ಬೆಂಗಳೂರಿನ ಈ ಪ್ರದೇಶಗಳ ಅಪಾರ್ಟ್‌ಮೆಂಟ್‌ನಲ್ಲಿ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ಸಿಗುತ್ತವೆ ಫ್ಲಾಟ್‌ಗಳು!

ಕೊರೊನಾ ಬಳಿಕ ಮತ್ತೆ ಎಲ್ಲವೂ ಮಾಮೂಲಿ ಸ್ಥಿತಿಗೆ ಬಂದಿದೆ, ಬೆಂಗಳೂರಿನಲ್ಲಿ ಪರಿಸ್ಥಿತಿ ಬದಲಾಗಿದೆ. ಇಷ್ಟುದಿನ ಖಾಲಿ ಖಾಲಿ ಇದ್ದ ಮನೆಗಳಿಗೆ ಈಗ ಭರ್ಜರಿ ಡಿಮ್ಯಾಂಡ್ ಕೂಡ ಬಂದಿದೆ. 'ಕೊರೊನಾ' ಬಂದಾಗ 5-10 ಸಾವಿರದ ಒಳಗೆ ಇದ್ದ ಮನೆ ಬಾಡಿಗೆ ಈಗ ಮತ್ತೆ ಮುಗಿಲು ಮುಟ್ಟಿದೆ. ಹೀಗಿದ್ದಾಗ ಜನ ಅಪಾರ್ಟ್‌ಮೆಂಟ್ & ಫ್ಲಾಟ್‌ಗಳಲ್ಲಿ ವಾಸ ಮಾಡಲು ಬಯಸುತ್ತಾರೆ, ಹಾಗಾದರೆ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಕಡಿಮೆ ಬಾಡಿಗೆಗೆ ಈ ರೀತಿ ಫ್ಲಾಟ್ ಸಿಗುತ್ತವೆ ಗೊತ್ತಾ?

ಬೆಂಗಳೂರು 'ಐಟಿ' ತವರು ಎಂಬ ಹೆಗ್ಗಳಿಕೆ ಪಡೆದ ನಗರ. ಬೆಂಗಳೂರು ಅಂದ್ರೆ ಮಂಡ್ಯ ಟು ಇಂಡಿಯಾ ಮಾತ್ರವಲ್ಲ, ಅಮೆರಿಕ ಟು ಆಸ್ಟ್ರೇಲಿಯಾ ಕೂಡ ಸದ್ದು ಮಾಡುತ್ತೆ. ಹೀಗೆ ನಮ್ಮ ಬೆಂಗಳೂರಿನ ಹೆಮ್ಮೆಯನ್ನು ಮುಗಿಲೆತ್ತರಕ್ಕೆ ಹಾರಿಸಲು ಹಲವರ ಕೊಡುಗೆಯು ಇದೆ. ಬೆಂಗಳೂರು ಬೆಳೆಯುತ್ತಿದ್ದಂತೆ ಬಾಡಿಗೆ ದರ ಕೂಡ ಹೆಚ್ಚುತ್ತಾ ಹೋಗಿದೆ. ಆದರೂ ನಿಮಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕಡಿಮೆ ಬಾಡಿಗೆಗೆ ಫ್ಲಾಟ್ ಸಿಗುತ್ತವೆ, ಅವು ಯಾವುವು..? ಅನ್ನೋ ಪ್ರಶ್ನೆಗೆ ಉತ್ತರ ಹುಡುಕೋಣ ಮುಂದೆ ಓದಿ.

Housing Rents Of The Flats In Different Areas Of The Bengaluru

ಪೂರ್ವ ಬೆಂಗಳೂರಿನಲ್ಲಿ ಎಷ್ಟು?

ಬೆಂಗಳೂರು ಸಾಕಷ್ಟು ದೊಡ್ಡದಾಗಿ ಬೆಳೆದ ಕಾರಣ, ಸುತ್ತಮುತ್ತಲೂ ಇರುವ ಹಳ್ಳಿಗಳನ್ನೂ ತನ್ನ ಒಡಲಿಗೆ ಸೇರಿಸಿಕೊಂಡಿದೆ. ಹೀಗೆ ಪೂರ್ವ ಬೆಂಗಳೂರಿನಲ್ಲಿ ಅಭಿವೃದ್ಧಿ ಹೊಂದಿರುವ ಉಪನಗರಗಳು, ಕೆಆರ್ ಪುರ, ಬೂದಿಗೆರೆ ಕ್ರಾಸ್, ವರ್ತೂರು ಸೇರಿದಂತೆ ಈ ಸುತ್ತಮುತ್ತಲು ದೊಡ್ಡ ಪ್ರಮಾಣದಲ್ಲಿ ಐಟಿ ಕಂಪನಿಗಳು ಇವೆ. ಈ ಪ್ರದೇಶದಲ್ಲಿ ಇದೀಗ, ಸುಮಾರು 20 ರಿಂದ 25 ಸಾವಿರ ರೂಪಾಯಿ ತನಕ 2 ಬಿಎಚ್‌ಕೆ ಫ್ಲಾಟ್‌ಗಳು ಬಾಡಿಗೆಗೆ ದೊರೆಯುತ್ತವೆ. ಅಂದರೆ 2 ಬೆಡ್ ರೂಂ ಇರುವ ಫ್ಲಾಟ್‌ಗಳಿಗೆ ಇಷ್ಟು ಬಾಡಿಗೆ ಇದೆ. ಬೆಂಗಳೂರು ನಗರಕ್ಕೆ ಹೋಲಿಕೆ ಮಾಡಿದರೆ ಇದು ಅತಿ ಕಡಿಮೆ ವೆಚ್ಚ ಎನ್ನಬಹುದು.

ಬೆಂಗಳೂರು ಕೇಂದ್ರ ಭಾಗದಲ್ಲಿ?

ಮೊದಲೇ ಹೇಳಿದಂತೆ ಸಿಲಿಕಾನ್ ಸಿಟಿ ಬೆಂಗಳೂರು ಭಾರಿ ದೊಡ್ಡದಾಗಿ, ಅಭಿವೃದ್ಧಿಯನ್ನು ಹೊಂದಿದೆ. ಹೀಗಾಗಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅಪಾರ್ಟ್‌ಮೆಂಟ್ ಫ್ಲಾಟ್ ಬಾಡಿಗೆ, ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಬೆಂಗಳೂರು ಕೇಂದ್ರ ಪ್ರದೇಶದಲ್ಲಿ ಅಂದ್ರೆ ಉದಾಹರಣೆ ಕೊಟ್ಟು ಹೇಳುವುದಾದರೆ, ಫ್ರೇಜರ್ ಟೌನ್, ಬಾಣಸವಾಡಿ, ಲಿಂಗರಾಜಪುರ, ಕಾಕ್ಸ್ ಟೌನ್ ಸೇರಿ ಬೆಂಗಳೂರು ಕೇಂದ್ರ ಭಾಗದಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳು 20,000 ರಿಂದ ಸುಮಾರು 35,000 ತನಕ ಬಾಡಿಗೆ ಹೊಂದಿವೆ. ಹಾಗೆಯೇ 3 ಬಿಎಚ್‌ಕೆ ಫ್ಲಾಟ್‌ಗಳು ಬಾಡಿಗೆಗೆ 40,000 ದಿಂದ 50,000 ತನಕ ಇವೆ.

ದಕ್ಷಿಣ ಬೆಂಗಳೂರಿನಲ್ಲಿ ಬಾಡಿಗೆ ದರ

ಕರ್ನಾಟಕದ ಹೆಮ್ಮೆಯ ನಗರ & ಕನ್ನಡಿಗರ ರಾಜಧಾನಿ ಬೃಹತ್ ಆಗಿ ಬೆಳೆದು ನಿಲ್ಲುತ್ತಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಅಭಿವೃದ್ಧಿ ಅತಿ ವೇಗವಾಗಿ ಸಾಗುತ್ತಿದೆ. ಹೀಗೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲೀಗ 2 ಬಿಎಚ್‌ಕೆ ಫ್ಲಾಟ್‌ಗಳು, 25,000ಕ್ಕಿಂತ ಕಡಿಮೆ ವೆಚ್ಚದಲ್ಲಿ ಸಿಗುತ್ತವೆ. ಹಾಗೇ 3 ಬಿಎಚ್‌ಕೆ ಫ್ಲಾಟ್‌ಗಳ ಬಾಡಿಗೆ ಕೂಡ 30,000ದ ಒಳಗೆ ಇರುತ್ತದೆ. ಇದರ ಜೊತೆಗೆ ಉತ್ತಮ ನೈಸರ್ಗಿಕ ವಾತಾವರಣ ಕೂಡ ಈ, ಪ್ರದೇಶದಲ್ಲಿ ನಾವು ಕಾಣಬಹುದು ಅಂತಾರೆ ಜನರು. ಅದರಲ್ಲೂ ವರ್ಕ್ ಫ್ರಂ ಹೋಂಗೆ ಬ್ರೇಕ್ ಬಿದ್ದ ನಂತರ ಬಾಡಿಗೆ ದರ ಏರಿಕೆ ಕಾಣುತ್ತಲೇ ಇದೆ.

ಹೀಗೆ ಬೆಂಗಳೂರಿನ ವಿವಿಧೆಡೆ ವಿವಿಧ ಬೆಲೆಗೆ ಫ್ಲಾಟ್‌ಗಳು ಬಾಡಿಗೆಗೆ ಸಿಗುತ್ತವೆ. ಅದರಲ್ಲೂ ಬೆಂಗಳೂರಿನ ಹೊರಭಾಗ ಅಂದ್ರೆ ಈಗ ತಾನೆ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲೀಗ ಬಾಡಿಗೆ ದರವು ಕೊಂಚ ಕಡಿಮೆ ಎನ್ನಬಹುದು. ಹಾಗೇ ಮುಂದಿನ ದಿನಗಳಲ್ಲಿ ಇಲ್ಲಿ ಕೂಡ ಬಾಡಿಗೆ ದರ ವಿಪರೀತ ಹೆಚ್ಚಾದರೂ ಆಶ್ಚರ್ಯ ಇಲ್ಲ ಬಿಡಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+