ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಲ್ಲಿ 5 ದಶಕದಲ್ಲೇ ಅತ್ಯಧಿಕ ಮಳೆ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 06: ಕಳೆದ 50 ವರ್ಷಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಕಂಡ ಎರಡನೇ ಅಧಿಕ ಮಳೆಗಾಲ ಇದಾಗಿದೆ. ಆಗಸ್ಟ್ 30ರಿಂದ ಸೆಪ್ಟೆಂಬರ್ 4ರ ವರೆಗೆ ಕೇವಲ ನಾಲ್ಕು ದಿನದಲ್ಲಿ ವಾಡಿಕೆಗಿಂತ ಶೇ 5ಪಟ್ಟು ಹೆಚ್ಚು ಮಳೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ತುಷಾರ್ ಗಿರಿನಾಥ್, ಐದು ದಶಕದ ನಂತರ ಮತ್ತೊಮ್ಮೆ ಬೆಂಗಳೂರಿನಲ್ಲಿ ಭಾರೀ ಮಳೆ ದಾಖಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಜನಜೀವನ ಅಸ್ತವೆಸ್ತವಾಗಿದೆ. ಮಳೆಗೆ ನಗರದ 162 ಕೆರೆಗಳು ತುಂಬಿದ್ದು, ಮಳೆಯಿಂದಾಗಿ ನಾಲ್ಕರ ಒಂದರಷ್ಟು (1/4)ರಷ್ಟು ಪ್ರವಾಹ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಟ್ರಾಫಿಕ್ ಕಿರಿಕಿರಿ, ಭಾರತದಲ್ಲಿ ಮುಂಬೈ ನಂ. 1, ಬೆಂಗಳೂರು ತೀರಾ ಹಿಂದಿಲ್ಲಟ್ರಾಫಿಕ್ ಕಿರಿಕಿರಿ, ಭಾರತದಲ್ಲಿ ಮುಂಬೈ ನಂ. 1, ಬೆಂಗಳೂರು ತೀರಾ ಹಿಂದಿಲ್ಲ

ನಿರಂತರ ಮಳೆ ನಡುವೆಯು ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಗುತ್ತಿದೆ. ಅಲ್ಲದೇ ಎರಡು ದೊಡ್ಡ ಕೆರೆಗಳಾದ ಬೆಳ್ಳಂದೂರು ಮತ್ತು ವರ್ತೂರು ನಡುವೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ, ಜನರು ತತ್ತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Highest rainfall in Bengaluru in 5 decades Tweeted BBMP Commissioner Tushar Girinath

800 ಚದರ ಕಿಲೋಮೀಟರ್ ಬೆಂಗಳೂರಿನ ಪ್ರದೇಶದಲ್ಲಿ ಪ್ರವಾಹವು 5-6 ಚದರ ಕಿಲೋಮೀಟರ್‌ಗೆ ಸೀಮಿತವಾಗಿದೆ. ಉಳಿದ ಬೆಂಗಳೂರಿನ ಉಳಿದ ಭಾಗದಲ್ಲಿ ಮಳೆ ಆಗಿದೆ. ಪ್ರವಾಹ ಸಂಬಂಧ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಿಬಿಎಂಪಿಯಿಂದ ಅಗತ್ಯ ಕ್ರಮ; ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಮಾತ್ರ ನಿರಂತರ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಪದೇ ಪದೇ ಈ ಪ್ರದೇಶ ತೊಂದರೆಗೀಡಾಗಿದೆ. ನಾವು ಸುಮಾರು 20 ದೋಣಿಗಳು ಮತ್ತು ಮಳೆ ನೀರನ್ನು ಹೊರಗೆ ಹಾಕಲು ಅಗತ್ಯದಷ್ಟು ಪಂಪ್‌ಗಳನ್ನು ಬಳಸಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.

Highest rainfall in Bengaluru in 5 decades Tweeted BBMP Commissioner Tushar Girinath

ಅದಲ್ಲದೇ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿ ಉಂಟು ಮಾಡಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ನೀರು ಹರಿವಿನ ಮಾರ್ಗದಲ್ಲಿ ಅಡೆತಡೆಗಳನ್ನು ತೆಗೆದುಹಾಕಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇವೆ.

ಬೆಂಗಳೂರಿನ ನಾವೇಲ್ಲರು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದೇವೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. ಹಾನಿಯ ಪರಿಹಾರ ಕ್ರಮಗಳಿಗೆ ನಾಗರಿಕರ ಸಹಕಾರ ಕೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರ ಟ್ವೀಟ್‌ಗೆ ಹಲವರು ಪ್ರತ್ಯುತ್ತರ ನೀಡಿದ್ದಾರೆ. ಮಳೆ ಅನಾಹುತಗಳು ಸಂಭವಿಸುವವರೆಗೂ ಬೆಳ್ಳಂದೂರು ಕೆರೆಯ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು.

ಕೆರೆಗಳು ಕಳೆಗಳು ಮತ್ತು ಸಸ್ಯಗಳಿಂದ ತುಂಬಿದೆ. ಅದರಿಂದ ನೀರಿನ ಹರಿವಿಗೆ ಸಮಸ್ಯೆಯಾಗುತ್ತಿದೆ. ಮೊದಲೇ ಸ್ವಚ್ಛಗೊಳಿಸದೇ ಅನಾಹುತ ಸಂಭವಿಸುವವರೆಗೆ ಏಕೆ ಕಾಯಬೇಕು? ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

English summary
Bruhat Bengaluru Mahanagara Palike (BBMP) Chief Commissioner Tushar Girinath Tweet about highest rainfall in Bengaluru in 5 decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X