ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೈಬೀಮ್ ಲೈಟ್ ಬಳಕೆ ನಿಷೇಧ

|
Google Oneindia Kannada News

ಬೆಂಗಳೂರು, ಡಿ. 11 : ಉದ್ಯಾನ ನಗರಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ಹೈಬೀಮ್ ದೀಪ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ರಾತ್ರಿ ಹೊತ್ತು ನಡೆಯುವ ಅಪಘಾತಗಳಿಗೆ ಹೈಬೀಮ್ ಲೈಟ್ ಬಳಕೆ ಕೂಡ ಪ್ರಮುಖ ಕಾರಣವಾಗಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಹೈಬೀಮ್ ಲೈಟ್ ಬಳಸುವುದರಿಂದ ಎದುರಿನಿಂದ ಬರುವ ವಾಹನ ಸವಾರರ ಕಣ್ಣು ಕುಕ್ಕಿ, ಅವರಿಗೆ ರಸ್ತೆ ಕಾಣದಂತಾಗುತ್ತದೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

High beam

ನಗರದಲ್ಲಿ ಸಾಕಷ್ಟು ಬೀದಿದೀಪ, ರಸ್ತೆ ಬದಿಯ ಅಂಗಡಿಗಳು ಹಾಗೂ ಮನೆ ಮತ್ತು ಮಳಿಗೆಗಳ ದೀಪದ ಬೆಳಕು ರಸ್ತೆಗೆ ಬೀಳುತ್ತದೆ. ಇದೆಲ್ಲದರ ನಡುವೆ ಹೈಬೀಮ್ ದೀಪಗಳನ್ನು ಬಳಸುವುದರಿಂದ ಬೆಳಕಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿ ಸವಾರರಿಗೆ ತೊಂದರೆಯಾಗುತ್ತಿದೆ. [ಇವರು ಸಿವಿ ರಾಮನ್‌ ನಗರದ 'ಸಿಂಗಂ']

ಹಿಂದೆಯೂ ಹಲವಾರು ಸಂಸ್ಥೆಗಳು ನಗರದ ವ್ಯಾಪ್ತಿಯಲ್ಲಿ ಹೈ ಬೀಮ್ ಲೈಟ್ ಬಳಕೆಯನ್ನು ನಿಷೇಧಿಸುವಂತೆ ಸಂಚಾರಿ ಪೊಲೀಸರಿಗೆ ಮನವಿ ಮಾಡಿದ್ದವು. ಸದ್ಯ ಅದನ್ನು ಪೊಲೀಸರು ಜಾರಿಗೆ ತಂದಿದ್ದು, ಬೈಕ್ ಮತ್ತು ಕಾರುಗಳಲ್ಲಿ ಹೈಬೀಮ್ ಲೈಟ್ ಬಳಕೆಗೆ ನಿಷೇಧ ಹೇರಿದ್ದಾರೆ. [ಸರಗಳ್ಳನನ್ನು ಹಿಡಿದ ಸಂಚಾರಿ ಪೇದೆ]

ನಗರದೊಳಗೆ ಹೈಬೀಮ್ ಲೈಟ್ ಬಳಕೆ ಅಗತ್ಯವಿಲ್ಲ. ಇಲ್ಲಿ ಬೀದಿ ದೀಪದ ಬೆಳಕೂ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೈಬೀಮ್ ಬಳಸಿದರೆ ಎದುರಿನಿಂದ ಬರುವ ವಾಹನ ಸವಾರರಿಗೆ ಕಿರಿಕಿರಿ ಆಗುತ್ತದೆ. ಆದ್ದರಿಂದ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ (ಸಂಚಾರಿ) ಬಾಬು ರಾಜೇಂದ್ರ ಪ್ರಸದಾದ್ ಹೇಳಿದ್ದಾರೆ.

English summary
Bengaluru traffic police prohibited the using high beam lights in city limits. Switch to low beam light and help others to drive safely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X