ಬೆಂಗಳೂರಿನಲ್ಲಿ ದೇವಾಲಯದ ಡ್ರೆಸ್ ಕೋಡ್ ಅಭಿಯಾನ: ಈ ರೀತಿ ಡ್ರೆಸ್ ಧರಿಸಿದ್ದರೆ ಮಾತ್ರ ಪ್ರವೇಶ!
ನೀವೇನಾದ್ರು ಬೆಂಗಳೂರಿನ ಈ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎಂದು ಯೋಚಿಸಿದ್ದರೆ, ನಿಮ್ಮ ಬಟ್ಟೆಗಳ ಬಗ್ಗೆ ಕೂಡ ಚಿಂತಿಸುವುದು ಒಳಿತು. ಹಿಂದುತ್ವ ಸಂಘಟನೆಗಳು ಜನವರಿ 10, ಬುಧವಾರದಿಂದ ಬೆಂಗಳೂರಿನ ದೇವಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಡ್ರೆಸ್ ಕೋಡ್‌ಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೋರಿ ಬೋರ್ಡ್‌ಗಳನ್ನು ಅಳವಡಿಸಲು ಪ್ರಾರಂಭಿಸಿವೆ.
ಹಿಂದೂ ಸಂಘಟನೆಗಳಾದ, ಕರ್ನಾಟಕ ದೇವಸ್ಥಾನ ಮಹಾಸಂಘ (ಕರ್ನಾಟಕ ದೇವಾಲಯಗಳ ಸಂಘ) ಮತ್ತು ಹಿಂದೂ ಜನಜಾಗೃತ ಸಮಿತಿಯು ಬೆಂಗಳೂರಿನಲ್ಲಿ ದೇವಸ್ಥಾನದ ಆಡಳಿತಕ್ಕೆ ಮನವಿ ಮಾಡಿದೆ. ಬುಧವಾರ, ಜನವರಿ 10 ರಿಂದ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಮತ್ತು ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತದೆ.

ಅಭಿಯಾನದ ಭಾಗವಾಗಿ, ಸಂಘಗಳ ಸದಸ್ಯರು ದೇವಾಲಯಗಳ ಮುಂದೆ ಬೋರ್ಡ್‌ಗಳನ್ನು ಹಾಕುತ್ತಿದ್ದಾರೆ ಮತ್ತು ಬುಧವಾರದಿಂದ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡುವುದಾಗಿ ಹೇಳಿದೆ.
ಹಿಂದುತ್ವ ಸಂಘಟನೆಗಳು ನಿಗದಿ ಮಾಡಿರುವ ಡ್ರೆಸ್ ಕೋಡ್ ಪ್ರಕಾರ, ಪುರುಷರು ಶಾರ್ಟ್ಸ್, ಡಿಸ್ಟ್ರೆಸ್ಡ್ ಜೀನ್ಸ್, ಟಿ-ಶರ್ಟ್ ಅನ್ನು ಧರಿಸಿದರೆ ಪ್ರವೇಶ ಸಿಗುವುದಿಲ್ಲ. ಮಹಿಳೆಯರಿಗೆ ಎದೆಯನ್ನು ತೋರಿಸುವ, ಶಾರ್ಟ್ಸ್, ಮಿಡಿ ಮತ್ತು ಡಿಸ್ಟ್ರೆಸ್ಡ್ ಜೀನ್ಸ್ ಧರಿಸಿ ದೇವಾಲಯದ ಒಳಗೆ ಪ್ರವೇಶಿಸಬಾರದು ಎಂದು ಸೂಚನೆ ನೀಡಲಾಗಿದೆ.
ಸಾತ್ವಿಕ ಉಡುಪು ಧರಿಸಲು ಒತ್ತಾಯ
ಬೆಂಗಳೂರಿನಲ್ಲಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಮಾತನಾಡಿ "ಇಂದಿನಿಂದ ಅಭಿಯಾನ ಪ್ರಾರಂಭವಾಗಿದೆ ಮತ್ತು ನಾವು ಎಲ್ಲಾ ದೇವಾಲಯಗಳಲ್ಲಿ ಪೋಸ್ಟರ್‌ಗಳನ್ನು ಹಾಕುತ್ತೇವೆ. ದೇವಸ್ಥಾನಗಳಿಗೆ ಭೇಟಿ ನೀಡುವಾಗ ಜನರು 'ಸಾತ್ವಿಕ' ಉಡುಪುಗಳನ್ನು ಧರಿಸಬೇಕು." ಎಂದು ಹೇಳಿರುವುದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬೆಂಗಳೂರಿನ ವಸಂತನಗರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಾಕಿರುವ ಪೋಸ್ಟರ್‌ಗಳಲ್ಲಿ ಭಕ್ತರು ಅಸಭ್ಯ ಉಡುಗೆ ಧರಿಸಿ ದೇವಸ್ಥಾನಗಳಿಗೆ ಪ್ರವೇಶಿಸಬಾರದು ಎಂದು ಮನವಿ ಮಾಡಿದ್ದಾರೆ. ದೇವಾಲಯದ ಪಾವಿತ್ರ್ಯತೆಯನ್ನು ರಕ್ಷಿಸುವುದು ಧಾರ್ಮಿಕ ಕರ್ತವ್ಯಕ್ಕೆ ಅತಿಮುಖ್ಯ ಎಂದು ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಒಕ್ಕೂಟವು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಅಗತ್ಯವಿದೆ ಎಂದು ನಿರ್ಧಾರ ಮಾಡಿತ್ತು.












Click it and Unblock the Notifications