ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್‌ ಶಾಂತಕುಮಾರಿಗೆ ಡಾಕ್ಟರೇಟ್ ಗೌರವ

|
Google Oneindia Kannada News

ಬೆಂಗಳೂರು, ಜ.16 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಎನ್.ಶಾಂತಕುಮಾರಿ ಅವರು ಇನ್ನು ಮುಂದೆ ಡಾ.ಶಾಂತಕುಮಾರಿಯಾಗಲಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಡಾಕ್ಟರೇಟ್ ಪದವಿ ಪಡೆದ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಶುಕ್ರವಾರ ಸಂಜೆ ವೈಟ್‍ಫೀಲ್ಡ್ ನಲ್ಲಿರುವ ಸ್ಟಾರ್ ಬಿಸಿನೆಸ್ ಹೋಟೆಲ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಂತಕುಮಾರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಯೂನಿವರ್ಸಿಟಿ ಆಫ್ ಜೆರುಸಲೇಂ ಈ ಪದವಿಯನ್ನು ನೀಡುತ್ತಿದೆ. [ಮೇಯರ್ ಶಾಂತಕುಮಾರಿ ಸಂದರ್ಶನ ಓದಿ]

N Shanthakumari

ಮೂಡಲಪಾಳ್ಯ ವಾರ್ಡ್‌ನ ಬಿಬಿಎಂಪಿ ಸದಸ್ಯರಾದ ಎನ್.ಶಾಂತಕುಮಾರಿ ಅವರು, 2014ರ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರವಹಿಸಿಕೊಂಡರು. ಶಾಂತಕುಮಾರಿ ಅವರ ಆಡಳಿತ ನಿರ್ವಹಣೆ ಮತ್ತು ಪಾಲಿಕೆಯನ್ನು ದಿಟ್ಟವಾಗಿ ಮುನ್ನಡೆಸುತ್ತಿರುವ ಅವರ ಕಾರ್ಯವೈಖರಿಯನ್ನು ಮೆಚ್ಚಿ ಈ ಗೌರವ ನೀಡಲಾಗುತ್ತಿದೆ.

ಡಾಕ್ಟರೇಟ್ ಗೌರವ ಸಿಗುತ್ತಿರುವ ಬಗ್ಗೆ ಮೇಯರ್ ಶಾಂತ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ನಗರದ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಪ್ರಶಸ್ತಿ ಪುರಸ್ಕಾರವನ್ನು ನಿರೀಕ್ಷಿಸಿರಲಿಲ್ಲ. ಇದು ಬಯಸದೇ ಬಂದ ಭಾಗ್ಯವಾಗಿದೆ ಎಂದು ಹೇಳಿದ್ದಾರೆ.

ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ಶಾಂತಕುಮಾರಿ ಅವರಿಗೆ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

English summary
Bruhat Bengaluru Mahanagara Palike (BBMP) Mayor N Shanthakumari has been awarded the honorary doctorate by University of Jerusalem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X