲಿಲ್ಲ. ಆಹಾರವನ್ನು ಸೇವಿಸಿದ ನಂತರದಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಮಹಿಳೆಯು ಕಾಮೆಂಟ್ ಹಾಕಿದ್ದರು. ಅಲ್ಲದೇ ತಮ್ಮ ಸಹದ್ಯೋಗಿಗಳು ಸಹ ಈ ಹಿಂದೆ ಅದೇ ರೆಸ್ಟೋರೆಂಟ್ ಫುಡ್ ಆರ್ಡರ್ ಮಾಡಿದ್ದರು. ಅವರಲ್ಲಿಯೂ ಸಹ ಇದೇ ರೀತಿ ಅನಾರೋಗ್ಯದ ತೊಂದರೆ ಕಾಣಿಸಿಕೊಂಡಿತ್ತು ಎಂದು ಮಹಿಳೆಯು ಉಲ್ಲೇಖಿಸಿದ್ದಾರೆ.

ಜೊಮ್ಯಾಟೋದಿಂದ ಮಹಿಳೆ ಕಾಮೆಂಟ್ ಡಿಲೀಟ್ ಆಗಿದ್ದೇಕೆ?

ಜೊಮ್ಯಾಟೋ ಕಂಪನಿಯು ಯಾಕೆ ಅದೊಂದು ಕಾಮೆಂಟ್ ಅನ್ನು ಡಿಲೀಟ್ ಮಾಡಿದೆ ಎಂಬುದನ್ನು ಸ್ಪಷ್ಟನೆಯ ಸಂದೇಶವನ್ನು ದಿಶಾ ಸಾಂಘ್ವಿರಿಗೆ ಕಳುಹಿಸಿದೆ. ಅದೇ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿರುವ ಮಹಿಳೆಯು ಕಂಪನಿಯು ಉಲ್ಲೇಖಿಸಿದ ಅಂಶವನ್ನು ಟ್ವೀಟ್ ಮಾಡಿದ್ದಾರೆ.

ಮಹಿಳೆ ದಿಶಾ ಸಾಂಘ್ವಿಗೆ ಜೊಮ್ಯಾಟೋ ಕಳುಹಿಸಿರುವ ಸಂದೇಶದಲ್ಲಿ ಪ್ರಮುಖ ಅಂಶವೊಂದನ್ನು ತಿಳಿಸಿದೆ. ಅನಾರೋಗ್ಯ ಸಮಸ್ಯೆ ಎದುರಿಸಿದ ಬಗ್ಗೆ ಪ್ರಸ್ತಾಪಿಸುವುದಕ್ಕೆ ಇದು ಉತ್ತಮ ವೇದಿಕೆಯಲ್ಲ ಎಂದು ಕಂಪನಿ ತಿಳಿಸಿದೆ. "ಜೊಮ್ಯಾಟೋದ ವೇದಿಕೆಯಲ್ಲಿ ಗ್ರಾಹಕರು ಮಾಡುವ ವಿಮರ್ಶೆಗಳನ್ನು ನಾವು ಪ್ರತಿನಿತ್ಯ ಪರಿಶೀಲನೆ ಮಾಡುತ್ತೇವೆ. ಈ ವೇಳೆಯಲ್ಲಿ ಮಹಿಳೆಯ ವಿಮರ್ಶೆಯು ಕಂಡು ಬಂದಿದ್ದು, ಅದರಲ್ಲಿ ನಮ್ಮ ಮಾರ್ಗಸೂಚಿಗಳ ಉಲ್ಲಂಘನೆ ಆಗಿದೆ. ಆದ್ದರಿಂದ ಅದೊಂದು ವಿಮರ್ಶೆಯನ್ನು ಆರೋಗ್ಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ತೆಗೆದು ಹಾಕಲಾಗಿದೆ," ಎಂದು ಜೊಮ್ಯಾಟೋ ತಿಳಿಸಿದೆ.

ಬೆಂಗಳೂರಿನ ಮಹಿಳೆಗೆ ಮೇಲ್ ಮಾಡಿದ ಜೊಮ್ಯಾಟೋ!

ಬೆಂಗಳೂರಿನ ಮಹಿಳೆಗೆ ಮೇಲ್ ಮಾಡಿದ ಜೊಮ್ಯಾಟೋ!

ಎಲ್ಲ ರೀತಿಯ ಅಭಿಪ್ರಾಯಗಳನ್ನು ನಾವು ಸ್ವಾಗತಿಸುತ್ತೇವೆ. ಅದು ಆಹಾರದ ಗುಣಮಟ್ಟವು ಉತ್ತಮವಾಗಿದೆಯೇ, ಕೆಟ್ಟದಾಗಿದೆಯೇ ಅಥವಾ ಕೊಳಕಾಗಿದೆಯೇ ಎಂಬುದನ್ನು ಗುರುತಿಸಿಕೊಳ್ಳುವುದಕ್ಕೆ ನಮಗೆ ಸಹಾಯವಾಗುತ್ತದೆ. ಇದರಿಂದ ನಿಮ್ಮ ಮತ್ತು ನಮ್ಮ ನಡುವಿನ ವಹಿವಾಟು ಮತ್ತಷ್ಟು ಉಪಯೋಗಕರವಾಗಿ ಇರುತ್ತದೆ. ಆದರೆ ಈ ಹಂತದಲ್ಲಿ ಜೊಮ್ಯಾಟೋ ನೀಡುವ ಆಹಾರದ ಬಗ್ಗೆ ಕಾಮೆಂಟ್ ಮಾಡುವಾಗ ಕೆಲವು ನಿಬಂಧನೆಗಳನ್ನು ಹೊಂದಿರುತ್ತೇವೆ. ನಮ್ಮ ವಿಮರ್ಶೆ ಮಾರ್ಗಸೂಚಿಯ ಪ್ರಕಾರ, ಆರೋಗ್ಯ ಕಾಯ್ದೆಯ ಉಲ್ಲಂಘನೆಗಳನ್ನು ವರದಿ ಮಾಡಲು ಜೊಮ್ಯಾಟೋ ಸೂಕ್ತ ವೇದಿಕೆಯಲ್ಲ. ಈ ವಿಷಯವನ್ನು ತನಿಖೆ ಮಾಡುವ ಸಂಬಂಧಿತ ಅಧಿಕಾರಿಗಳಿಗೆ ಈ ನಿರ್ದಿಷ್ಟ ವಿಷಯವನ್ನು ಉತ್ತಮವಾಗಿ ವರದಿ ಮಾಡಲಾಗಿದೆ ಎಂದು ನಾವು ನಂಬುತ್ತೇವೆ. ಈ ಕಾರಣದಿಂದ, ನಿಮ್ಮ ವಿಮರ್ಶೆಯನ್ನು ಅಳಿಸಲಾಗಿದೆ," ಎಂದು ಜೊಮ್ಯಾಟೋ ಹೇಳಿದೆ.

ಜೊಮ್ಯಾಟೋಗೆ ಸೋಷಿಯಲ್ ಮೀಡಿಯಾದಲ್ಲಿ ಮಂಗಳಾರತಿ

ಜೊಮ್ಯಾಟೋಗೆ ಸೋಷಿಯಲ್ ಮೀಡಿಯಾದಲ್ಲಿ ಮಂಗಳಾರತಿ

ದಿಶಾ ಸಾಂಘ್ವಿರಿಗೆ ಪ್ರತ್ಯೇಕವಾಗಿ ಸಂದೇಶವೊಂದನ್ನು ಕಳುಹಿಸಿರುವ ಜೊಮ್ಯಾಟೋ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆರ್ಡರ್ ಐಡಿ ಅನ್ನು ನಮಗೆ ಕಳುಹಿಸಿ, ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತೇವೆ ಎಂದು ಹೇಳಿದೆ. ಈ ಸಂದೇಶದ ಬಗ್ಗೆಯೂ ಮಹಿಳೆಯು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜೊಮ್ಯಾಟೋ ವಿರುದ್ಧ ಗ್ರಾಹಕರು ಛೀಮಾರಿ ಹಾಕಿದ್ದಾರೆ.

"ಸಾರ್ವಜನಿಕರು ತಮಗೆ ಆಗಿರುವ ಅನುಭವಗಳ ಬಗ್ಗೆ ಕಾಮೆಂಟ್ ಮಾಡಬಾರದು, ಅದು ನಿಮ್ಮ ಮಾರ್ಗಸೂಚಿಗಳಿಗೆ ವಿರುದ್ಧವಾಗಿರುತ್ತದೆ ಎಂದರೆ ನಿಮಗೆ ಯಾವ ರೀತಿಯ ಕಾಮೆಂಟ್ ಹಾಕಬೇಕು," ಎಂದು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದಾರೆ.

"ಹಲೋ ಜೊಮ್ಯಾಟೋ, ನಿಶ್ಚಿತವಾಗಿ ನಾನು ಇಂಥ ಕಾಮೆಂಟ್ ಅನ್ನು ಎದುರು ನೋಡುತ್ತೇನೆ. ಒಂದು ವೇಳೆ ಆಹಾರದ ಗುಣಮಟ್ಟವು ಸಾಮಾನ್ಯವಾಗಿದ್ದರೆ, ಅದನ್ನು ಅಲ್ಲಿಗೆ ಬಿಟ್ಟು ಬಿಡಬಹುದು. ಆದರೆ, ಅದೇ ಆಹಾರದಿಂದ ಗ್ರಾಹಕರ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎಂದರೆ ಅದನ್ನು ಖಂಡಿತವಾಗಿಯೂ ನಾನು ಹೈಲೇಟ್ ಮಾಡಿ ಹೇಳಬೇಕಾಗುತ್ತದೆ. ಇದಕ್ಕೆ ಜೊಮ್ಯಾಟೋ ಇಲ್ಲದಿದ್ದರೆ, ರೆಸ್ಟೋರೆಂಟ್ ಕಂಪನಿಯವರೇ ಉತ್ತರಿಸಬಹುದಲ್ಲವೇ," ಎಂದು ಪ್ರಶ್ನೆ ಮಾಡಿದ್ದಾರೆ.

English summary
How Bengaluru Woman Face Health problems after eat food Delivered by Zomato boy; here read company reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X