ಲೈಸನ್ಸ್ ಪಡೆಯದ ಹಿಂದವೀ ಮೀಟ್ ಮಾರ್ಟ್: ಮಾಲೀಕರಿಗೆ ಬಿಬಿಎಂಪಿ ನೋಟಿಸ್
ಬೆಂಗಳೂರು, ಏ.19: ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಪ್ರಚಲಿತಕ್ಕೆ ಬಂದ ಹಿಂದವೀ ಮೀಟ್ ಮಾರ್ಟ್ ಬಿಬಿಎಂಪಿಯಿಂದ ಪರವಾನಗಿಯನ್ನೇ ಪಡೆದಿಲ್ಲ. ಹೀಗೆ ಅಗತ್ಯ ಅನುಮತಿ ಇಲ್ಲದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ ನೋಟ್ ಜಾರಿ ಮಾಡಿದೆ.
ಹಲಾಲ್ ಕಟ್ ಜಟ್ಕಾ ಕಟ್ ವಿಚಾರ ತಾರಕ್ಕೇರಿತ್ತು. ಕೆಲವು ಹಿಂದೂ ಸಂಘಟನೆಗಳು ಹಲಾಲ್ ವಿರುದ್ದ ಸಮರವನ್ನೇ ಸಾರಿದ್ದರು. ಈ ವೇಳೆ ಹಿಂದವೀ ಮೀಟ್ ಮಾರ್ಟ್ ಮಾಲೀಕರು ಜಟ್ಕಾ ಕಟ್ ಮಾಡಿದ ಮಾಂಸವನ್ನೇ ಮಾರಾಟ ಮಾಡಟುತ್ತೇವೆ, ಹಿಂದೂಗಳು ನಮ್ಮಲ್ಲಿ ಬಂದು ಮಾಂಸ ಖರೀದಿ ಮಾಡಿ ಎಂದು ಪ್ರಚಾರ ಮಾಡಿದರು. ಯುಗಾದಿ ಹೊಸತೂಡಕು ಸಮಯದಲ್ಲಿ ಭರ್ಜರಿ ವ್ಯಾಪಾರವನ್ನೂ ಸಹ ಮಾಡಿದ್ದರು. ಇದೀಗ ಹಿಂದುವೀ ಮೀಟ್ ಮಾರ್ಟ್‌ಗೆ ಬಿಬಿಎಂಪಿ ಶಾಕ್ ನೀಡಿದೆ. ಲೈಸನ್ಸ್ ಪಡೆಯದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
8ಕ್ಕೂ ಹೆಚ್ಚು ಕಡೆ ಮಳಿಗೆ:
ಹಿಂದುವೀ ಮೀಟ್ ಮಾರ್ಟ್ ನಗರದಲ್ಲಿ 8ಕ್ಕೂ ಹೆಚ್ಚು ಕಡೆಗಳಲ್ಲಿ ತನ್ನ ವ್ಯಾಪಾರ ಕೇಂದ್ರವನ್ನು ತೆೆರೆದಿದೆ. ಬಿಬಿಎಂಪಿಯಿಂದ ವ್ಯಾಪಾರ ಅನುಮತಿ ಪಡಯದ ಕಾರಣ ರಾಜರಾಜೇಶ್ವರಿ ವಲಯದ ಪಶುಪಾಲನ ಸಹಾಯಕ ನಿರ್ದೇಶಕರು ನೊಟೀಸ್ ನೀಡಿದ್ದಾರೆ. ಇನ್ನು ಲೈಸನ್ಸ್ ಪಡೆಯದಿದ್ದರೇ ಅಂಗಡಿಗಳಿಗೆ ಬೀಗ ಜಡಿಯುವುದಾಗಿಯೂ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದೆ. ಕೋಳಿಯ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲೂ ಪ್ರತ್ಯೇಕ ನೊಟೀಸ್ ನೀಡಿಲಾಗಿದೆ.

ಪರವಾನಗಿಯನ್ನು ಪಡೆಯದೇ ಅಥವಾ ನವೀಕರಿಸದೇ ಅನಧಿಕೃತವಾಗಿ ಉದ್ದಿಮೆ ನಡೆಸುವಂತಿಲ್ಲ. ಕೋಳಿ ಕುರಿ ಮಾಂಸವನ್ನು ಮಾರಾಟ ಮಾಡಬೇಕಾದರೆ ಬಿಬಿಎಂಪಿಯಿಂದ ಅನುಮತಿಯನ್ನು ಪಡೆದಿರಬೇಕು. ಕರ್ನಾಟಕ ಮುನ್ಸಿಪಲ್ ಕಾಯ್ದೆ 1976ರ ಕಲಂ 353ರ ಅನ್ವಯ ಉದ್ದಿಮೆಗೆ ಅನುಮತಿಯನ್ನು ಪಡೆದಿಲ್ಲವಾದರೇ ಅಥವಾ ಅನುವತಿಯನ್ನು ನವೀಕರಿಸದಿದ್ದರೇ, ಅನುಮತಿ ನೀಡುವ ವೇಳೆ ವಿಧಿಸಲಾಗಿರುವ ಷರತ್ತನ್ನು ಪೂರೈಸದಿದ್ದರೇ ಬಿಬಿಎಂಪಿಯ ಅಧಿಕಾರಿಗಳು ನೊಟೀಸ್ ನೀಡಬಹುದಾಗಿದೆ.
ಉದ್ದಿಮೆ ಪರವಾನಗಿ (ಲೈಸನ್ಸ್) ಪಡೆಯಲು ಶುಲ್ಕ ಎಷ್ಟು ಗೊತ್ತಾ? ಕೋಳಿ, ಹಂದಿ, ಮೀನು, ಕುರಿ ಅಥವಾ ಮೇಕೆ, ದನ ಹೀಗೆ ಮಾಂಸವನ್ನು ಮಾರಾಟ ಮಾಡಬೇಕಾದಲ್ಲಿ ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು. ಕೋಳಿಯನ್ನು ಮಾತ್ರ ಮಾರಾಟ ಮಾಡಬೇಕಾದಲ್ಲಿ 2500 ಪರವಾನಗಿ ಶುಲ್ಕವನ್ನು ಕಟ್ಟಬೇಕಿದೆ. ಕೋಳಿ, ಕುರಿ ಅಥವಾ ಮೇಕೆ ಮಾಂಸ, ಮೀನು ಮಾರಾಟಮಾಡಬೇಕಾದಲ್ಲಿ 10,500 ರೂ ಶುಲ್ಕವನ್ನು ಕಟ್ಟಬೇಕಿದೆ. ಇನ್ನು ಪರವಾನಗಿ ಪಡೆದ ಬಳಿಕ ಪ್ರತಿವರ್ಷ ಬಿಬಿಎಂಪಿಗೆ ಶುಲ್ಕವನ್ನು ಕಟ್ಟಬೇಕಿದೆ.

ಮುನೇಗೌಡ ಹೇಳುವುದೇನು?
ಹಿಂದವೀ ಮೀಟ್ ಮಾರ್ಟ್‌ನ ಮಾಲೀಕ ಬಿಬಿಎಂಪಿ"ಬಿಬಿಎಂಪಿ ನಿಯಮವನ್ನು ಪಾಲಿಸುವಂತೆ ಬಿಬಿಎಂಪಿ ನೊಟೀಸ್ ನೀಡಿದೆ ಅದನ್ನು ನಾವು ಪಾಲಿಸುತ್ತೇವೆ. ಸಹಜವಾಗಿ ಏಪ್ರಿಲ್ ನಲ್ಲಿ ಟ್ರೇಡ್ ಲೈಸನ್ಸ್ ರಿನಿವಲ್ ಮಾಡಬೇಕಿದೆ ಹಣವನ್ನು ಕಟ್ಟಿ ನವೀಕರಿಸಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.












Click it and Unblock the Notifications