ಹೊಂಗಸಂದ್ರದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಸಾವು

ಬೆಂಗಳೂರು, ಮೇ 15: ಕೊರೊನಾ ವೈರಸ್‌ ಸೋಂಕಿತ ಪತ್ತೆಯಾದ ಪ್ರದೇಶದಲ್ಲಿ ವಾಸವಿದ್ದ ಕಾರಣಕ್ಕೆ ಕ್ವಾರಂಟೈನ್‌ಗೆ ಒಳಗಾಗಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊಂಗಸಂದ್ರದಲ್ಲಿ ನಡೆದಿದೆ.

ಕ್ವಾರಂಟೈನ್‌ನಲ್ಲಿದ್ದ ಮಹಿಳೆಯನ್ನು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಸಾವಿಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲ.

ಈಗಾಗಲೇ ಮಹಿಳೆಯನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಆದರೆ, ವರದಿ ಇನ್ನು ಬಂದಿರಲಿಲ್ಲ. ಈ ನಡುವೆ ಆ ಮಹಿಳೆ ಮೃತಪಟ್ಟಿದ್ದಾರೆ. ವರದಿ ಬಂದ ಮೇಲೆ ಸಾವು ಹೇಗೆ ಸಂಭವಿಸಿತು ಎಂದು ವೈದ್ಯರು ಹೇಳಬೇಕಿದೆ ಎಂದು ಬೆಂಗಳೂರು DHO ಗುಳೂರು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

Hongasandra Woman Died At Quarantine Period

ಬಿಹಾರ ಮೂಲದ ವ್ಯಕ್ತಿ ಹೊಂಗಸಂದ್ರ ಪ್ರದೇಶದಲ್ಲಿ ವಾಸವಿದ್ದ. ಏಪ್ರಿಲ್ 22 ರಂದು ಆತನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಳಿಕ, ಹೊಂಗಸಂದ್ರ ಪ್ರದೇಶದಲ್ಲಿದ್ದ ಸುಮಾರು 180 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಈ ಒಬ್ಬ ವ್ಯಕ್ತಿಯಿಂದ ಸುಮಾರು ಜನಕ್ಕೆ ಸೋಂಕು ಹರಡಿದೆ. ಈತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವ ಬಹುತೇಕ ಎಲ್ಲರಿಗೂ ಸೋಂಕು ತಗುಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+