ಬಿಜೆಪಿ ಗೆ ಮತ್ತೆ ಸೆಡ್ಡು ಹೊಡೆದ ಶಾಸಕ ಶರತ್ ಬಚ್ಚೇಗೌಡ
Recommended Video
ಬೆಂಗಳೂರು, ಫೆಬ್ರವರಿ 07: ಬಿಜೆಪಿ ಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿಯ ಪ್ರಮುಖ ಅಭ್ಯರ್ಥಿ ಎಂಟಿಬಿ ನಾಗರಾಜು ಅನ್ನು ಉಪಚುನಾವಣೆಯಲ್ಲಿ ಸೋಲಿಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮತ್ತೆ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ಹೊಸಕೋಟೆ ನಗರಸಭೆ ಚುನಾವಣೆಗಳು ಇದೇ 9 ರಂದು ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಗರು ಎಲ್ಲಾ 31 ವಾರ್ಡ್‌ಗಳಲ್ಲಿಯೂ ಸ್ಪರ್ಧಿಸಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ಮತ್ತು ಕ್ಷೇತ್ರದಲ್ಲಿ ಅಲುಗಾಡುತ್ತಿರುವ ಬಿಜೆಪಿಯನ್ನು ಭದ್ರಗೊಳಿಸಲು ಯತ್ನಿಸುತ್ತಿರುವ ಅನರ್ಹ ಎಂಟಿಬಿ ನಗಾರಾಜು ಅವರಿಗೆ ತಲೆನೋವು ತಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಲ್ಲಿ ಎಂಟಿಬಿ ವಿರುದ್ಧ ಸೋತಿದ್ದ ಶರತ್ ಬಚ್ಚೇಗೌಡ, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ನಿರಾಕರಿಸಿದ ಕಾರಣ ಸ್ವಾಭಿಮಾನಿ ಬಳಗ ಕಟ್ಟಿಕೊಂಡು ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ ಎಂಟಿಬಿ ವಿರುದ್ಧ ಜಯಗಳಿಸಿದರು.

ಸ್ವಾಭಿಮಾನಿ ಬಳಗಕ್ಕೆ ಪಕ್ಷದ ರೂಪ ಕೊಟ್ಟ ಶರತ್
ಚುನಾವಣೆ ಗೆದ್ದ ನಂತರ ಸ್ವಾಭಿಮಾನಿ ಬಳಗಕ್ಕೆ ಪಕ್ಷದ ರೂಪವನ್ನು ಶರತ್ ಬಚ್ಚೇಗೌಡ ಕೊಟ್ಟಿದ್ದಾರೆ. ಶರತ್ ಬಚ್ಚೇಗೌಡ ನೇತೃತ್ವದ 'ಭಾರತೀಯ ಪ್ರಜಾ ಪಕ್ಷ' ವನ್ನು ನೊಂದಾವಣಿ ಆಗದ ರಾಜಕೀಯ ಪಕ್ಷ ಎಂದು ಚುನಾವಣಾಧಿಕಾರಿಗಳು ಗುರುತಿಸಿದ್ದು, ವಾರ್ಡ್ ಚುನಾವಣೆ ಅಭ್ಯರ್ಥಿಗಳನ್ನು ಹಾಗೆಯೇ ಗುರುತಿಸಿದ್ದಾರೆ.

ಎಲ್ಲಾ ವಾರ್ಡ್‌ಗಳಲ್ಲಿಯೂ ಶರತ್ ಬೆಂಬಲಿತ ಅಭ್ಯರ್ಥಿ ಕಣಕ್ಕೆ
ಹೊಸಕೋಟೆ ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು ಎಲ್ಲ ವಾರ್ಡ್‌ಗಳಲ್ಲಿ ಶರತ್ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಶರತ್ ಬಚ್ಚೇಗೌಡ ಅವರು ಹಸಿರು ಶಾಲು ಹೊದ್ದು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಮಾಡುತ್ತಿದ್ದು, ಎಂಟಿಬಿ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳಿಗೆ ಭಾರಿ ಪೈಪೋಟಿ ನೀಡುತ್ತಿದ್ದಾರೆ.

ಕುಕ್ಕರ್ ಚಿಹ್ನೆಯನ್ನು ಪಡೆಯಲು ಯಶಸ್ವಿ
ಶರತ್ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳು ಕುಕ್ಕರ್ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಂತರದ ಸ್ಥಾನವನ್ನು ಮತದಾನ ಪಟ್ಟಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಕ್ಕರ್ ಚಿಹ್ನೆ ಶರತ್ ಬಚ್ಚೇಗೌಡ ಅವರು ಚುನಾಚಣೆಗೆ ನಿಂತಾಗ ಸಿಕ್ಕಿದ್ದ ಚಿಹ್ನೆಯಾಗಿದ್ದು ಕುಕ್ಕರ್ ಚಿಹ್ನೆ ಕ್ಷೇತ್ರದಲ್ಲಿ ಪರಿಚಿತ ಚುನಾವಣಾ ಚಿಹ್ನೆಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲೆನೋವು ತಂದಿದೆ.

ಸಚಿವ ಸ್ಥಾನ ಸಿಗದ ನಿರಾಸೆಯಲ್ಲಿರುವ ಎಂಟಿಬಿ ನಾಗರಾಜು
ಇತ್ತ ಎಂಟಿಬಿ ನಾಗರಾಜು ಅವರಿಗೆ ಉಪಚುನಾವಣೆಯಲ್ಲಿ ಸೋತದ್ದಷ್ಟೆ ಅಲ್ಲದೆ ಸಚಿವ ಸ್ಥಾನ ಕೈತಪ್ಪಿದ ನಿರಾಸೆ ಮತ್ತೊಂದೆಡೆಯಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಅಷ್ಟೆ ಅಲ್ಲದೆ ಬಿಜೆಪಿ ಪರ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕರಪತ್ರಗಳಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಚಿತ್ರವನ್ನು ಕೈಬಿಟ್ಟಿರುವುದು ಸಹ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಫೆಬ್ರವರಿ 9 ರಂದು ನಗರಸಭೆ ಚುನಾವಣೆ
ಹೊಸಕೋಟೆ ಚುನಾವಣೆ ದಿನಾಂಕ 9 ನೇ ತಾರೀಖು ನಡೆಯಲಿದೆ. ಕಳೆದ ವಾರ್ಡ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ನಗರಸಭೆ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಭಾರಿ ಪೈಪೋಟಿ ಎದುರಾಗಿದೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications