Darshan: ರೇಣುಕಾಸ್ವಾಮಿ ಹತ್ಯೆ ಕೇಸಿನಿಂದ ನಾವೆಲ್ಲರೂ ತಿಳಿಯಲೇಬೇಕಾದ 10 ಅಂಶಗಳು ಇವೆ ನೋಡಿ..!

ಬೆಂಗಳೂರು, ಜೂನ್ 25: ನಟ ದರ್ಶನ್ ಪ್ರೇಯಸಿ ಪವಿತ್ರಾಗೌಡಗೆ ಅಶ್ಲೀಲ ಮೆಸೆಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದಿರುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ. ಈ ವಿಚಾರವಾಗಿ ದರ್ಶನ್ ಸೇರಿದಂತೆ ಒಟ್ಟು 17 ಮಂದಿಯ ಬಂಧನವಾಗಿದೆ. ದರ್ಶನ್ ಅಭಿಮಾನಿಯನ್ನೇ ಕೊಂದ ಆರೋಪದ ಮೇರೆಗೆ ಜೈಲುಪಾಲಾಗಿದ್ದಾರೆ. ಸ್ಟಾರ್‌ ನಟರ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರಾದ ನಾವೆಲ್ಲರು ಈ ಪ್ರಕರಣದಿಂದ ಕೆಳಗಿನ 10 ಪಾಠಗಳನ್ನು ಕಲಿಯಬೇಕಿದೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ರಾಜ್ಯವೇ ಈ ಪ್ರಕರಣದ ಅಪ್ಡೇಟ್‌ಗಾಗಿ ಕಾಯುತ್ತಿತ್ತು. ಪ್ರಕರಣದ ಪಿನ್ ಟು ಪಿನ್ ಮಾಧ್ಯಮಗಳು ವರದಿ ಮಾಡಿದ್ದವು. ಹಾಗಾದರೆ ಇದೆಲ್ಲ ನೋಡಿದ ನಾವೆಲ್ಲರೂ ಏನನ್ನು ಮಾಡಬೇಕು, ಏನು ಮಾಡಬಾರದು? ಎಂಬುದನ್ನು ಇಲ್ಲಿ ತಿಳಿಯಿರಿ.

Here are 10 Things We all Should Know From Renuka Swamy Murder Case- Actor Darshan arrest

ದರ್ಶನ್ ಪ್ರಕರಣದಿಂದ ಕಂಡು ಬಂದ 10 ಅಂಶಗಳು

1. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸ್ತ್ರೀಯೇ ಆಗಲಿ, ಪುರುಷನೇ ಆಗಲಿ ದಾಂಪತ್ಯದ ಜೀವನ ಎಲ್ಲೆ ಮೀರಬಾರದು. ಒಂದು ವೇಳೆ ಮಿತಿ ಮೀರಿದರೆ ಅದರಿಂದ ನಾವು ಮಾತ್ರವಲ್ಲದೇ, ನಮ್ಮವರಾದ ಅಪ್ಪ, ಅಮ್ಮ, ಪತಿ, ಪತ್ನಿ, ಮಕ್ಕಳು, ಅತ್ಯಾಪ್ತರೆಲ್ಲರೂ ಸಂಕಷ್ಟ, ಅಪಾರ ನಷ್ಟ ಅನುಭವಿಸಬೇಕಾಗುತ್ತದೆ.

2. ಸ್ಟಾರ್ ನಟನೇ ಆಗಲಿ, ಸಾಮಾನ್ಯ ವ್ಯಕ್ತಿಯೇ ಆಗಲಿ, ಆತ ಮೂರನೇಯವನು ಎಂದಾದ ಮೇಲೆ ಅವರ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಬಾರದು. ಇನ್ನೂ ಸೊಂಟದ ಕೆಳಗಿನ ವಿಚಾರಗಳ ಬಗ್ಗೆ ಮಾತನಾಡುವುದು, ಅದರ ಕುರಿತಾದ ಕೃತ್ಯಗಳನ್ನು ಮಾಡಿದರೆ, ಅದು ನಮ್ಮ ಜೀವಕ್ಕೆ, ಮಾನಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತದೆ.

Here are 10 Things We all Should Know From Renuka Swamy Murder Case- Actor Darshan arrest

3. ಸೆಲೆಬ್ರಿಟಿಗಳ ಬದುಕು ಹೊರಗಿನವರ ಕಣ್ಣಿಗೆ ಅತ್ಯಂತ ಸುಂದರವಾಗಿ ಕಾಣುತ್ತದೆ. ಅದರಕ್ಕೆ ಆಸೆಪಟ್ಟು ಅಡ್ಡದಾರಿ ಹಿಡಿದರೆ ನಾವು ಜೀವನದಲ್ಲಿ ಯಶಸ್ವಿ ಆಗುವುದಿಲ್ಲ. ಸ್ವಂತ ಬುದ್ಧಿ, ಆಲೋಚನೆಗಳಿಂದ ನಿರಂತರವಾಗಿ ಶ್ರಮಿಸಬೇಕು. ನಿಯತ್ತಿನಿಂದ ದುಡಿದರೆ ವಿಳಂಬವಾದರೂ ಯಶಸ್ಸು ಇಂದಲ್ಲಾ ನಾಳೆ ಸಿಕ್ಕೇ ಸಿಗುತ್ತದೆ.

4. ಮನೆಯ ಊಟ ಯಾವಾಗಲೂ ಆರೋಗ್ಯಕರ, ಸುರಕ್ಷಿತ ಎಂಬುದನ್ನು ನಾವು ಮರೆಯಬಾರದು. ಅನಿವಾರ್ಯ ಎನಿಸಿದಾಗಲಷ್ಟೇ ಹೋಟೆಲ್ ಊಟ. ಹೊರಗಿನ ಊಟ, ಅಹಿತಕರ ಸಂಬಂಧ ಯಾವುದು ಒಳ್ಳೆಯದಲ್ಲ. ಇದು ಸಮಾಜದಲ್ಲಿ ತಲೆ ತಗ್ಗಿಸುವಂತೆ ಮಾಡಿಬಿಡುತ್ತದೆ.

5. ಒಬ್ಬ ವ್ಯಕ್ತಿ ಸ್ಟಾರ್ ಆಗುವುದು ಅದೊಂದು ನಿರಂತರ ಶ್ರಮ, ಪ್ರತಿಭೆಯ ಅನಾವರಣ, ಅದೃಷ್ಟ ಎಲ್ಲವು ಒಳಗೊಂಡ ಸಾಧನೆ. ಈ ಸ್ಟಾರ್‌ ಗಿರಿಯ ಪಟ್ಟ ಸಿಗುತ್ತಿದ್ದಂತೆ ವಿನಯ ಹೆಚ್ಚಾಗಬೇಕು. ಸ್ಟಾರ್ ಗಿರಿ ಜೊತೆಗೆ ಬರುವ ಹಣ ನಮ್ಮನ್ನು ದುರಹಂಕಾರಿ ಮಾಡದಂತೆ ನೋಡಿಕೊಳ್ಳಬೇಕು. ಆ ಪಟ್ಟವನ್ನು ಉಳಿಸಿಕೊಂಡು ಹೋಗಬೇಕು. ಸೊಕ್ಕು, ಅಹಂ, ದರ್ಪ ತೋರಿಸಿದರೆ, ವಿವೇಚನೆ ಇಲ್ಲದೇ ವರ್ತಿಸಿದರೆ ಸಾರ್ವಜನಿಕರ ಮಧ್ಯೆ ತಲೆ ಎತ್ತಿ ಓಡಾದಂತಾಗುತ್ತದೆ.

6. ಸೆಲೆಬ್ರೆಟಿ ಸ್ಟೇಟಸ್ ಬಂದ ಮೇಲೆ ಯಾರೊಂದಿಗೆ ನಮ್ಮ ಸ್ನೇಹ, ಜೊತೆಗಿರುವವರು ಎಂಥವರು, ಯಾರೊಂದಿಗೆ ಇರುತ್ತೇವೆ ಎಂಬುದರ ಮೇಲೆ ಹೆಚ್ಚು ನಿಗಾ ಇಡಬೇಕು. ಇದರೊಂದಿಗೆ ವೈಯಕ್ತಿಕ ಜೀವನ, ಆಪ್ತರು, ಕುಟುಂಬ, ಸ್ನೇಹಿತರಿಂದ ದೂರವಾಗದಂತೆ ಉತ್ತಮ ಸಂಬಂಧಗಳನ್ನು ಜವಾಬ್ದಾರಿ ನಿರ್ವಹಿಸಬೇಕು.

7. ಹೆಂಡದ (ಮದ್ಯ) ಅಮಲೇರಿದಾಗ ಬರುವ ಧೈರ್ಯವನ್ನು ಪ್ರದರ್ಶಿಸಬಾರದು. ಏಕೆಂದರೆ ಮದ್ಯದ ನಶೆ ಇಳಿದ ಮೇಲೆ ಆ ಧೈರ್ಯ ಇರುವುದಿಲ್ಲ. ಮದ್ಯ ಕುಡಿದ ಮೇಲೆ ಇಲಿ ಹುಲಿ ಆಗುವುದಿಲ್ಲ. ಅದೇ ರೀತಿ ಮನುಷ್ಯ ಮನುಷ್ಯನಾಗಿಯೇ ವರ್ತಿಸಬೇಕು. ಅದರಲ್ಲೂ ಸೆಲೆಬ್ರೆಟಿಗಳು ಚಟದ ವಿಚಾರಗಳಲ್ಲಿ ನಿಯಂತ್ರಣ ಹೊಂದಿರಬೇಕು. ಇಲ್ಲವಾದರೆ ಅವುಗಳೇ ಬದುಕನ್ನು ಅಂತ್ಯ ಮಾಡಿ ಚಟ್ಟಕ್ಕೆ ದಾರಿ ಮಾಡಿಕೊಡುತ್ತವೆ.

8. ಸಾರ್ವಜನಿಕರೇ ಆಗಲಿ, ಸಾರ್ವಜನಿಕ ವಲಯದಲ್ಲಿ ಬದುಕುವ ಸೆಲೆಬ್ರೆಟಿಗಳೇ ಆಗಲಿ ಸುತ್ತಮುತ್ತ ತಪ್ಪುಗಳಿಗೂ ಉತ್ತೇಜಿಸುವವರಿಂದ ದೂರು ಉಳಿಯಬೇಕು. ಹೊಗಳುಭಟರ ನಡುವೆ ಮೈ ಮರೆತರೆ, ಆಮೇಲಾಗುವ ತೊಂದರೆಗಳಿಗೆ ನಾವೇ ಜವಾಬ್ದಾರರಾಗುತ್ತೇವೆ ಎಂಬುದನ್ನು ನೆನಪಿನಲ್ಲಿಟ್ಟು ಜೀವನ ನಡೆಸಬೇಕು.

9. ಸಿನಿಮಾ ಕೇವಲ ಮನರಂಜನೆಗಾಗಿ, ನಮ್ಮ ಬದುಕನ್ನು ಇನ್ನಷ್ಟು ಸುಂದರಗೊಳಿಸುವ ಅಂಶಗಳಿದ್ದರೆ ಅವುಗಳನ್ನು ಮಾತ್ರವೇ ಅನುಸರಿಸಬೇಕು. ಇದು ಆಗದಿದ್ದಲ್ಲಿ ನೋಡಿ ಸುಮ್ಮನಾಗಬೇಕು. ಯಾರೊಬ್ಬರ ಬಗ್ಗೆಯೂ ಅಂಧಾಭಿಮಾನ ಇಟ್ಟುಕೊಳ್ಳಬಾರದು. ಏಕೆಂದರೆ ಸಿನಿಮಾ ಬೇರೆ, ನೈಜ ಬದುಕು ಬೇರೆ. ನಾವು ಕಾನೂನಿನ ಚೌಕಟ್ಟಿನೊಳಗೆ ವಾಸ್ತವದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು.

10. ಭಾರೀ ಹಣದ ಆಮಿಷ ಒಡ್ಡಿದಾಗ ಅವರ ಕೆಲಸ ಮಾಡಿಕೊಡಲು ಹಿಂದೆ ಮುಂದೆ ಯೋಚನೆ ಮಾಡಬೇಕು. ಅದರಲ್ಲೂ ಗುರುತು ಪರಿಚಯ ಇಲ್ಲದವರರೊಂದಿಗೆ ತೆರಳುವಾಗ ಹತ್ತು ಭಾರಿ ಯೋಚಿಸಿದರೆ ಒಳಿತು. ಏಕೆಂದರೆ ಯಾವ ಮನಸ್ಸಿನಲ್ಲಿ ಏನಿರುತ್ತದೋ, ಅವರೇನು ಮಾಡಿ ನಿಮ್ಮ ಮುಂದೆ ಬಂದು ನಿಂತಿರುತ್ತಾರೋ ಬಲ್ಲವರಾದರು. ಪರರನ್ನು ನಂಬಿದರೆ, ನಿಮ್ಮ ಜೊತೆಗೆ ಕುಟುಂಬವು ಬೀದಿಗೆ ಬರಬಹುದು.

ಸದ್ಯ ನಟ ದರ್ಶನ್ ಕೆಲವು ಅಂಧಾಭಿಮಾನಿಗಳು ತಮ್ಮ ನಟನ ಪರ ಜೈಕಾರ ಹಾಕುವ ಜೊತೆಗೆ ದರ್ಶನ್ ವಿಚಾರವಾಗಿ ಮಾತನಾಡಿದವರ ವಿರುದ್ಧ ಅವಹೇಳನಕಾರಿ ಪೋಸ್ಟ್, ಜೀವ ಬೆದರಿಕೆ ಹಾಕಿದ್ದಾರೆ. ಕೆಲವರ ಮೇಲೆ ಪೊಲೀಸ್ ಕಣ್ಣಿಟ್ಟಿದ್ದು, ಮಂಗಳವಾರ ನಿರ್ದೇಶಕ ಉಮಾಪತಿಗೆ ಬೆದರಿಕೆ ಹಾಕಿದ್ದ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನಟ ದರ್ಶನ್ ಪ್ರಕರಣ ಕುರಿತು ಪೊಲೀಸರಿಗೆ ಇನ್ನಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂಬ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಜೈಲಲ್ಲಿರುವ ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಮೇಕಪ್ ಕಿಟ್ ಕೊಟ್ಟ ಪೊಲೀಸ್ ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದಾರೆ. ಕರ್ತವ್ಯ ಲೋಪ ಆಧಾರದಲ್ಲಿ ಸಿಬ್ಬಂದಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+