ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಇವರಿಬ್ಬರೇ ಮುಖ್ಯ ಕಾರಣ
Recommended Video
ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ, ಬಿಕ್ಕಟ್ಟಿಗೆ, ಶಾಸಕರ ಅಸಮಾಧಾನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಗುಡುಗಿದ್ದಾರೆ. ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಅವರೇ ಇಷ್ಟೆಲ್ಲ ನಾಟಕಕ್ಕೆ ಕಾರಣ ಎಂದಿದ್ದಾರೆ.
'ಅವರೇನು 120 ಜನ ಗೆದ್ದಿದ್ದಾರೇನು ಜೆಡಿಎಸ್ ನವರು, ಅವರು ತಿಳಿದುಕೊಂಡು ನಡೆಸಿಕೊಂಡು ಹೋಗಬೇಕು. ನಾನು ಶಾಸಕಾಂಗ ಸಭೆಗೆ ಹೋಗಿಲ್ಲ ಎಂದ ಮಾತ್ರಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೀನಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ನಾನು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
'ಎಲ್ಲಾ ಇಲಾಖೆಗಳಲ್ಲೂ ಸಿಎಂ ಕುಮಾರಸ್ವಾಮಿ, ರೇವಣ್ಣ ಅವರು ಕೈಯಾಡಿಸುತ್ತಿದ್ದಾರೆ, ಎಲ್ಲಾ ಕಡೆ ಅವರ ಕಡೆಯವರೇ ಆಡಳಿತ, ನಾವೇನಕ್ಕೆ ಇರೋದು, ನಾವೇನು ಕೈಕಟ್ಟಿ ಕುಳಿತುಕೊಳ್ಳೋಕೆ ಬಂದಿದ್ದೀವಾ, ನಾವೇನಕ್ಕೆ ಮಂತ್ರಿಯಾಗಿರೋದು, ಜನಕ್ಕೆ ಸ್ಪಂದಿಸಿ, ನಮ್ಮ ಕ್ಷೇತ್ರ ಅಭಿವೃದ್ಧಿ ಮಾಡೋದೊಂದೆ ನಮಗಿರೋದು ಆಸೆ, ಎಲ್ಲಾ ಆಸೆ ತೀರಿಸಿಕೊಂಡು ಬಂದಿದ್ದೇವೆ ಎಂದರು.

'ಯಜಮಾನ ಸರಿಯಾಗಿ ಕುಟುಂಬ ನಿರ್ವಹಿಸಿಕೊಂಡು ಹೋಗಬೇಕು. ನೀವು ಸರಿಯಾಗಿ ಆಡಳಿತ ನಡೆಸದೆ, ಮಕ್ಕಳಿಗೊಂದು, ಹೆಂಡತಿಗೊಂದು ಕುಟುಂಬದವರಿಗೆ ಮಾತ್ರ ಅಂಥ ಕಾರ್ಯ ನಿರ್ವಹಿಸುತ್ತಿದ್ದರೆ ಹೇಗೆ?'
'13 ತಿಂಗಳು ಕಳೆದಿದ್ದೇವೆ, ನಿಮ್ಮ ಜೆಡಿಎಸ್ ನವರೇ ಹೋಗಿದ್ದಾರೆ, ಇನ್ನು 3 ಜನ ಹೋಗುತ್ತಾರೆ. ನಿಮ್ಮ ಅಧ್ಯಕ್ಷರೇ ಹೋಗಿದ್ದಾರೆ. ಮುಖ್ಯಮಂತ್ರಿ ಈಗಲೂ ಮನಸ್ಸು ಮಾಡಿದರೆ, ಅವರೆ ಸಿಎಂ ಆಗಿ ಇನ್ನು ನಾಲ್ಕು ವರ್ಷ ಆಡಳಿತ ನಡೆಸಬಹುದು, ಆದರೆ, ತಪ್ಪು ತಿದ್ದಿಕೊಂಡು ನಡೆದುಕೊಳ್ಳಬೇಕು ಎಂದರು.












Click it and Unblock the Notifications