Actor Darshan Mother: ಕೊನೆಗೂ ನಟ ದರ್ಶನ್‌ ನೋಡಲು ಬಂದಿದ್ದು ಸ್ವಂತ ತಾಯಿ, ತಮ್ಮ-ಪೋಸ್ಟ್‌ ವೈರಲ್‌

Actor Darshan Mother: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದು, ಈಗಾಗಲೇ ದರ್ಶನ್‌ ಅವರನ್ನು ಚಿತ್ರರಂಗದ ಹಲವರು ಭೇಟಿಯಾಗಿದ್ದಾರೆ. ಆದರೆ ತನ್ನ ಸ್ವಂತ ಮಗ ಅಂತಾ ಹೇಳಿಕೊಳ್ಳುತ್ತಿದ್ದವರೇ ನಟ ದರ್ಶನ್‌ ಭೇಟಿಯಾಗಿಲ್ಲ, ಬದಲಿಗೆ ಪೋಸ್ಟ್‌ವೊಂದನ್ನು ಹಾಕಿದ್ದರು ಅಷ್ಟೇ. ಇದೀಗ ಈ ಬಗ್ಗೆಯೇ ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಗಳು ಆಗುತ್ತಿವೆ.

ನಟಿ ಸುಮಲತಾ ಅವರು, "ಒಳ್ಳೆಯದು ಆಗೋಕು ಮುಂಚೆ ಕೆಟ್ಟದಾಗುತ್ತೆ. ಒಳ್ಳೆಯ ಕಾಲ ಬರುತ್ತದೆ, ಭರವಸೆ ಇಡಬೇಕು ಅಂತಾ ಬರೆದುಕೊಂಡಿದ್ದು," ಇದು ಕುತೂಹಲಕ್ಕೆ ಕಾರಣವಾಗಿತ್ತು. ಇನ್ನು ಸುಮಲತಾ ಅವರು ಸಾಮಾನ್ಯವಾಗಿ ದರ್ಶನ್‌ ಬರೀ ಮಗ ಅಲ್ಲ, ನನ್ನ ಸ್ವಂತ ದೊಡ್ಡ ಮಗ ಅಂತಾ ಹೇಳಿಕೊಳ್ಳುತ್ತಿದ್ದರು. ಆದರೆ ಜೈಲು ಪಾಲಾದ ಬಳಿಕ ನಟ ದರ್ಶನ್‌ನನ್ನು ನೋಡಲು ಇದುವರೆಗೂ ಬಂದಿಲ್ಲ. ಆದರೆ ಕೊನೆಗೂ ಸ್ವಂತ ತಾಯಿ ಮೀನಾ ತುಗೂದೀಪ, ತಮ್ಮ ದಿನಕರ ತುಗುದೀಪ ಅವರು ಮಾತ್ರ ದರ್ಶನ್‌ನನ್ನು ನೋಡಲು ಜೈಲಿಗೆ ಬಂದಿದ್ದರು.

His own mother and Brother came to see actor Darshan Poster Viral

ಇಲ್ಲೇ ತಿಳಿದುಕೊಳ್ಳಬಹುದು, ಸ್ವಂತ ಮಗ ಅಂತಾ ಹೇಳಿಕೊಂಡವರು ಬಂದಿಲ್ಲ.. ಬದಲಾಗಿ ದೂರವಿಟ್ಟ ಸ್ವಂತ ತಾಯಿಯೇ ಎಲ್ಲಾ ನೋವುಗಳನ್ನು ಮರೆತು ಮಗ ದರ್ಶನ್‌ನ್ನು ನೋಡಲು ಜೈಲಿಗೆ ಬಂದಿದ್ದರು. ಯಾವತ್ತಿದ್ದರೂ ಹೆತ್ತ ತಾಯಿಯೇ ತಮ್ಮ ಮಕ್ಕಳ ಕಷ್ಟಗಳಿಗೆ ಆಗುವುದು ಎನ್ನುವ ಚರ್ಚೆಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಪೋಸ್ಟ್‌ಗಳು ಮೀನಾ ತುಗೂದೀಪ ಅವರು ನಟ ದರ್ಶನ್‌ ಭೇಟಿಯಾದಾಗಿನಿಂದ ವೈರಲ್‌ ಆಗುತ್ತಿವೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಕುಟುಂಬಸ್ಥರು ಸೋಮವಾರ ಭೇಟಿ ಮಾಡಿದರು. ಕುಟುಂಬಸ್ಥರನ್ನು ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದು, ಈ ವೇಳೆ ಮಗನನ್ನು ಅಪ್ಪಿಕೊಂಡು ತಾಯಿ ಮೀನಾ ಸಹ ಕಣ್ಣೀರು ಹಾಕಿದ್ದಾರೆ. ತನ್ನ ಸ್ಥಿತಿ ಕಂಡು ಗೋಳಾಡುತ್ತಿದ್ದ ತಾಯಿಗೆ ದರ್ಶನ್ ಸಮಾಧಾನ ಹೇಳಿದ್ದಾರೆ.

ಕೊಲೆ ಮಾಡುವ ಹಂತಕ್ಕೆ ಇಳಿಯಬಾರದಿತ್ತು: ಸುಷ್ಮಾ ವೀರ್‌ ಮಾತನಾಡಿದ್ದು, ಕಾನೂನು ಮೂಲಕ ಕ್ರಮ ಕೈಗೊಂಡಿದ್ದರೆ, ಎಲ್ಲರಿಗೂ ಇದೊಂದು ನಿದರ್ಶನ ಆಗುತ್ತಿತ್ತು. ಕೊಲೆ ಮಾಡುವ ಹಂತಕ್ಕೆ ಇಳಿಯಬಾರದಿತ್ತು ಎಂದು ನಟ ದರ್ಶನ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

"ನಟ ದರ್ಶನ್‌ ಅವರ ಕೆಲವು ಹುಡುಗರು ಆರ್‌ಸಿಬಿ ಸೋಲನ್ನು ಇಟ್ಟುಕೊಂಡು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಸರೀನಾ? ಅವರು ಕೂಡ ಹೆಣ್ಣಲ್ಲವಾ? ಬೇರೆ ಹೆಣ್ಣುಮಕ್ಕಳು ಹೆಣ್ಮಕ್ಕಳಲ್ಲ, ನಿಮಗೆ ಇಷ್ಟ ಆದವರಷ್ಟೇ ಹೆಣ್ಣುಮಕ್ಕಳಾ? ದರ್ಶನ್‌ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ, ಆದರೆ ನಿಮ್ಮ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ನಿಮ್ಮನ್ನು ನೀವೆ ಹಾಳು ಮಾಡಿಕೊಳ್ಳುತ್ತಿದ್ದೀರ. ಇನ್ನೂ ಇನ್ನಾದರೂ ಸುಧಾರಿಸಿಕೊಂಡರೆ ಒಳ್ಳೆಯದು. ಅದು ನಿಮ್ಮ ಕೈಯಲ್ಲಿದೆ", ಎಂದು ಬುದ್ಧಿವಾದ ಹೇಳಿದ್ಧಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+