ಎಲ್ಲಾ ವರ್ಷದ ದಾಖಲೆಗಳನ್ನು ಮುರಿದ ಬೆಂಗಳೂರು ಮಳೆ!

ಬೆಂಗಳೂರು, ಅಕ್ಟೋಬರ್ 16; ಬೆಂಗಳೂರು ನಗರದಲ್ಲಿ ಪ್ರತಿದಿನ ಸುರಿಯುತ್ತಿರುವ ಮಳೆ ಎಲ್ಲಾ ವರ್ಷದ ದಾಖಲೆಳನ್ನು ಅಳಿಸಿ ಹಾಕಿದೆ. ಈ ವರ್ಷದಲ್ಲಿ ಇಲ್ಲಿಯ ತನಕ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ನಗರದಲ್ಲಿ ಇಷ್ಟು ವರ್ಷದ ಎಲ್ಲಾ ದಾಖಲೆಗಳನ್ನು ಈ ವರ್ಷದ ಮಳೆ ಹಿಂದಿಕ್ಕಿದೆ. ಪ್ರತಿ ದಿನ ನಗರದಲ್ಲಿ ಮಳೆಯಾಗುತ್ತಲೇ ಇದೆ.

Highest Rain Fall In Bengaluru City In This Year

ಹವಾಮಾನ ಇಲಾಖೆ ಮಾಪನ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ 8.30ರ ಹೊತ್ತಿಗೆ 166 ಸೆಂಟಿಮೀಟರ್ ಮಳೆ ದಾಖಲಾಗಿತ್ತು. ಸಂಜೆ ಸುರಿದ ಮಳೆ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ.

2017ರಲ್ಲಿ ನಗರದಲ್ಲಿ 166 ಸೆಂಟಿಮೀಟರ್ ಮಳೆಯಾಗಿತ್ತು. ಹೆಚ್‌ಎಎಲ್‌ನಲ್ಲಿರುವ ಐಎಂಡಿ ಮಳೆ ಮಾಪನ ಕೇಂದ್ರದ ಮಾಹಿತಿ ಪ್ರಕಾರ ಈ ವರ್ಷ ಇದುವರೆಗೂ 170.6ರಷ್ಟು ಮಳೆಯಾಗಿದೆ. ಹವಾಮಾನ ಇಲಾಖೆ ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ.

Highest Rain Fall In Bengaluru City In This Year

ಅಕ್ಟೋಬರ್ 17ರ ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಇದರಿಂದಾಗಿ ಈ ವರ್ಷ ನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಲಿದೆ.

ನಗರದಲ್ಲಿ ಅಬ್ಬರಿಸಿದ ಮಳೆ; ಈ ವರ್ಷದ ನೈಋತ್ಯ ಮುಂಗಾರು ಆರಂಭಕ್ಕೂ ಮೊದಲೇ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಡಿಕೆಗಿಂತ ಅಧಿಕ ಮಳೆಯೇ ಆಗುತ್ತಿದೆ. ಆದರೆ ಈ ಬಾರಿ ಅತಿ ಹೆಚ್ಚು ಮಳೆಯಾಗಿದೆ.

ಜನವರಿ 1 ರಿಂದ ಜೂನ್ 23ರ ತನಕ ಬೆಂಗಳೂರು ನಗರದಲ್ಲಿ ವಾಡಿಕೆ ಮಳೆ ಪ್ರಮಾಣ 220 ಮಿ. ಮೀ. ಮಳೆಯಾಗಬೇಕು. ಆದರೆ ಈ ವರ್ಷ 482 ಮಿ. ಮೀ.ಮಳೆಯಾಗಿದೆ. ಹೆಚ್‌ಎಎಲ್, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮಳೆಯಾಗಿತ್ತು.

ಹೆಚ್‌ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಜೂನ್ ತಿಂಗಳ ವಾಡಿಕೆ ಮಳೆಯ ಪ್ರಮಾಣ 76.3 ಮಿ. ಮೀ.. ಆದರೆ ಈ ವರ್ಷ 249 ಮಿ. ಮೀ. ಮಳೆಯಾಗಿದೆ. ಕೆಐಎ ವ್ಯಾಪ್ತಿಯಲ್ಲಿ 253.8 ಮಿ. ಮೀ. ಮಳೆಯಾಗಿದೆ.

ಪೂರ್ವ ಮುಂಗಾರು ಮಳೆ ಆರ್ಭಟ; ಮೇ ತಿಂಗಳಿನಲ್ಲಿ ಚಂಡಮಾರುತ ಮತ್ತು ಮುಂಗಾರು ಪೂರ್ವ ಮಳೆಯ ಕಾರಣ ನಗರದಲ್ಲಿ ಭಾರೀ ಮಳೆಯಾಗಿತ್ತು. ಜೂನ್ 1 ರಿಂದ 23ರ ತನಕ ನಗರದಲ್ಲಿ ವಾಡಿಕೆಯಂತೆ 64 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಈ ವರ್ಷ 156 ಮಿ. ಮೀ. ಮಳೆಯಾಗಿತ್ತು. ನಗರದಲ್ಲಿ 2017ರಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

ವಾರ್ಷಿಕ ಮಳೆ ಪ್ರಮಾಣ; ಬೆಂಗಳೂರು ನಗರದಲ್ಲಿನ ವಾರ್ಷಿಕ ಮಳೆ ಪ್ರಮಾಣ 842 ಮಿ. ಮೀ.. ಆದರೆ 2017ರಲ್ಲಿ 1696 ಮಿ. ಮೀ. ಮಳೆಯಾಗಿತ್ತು. ಬಳಿಕದ ವರ್ಷಗಳಲ್ಲಿ ಮಳೆ ಕಡಿಮೆಯಾಗಿತ್ತು. ಈ ವರ್ಷದ 2017ರ ದಾಖಲೆಗಳು ಸಹ ಧೂಳಿಪಟವಾಗಿದೆ.

ನಗರದಲ್ಲಿ 2018ರಲ್ಲಿ 764 ಮಿ. ಮೀ., 2019ರಲ್ಲಿ 831 ಮಿ. ಮೀ., 2020ರಲ್ಲಿ 1606 ಮಿ. ಮೀ. 2021ರಲ್ಲಿ 1128 ಮೀ. ಮೀ. ಮಳೆಯಾಗಿತ್ತು. ಈ ವರ್ಷದ ಮುಂಗಾರು ಆರಂಭದ ಅವಧಿಯಲ್ಲಿಯೇ ಹವಾಮಾನ ತಜ್ಞರು ನಗರದಲ್ಲಿ ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಅಂದಾಜಿಸಿದ್ದರು.

ಬೆಂಗಳೂರು ನಗರದಲ್ಲಿ ಈ ಬಾರಿ ಸುರಿದ ಮಳೆ ಅವಾಂತರ ಉಂಟು ಮಾಡಿತ್ತು. ಮಹದೇವಪುರ, ಸರ್ಜಾಪುರದಲ್ಲಿ ರಸ್ತೆಗಳು ಜಲಾವೃತಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+