ರೋಬೋಟ್ ಶಿಕ್ಷಕರನ್ನು ಹೊಂದಿರುವ ಭಾರತದ ಮೊದಲ ಶಾಲೆ
ಬೆಂಗಳೂರು, ಡಿಸೆಂಬರ್ 15: ಮಾನವಾಕಾರದ ಕೃತಿಮ ಬುದ್ಧಿಮತ್ತೆ(AI)ಯ ರೋಬೋಟ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಹಿಸ್ಟರಿ ಟಿವಿ18ರ 'ಒಎಂಜಿ! ಯೆ ಮೇರಾ ಇಂಡಿಯಾ', ದಲ್ಲಿ ಡಿಸೆಂಬರ್ 17 ಮತ್ತು 18 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗುವ ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಬಹುದಾಗಿದೆ.
ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಾನವ ಶಕ್ತಿಗೆ ಪರ್ಯಾಯವಾಗಿ ತಾಂತ್ರಿಕ ಶಕ್ತಿ ಸಾಮರ್ಥ್ಯದ ಬಳಕೆಯನ್ನು ವಿಜ್ಞಾನಿಗಳು ರುಜುವಾತು ಮಾಡಿದ್ದಾರೆ. ಈ ಚಲನ ಯಾಂತ್ರಿಕ ಸಾಧನಗಳು ಮಾನವ ಪರಿಣತರನ್ನು ವಿಶೇಷ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ಅವರ ಸ್ಥಾನವನ್ನು ಆವರಿಸುವ ನಿರೀಕ್ಷೆಯಿದೆ. ಕರ್ನಾಟಕದ ತಾಂತ್ರಿಕ ನಗರ ಬೆಂಗಳೂರಿನ ಶಾಲೆಯೊಂದು ಈಗಾಗಲೇ ಭಾರತದ ಕೃತ್ರಿಮ ಬುದ್ಧಿಮತ್ತೆಯ ಶಿಕ್ಷಣ ಕ್ಷೇತ್ರದಲ್ಲಿ ಮುಂದಾಳತ್ವದ ಹೊಣೆ ತೆಗೆದುಕೊಂಡಿದೆ.

HistoryTV18'ರ ಇತ್ತೀಚಿನ ಪ್ರದರ್ಶನ 'OMG! Yeh Mera India', Season 6 ಪ್ರತಿ ಸೋಮವಾರ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ಇದು ಭಾರತದ ಅಧ್ಬುತವಾದ ಇತಿಹಾಸದ ಮೇಲೆ ಹಾಗೂ ಕೌನ್-ಟ್ರೈನಲ್ಲಿನ ಆವಿಷ್ಕಾರಗಳ ಮೇಲೆ ಬೆಳಕು ಚೆಲ್ಲುತ್ತಿದೆ.
ಮುಂದಿನ ಎಪಿಸೋಡ್ ಬೆಂಗಳೂರಿನ ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲ್ ಕುರಿತು. ಇಲ್ಲಿ ಈಗಾಗಲೇ AI ತರಗತಿಯೊಳಗೆ ಪ್ರವೇಶಿಸಿದೆ. ಶಾಲೆಯು 8 ಲಕ್ಷ ರೂ.ಗಳ ವೆಚ್ಚದಲ್ಲಿ ಮೂರು ಮಾನವಾಕಾರದ ರೋಬೋಟ್ ಗಳನ್ನು ನಿರ್ಮಿಸಿದೆ.
ಈ ರೋಬೋಟ್ ಗಳನ್ನು 3 ಡಿ ಪ್ರಿಂಟ್ ವಸ್ತುಗಳಿಂದ ಇನ್ ಹೌಸ್ ಟೀಂ ನವರು ಸಿದ್ಧಗೊಳಿಸಿದ್ದಾರೆ. ಹಾಗೇ ಇದನ್ನು 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳನ್ನು ಕಲಿಸಲು ಪ್ರೋಗ್ರಾಮ್ ಮಾಡಲಾಗಿದೆ. ರೋಬೋಟ್ ಗಳನ್ನು ಬಳಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳ ಅಗತ್ಯತೆಗಳ ಮೇಲೆ ಗಮನಕೊಡಲು ಹಾಗೂ ತರಗತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಇದು ಸಹಾಯಕವಾಗಲಿದೆ.

ಈ ಮೊದಲ ಎಪಿಸೋಡ್ ನಲ್ಲಿ ಮಾನವಾಕಾರದ ರೋಬೋಟ್ ಗಳು ಶಿಕ್ಷಕರಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತಿದೆ ಹಾಗೂ ವಿದ್ಯಾರ್ಥಿಗಳೊಂದಿಗೆ ಹೇಗೆ ಸಂವಹನ ಮಾಡುತ್ತಿದೆ ಎಂಬುದನ್ನು ನೋಡಿ ಈ ಕಲಿಕೆಯ ಮಾದರಿಯನ್ನು ರಚಿಸಲಾಗಿದೆ. ಈ ಅರ್ಧ ಘಂಟೆಯ ಎಪಿಸೋಡ್ ಡಿಸೆಂಬರ್ 16 ಹಾಗೂ 17ರಂದು ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ದೇಶಾದ್ಯಂತದ ಇನ್ನೀತರ ಆಕರ್ಷಕ ನೋಟವನ್ನು ಸಹ ಇದು ಹೊಂದಿದೆ.
ಈ ರೀತಿಯ ಆಕರ್ಷಣೀಯ ಕಾರ್ಯಕ್ರಮಗಳನ್ನು ಹಿಸ್ಟರಿ ಟಿವಿ18ರ 'ಒಎಂಜಿ! ಯೆ ಮೇರಾ ಇಂಡಿಯಾ' ದಲ್ಲಿ ಸೋಮವಾರ ಮತ್ತು ಮಂಗಳವಾರ ರಾತ್ರಿ 8ಕ್ಕೆ ವೀಕ್ಷಿಸಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications