ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ನಿಮ್ಮ ಜೇಬಿಗೆ ಕತ್ತರಿ, ಜಂಕ್ಷನ್‌ಗಳಲ್ಲಿ ಸುತ್ತಿದಷ್ಟು ದಂಡ ಬಲು ದುಬಾರಿ!

ಒಂದೇ ಕಡೆ ತಾನೇ ದಂಡ ಕಟ್ಟೋದು ಅಂತ ಯೋಚನೆ ಮಾಡಿ ಹೆಲ್ಮೆಟ್ ಹಾಕದೆ ಓಡಾಡಿದರೇ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ...ಹೇಗೆ ಅಂತಿರಾ ಸುದ್ದಿ ಓದಿ..

|
Google Oneindia Kannada News

ಬೆಂಗಳೂರು, ಫೆಬ್ರವರಿ. 02: ಹೆಲ್ಮೆಟ್ ಇಲ್ಲದೆ ದಂಡ ಕಟ್ಟಿಸಿಕೊಂಡು ಆ ರಶೀದಿಯಲ್ಲೇ ಊರೆಲ್ಲ ಸುತ್ತಬಹುದು ಎಂಬ ಆಸೆಯಿದ್ದರೇ ಇಂದೇ ಬಿಟ್ಟುಬಿಡಿ. ಈಗೇನಿದ್ದರೂ ದಂಡ ನಿಮ್ಮ ಜೇಬುಗಳಿಗೆ ಭಾರಿ ದುಬಾರಿಯಾಗಲಿದೆ.

ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡುತ್ತಾ ನೀವು ಹೋಗುವ ಪ್ರತಿ ಜಂಕ್ಷನ್‌ಗಳಲ್ಲೂ ನಿಮ್ಮ ಗಾಡಿ ನಂಬರ್ ನೊಂದಣಿಯಾಗಿ ದಂಡ ಎಷ್ಟಾದರೂ ಬೀಳಬಹುದು. ಹೋಗುವ ಎಲ್ಲಾ ಜಂಕ್ಷನ್‌ಗಳಲ್ಲಿಯೂ ದಂಡ ಕಟ್ಟಬೇಕಾಗುತ್ತದೆ.

Benglauru Traffic Violation: ಐದೇ ವರ್ಷದಲ್ಲಿ ಪಬ್ಲಿಕ್ ಐ ಆಪ್‌ನಡಿ 8.3 ಲಕ್ಷ ಕೇಸ್ ದಾಖಲು, ಹೇಗೆ ತಿಳಿಯಿರಿBenglauru Traffic Violation: ಐದೇ ವರ್ಷದಲ್ಲಿ ಪಬ್ಲಿಕ್ ಐ ಆಪ್‌ನಡಿ 8.3 ಲಕ್ಷ ಕೇಸ್ ದಾಖಲು, ಹೇಗೆ ತಿಳಿಯಿರಿ

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ಕ್ಯಾಮೆರಾಗಳನ್ನು ಅಳವಡಿಸಿರುವ ಜಂಕ್ಷನ್‌ಗಳಲ್ಲಿ ಹಾದುಹೋದರೆ ಮುಗಿಯಿತು. ಬೈಕ್ ವಾಹನ ಸವಾರರು ಹೊಗುವ ರಸ್ತೆಗಳಲ್ಲಿ ಎಷ್ಟು ಬಾರಿ ಫೈನ್ ಕಟ್ಟಬೇಕು ಎಂಬುದನ್ನು ಕ್ಯಾಮೆರಾ ನಿರ್ಧರಿಸುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Helmetless riders to be fined as many times as junctions they pass

ನಗರದಲ್ಲಿ 280 ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ 280 ಎಎನ್‌ಪಿಆರ್ ಕ್ಯಾಮೆರಾಗಳನ್ನು ಪ್ರಮುಖ 50 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಅದು ಹೆಚ್ಚಾಗಿ ಕೇಂದ್ರ ಪ್ರದೇಶಗಳಲ್ಲಿವೆ. ಹೆಲ್ಮೆಟ್ ಇಲ್ಲದ ಸವಾರರು ಈ ಕ್ಯಾಮೆರಾಗಳಿರುವ ಮೂರು ಜಂಕ್ಷನ್‌ಗಳನ್ನು ಹಾದು ಹೋದರೆ, ತಲಾ 500 ರೂ.ಗಳ ಮೂರು ದಂಡದ ರಸೀದಿಗಳನ್ನು ಪಡೆಯುತ್ತಾರೆ. ಅಂದರೆ ಒಟ್ಟು 1,500 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.

ಈ ಹಿಂದೆ, ಹೆಲ್ಮೆಟ್ ಧರಿಸದ ಸವಾರರಿಗೆ ಟ್ರಾಫಿಕ್ ಪೊಲೀಸರು ಖುದ್ದಾಗಿ ದಂಡ ವಿಧಿಸುತ್ತಿದ್ದರು. ಒಮ್ಮೆ ದಂಡ ಪಾವತಿಸಿದರೆ ಇಡೀ ದಿನ ದಂಡ ಪಾವತಿಸುವಂತಿರಲಿಲ್ಲ. ಆದರೆ, ಈಗ ಸಿಲಿಕಾನ್ ಸಿಟಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತಿ ಸಂಚಾರ ನಿಯಮ ಉಲ್ಲಂಘನೆಯನ್ನು ವಿಭಿನ್ನವಾಗಿ ಎಣಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Helmetless riders to be fined as many times as junctions they pass

ವಿಶೇಷ ಟ್ರಾಫಿಕ್ ಪೊಲೀಸ್ ಕಮಿಷನರ್ ಎಂಎ ಸಲೀಂ, "ಪ್ರತಿಯೊಂದು ಸಂಚಾರ ನಿಯಮ ಉಲ್ಲಂಘನೆಯು ಬೇರೆ ಬೇರೆ ಘಟನೆಯಾಗಿದೆ. ಇದನ್ನು ಹೊಸ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ಬಾರಿ ಹೆಲ್ಮೆಟ್ ಧರಿಸದ ವಾಹನ ಸವಾರರು ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಿರುವ ಜಂಕ್ಷನ್‌ನಲ್ಲಿ ಹಾದುಹೋದಾಗ, ಅವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಅವರು ಫೈನ್ ಕಟ್ಟಿದರೂ ಸಹ ಮುಂದಿನ ಜಂಕ್ಷನ್‌ನಲ್ಲಿ ಹೆಲ್ಮೆಟ್ ಇಲ್ಲದಿದ್ದರೇ ಮತ್ತೆದಮಡ ಕಟ್ಟಬೇಕಾಗುತ್ತದೆ. ದಂಡ ಕಟ್ಟಿದ್ದೇನೆ ಎಂದು ಮತ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡುವುದು ನಡೆಯುವುದಿಲ್ಲ" ಎಂದಿದ್ದಾರೆ.

ಇದರ ಜೊತೆಗೆ ಈ ಎಎನ್‌ಪಿಆರ್ ಕ್ಯಾಮೆರಾಗಳು ಅರ್ಧ ಹೆಲ್ಮೆಟ್‌ಗಳು ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಹೆಲ್ಮೆಟ್ ಧರಿಸಿಲ್ಲ ಎಂದೇ ಗುರುತಿಸುತ್ತವೆ ಎಂದು ಸಲೀಂ ಹೇಳಿದ್ದಾರೆ.

"ಈ ಕ್ಯಾಮೆರಾಗಳ ಸಾಫ್ಟ್‌ವೇರ್ ಅನ್ನು ಹೆಲ್ಮೆಟ್ ಧರಿಸದ ಸವಾರರನ್ನು ಗುರುತಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೆಲ್ಮೆಟ್ ಧರಿಸದಿದ್ದಕ್ಕಾಗಿ ಸ್ವಯಂಚಾಲಿತವಾಗಿ ದಂಡದ ರಶೀದಿ ನೀಡುತ್ತವೆ" ಎಂದು ಮಾಹಿತಿ ನೀಡಿದ್ದಾರೆ.

English summary
Bengaluru Helmetless two wheeler riders to be fined as many times as junctions they pass. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X