ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು?

ಬೆಂಗಳೂರು, ಡಿಸೆಂಬರ್ 17; ಬೆಂಗಳೂರು ನಗರದಿಂದ ಕೊಡಗು ಮತ್ತು ಕಬಿನಿಗೆ ಹೆಲಿಕಾಪ್ಟರ್ ಮೂಲಕ ತೆರಳಬಹುದಾಗಿದೆ. 'ಬ್ಲೇಡ್' ಇಂಡಿಯಾ ಕಂಪನಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ, ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2020ರ ಡಿಸೆಂಬರ್‌ನಲ್ಲಿ ಬ್ಲೇಡ್ ಇಂಡಿಯಾ ವೀಕೆಂಡ್ ಪ್ರೈವೇಟ್ ಚಾರ್ಟರ್‌ ಸೇವೆಯನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸಿತ್ತು. ಈಗ ಬೆಂಗಳೂರು-ಕೊಡಗು, ಬೆಂಗಳೂರು-ಕಬಿನಿ ನಡುವೆ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ.

ಬ್ಲೇಡ್ ಅಮೆರಿಕದ ಸಂಸ್ಥೆಯಾಗಿದ್ದು ಬ್ಲೇಡ್ ಇಂಡಿಯಾ ಹೆಸರಿನಲ್ಲಿ ಭಾರತದಲ್ಲಿ ಉದ್ಯಮ ನಡೆಸುತ್ತಿದೆ. ಸಂಚಾರ ದಟ್ಟಣೆ ಮತ್ತು ರಸ್ತೆಯ ಮೂಲಕ ತ್ವರಿತವಾಗಿ ತಲುಪಲಾಗದ ಸ್ಥಳಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಸಂಸ್ಥೆ ಒದಗಿಸುತ್ತದೆ.

Helicopter Service To Coorg And Kabini Launched

ಹೆಲಿಕಾಪ್ಟರ್ ಸೇವೆ ಕುರಿತು ಬ್ಲೇಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ ಮಾತನಾಡಿದರು, "ಕರ್ನಾಟಕದಲ್ಲಿ ಕೆಲ ಅತ್ಯುತ್ತಮ ತಾಣಗಳಿವೆ. ಆದರೆ ಅಲ್ಲಿಗೆ ತಲುಪುವುದು ಕಷ್ಟ. ರಸ್ತೆ ಮೂಲಕ ಸಾಗುವುದಕ್ಕಿಂತ ಹೆಲಿಕಾಪ್ಟರ್‌ನಲ್ಲಿ 6-7 ಗಂಟೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ" ಎಂದು ಹೇಳಿದರು.

ಹೆಲಿಕಾಪ್ಟರ್ ದರ ಎಷ್ಟು?; ಕೊಡಗು ಮತ್ತು ಕಬನಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು. ಬೆಂಗಳೂರು ನಗರದಿಂದಲೂ ಹೆಚ್ಚಿನ ಜನರು ಈ ತಾಣಗಳಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಬ್ಲೇಡ್ ಇಂಡಿಯಾ ಈ ತಾಣಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ.

ಬೆಂಗಳೂರಿನ ಜಕ್ಕೂರು ಏರ್ ಬೇಸ್‌ನಿಂದ ಕೊಡಗು ಮಾರ್ಗಕ್ಕೆ ಪ್ರತಿ ಸೀಟ್‌ಗೆ 16,000 ರೂ. ದರವನ್ನು ನಿಗದಿ ಮಾಡಲಾಗಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ದರ ಪಟ್ಟಿಯ ಕುರಿತು ಮಾಹಿತಿ ನೀಡಲಾಗಿದೆ.

ಕರ್ನಾಟಕ ಸರ್ಕಾರ ಜಕ್ಕೂರ್ ಏರ್ ಬೇಸ್‌ ಅನ್ನು ಹೆಲಿಕಾಪ್ಟರ್‌ಗಳ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಗೋವಾ, ಪುದುಚೇರಿ, ಕೇರಳ ಮುಂತಾದ ಕಡೆಗಳಿಗೆ ಸಹ ಪ್ರವಾಸಿ ಹೆಲಿಕಾಪ್ಟರ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಏರ್ ಬೇಸ್ ಬಳಕೆಯಾಗಲಿದೆ.

ಹೆಲಿ ಟೂರಿಸಂ; ಕರ್ನಾಟಕದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಹೆಲಿ ಟೂರಿಸಂ ಆರಂಭಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಸಿ. ಪಿ. ಯೋಗೀಶ್ವರ್ ಸಚಿವರಾಗಿದ್ದಾಗ ಮೊದಲ ಹಂತದಲ್ಲಿ ರಾಜ್ಯದ 6 ಪ್ರಮುಖ ನಗರದಲ್ಲಿ ಈ ಸೇವೆ ಆರಂಭಿಸಲು ಉದ್ದೇಶಿಸಲಾಗಿತ್ತು.

ಈ ಕುರಿತು ಸಚಿವರು ಸಭೆ ನಡೆಸಿದ್ದರು. ಆಗ ಬ್ಲೇಡ್, ಚಿಪ್ಸನ್, ಥಂಬಿ ಕಂಪನಿಗಳ ಪ್ರತಿನಿಧಿಗಳು ಪ್ರಾತ್ಯಕ್ಷಿಕೆ ನೀಡಿದ್ದವು. ರಾಜ್ಯದಲ್ಲಿ ಬಳಕೆಯಲ್ಲಿರುವ ಹೆಲಿಪ್ಯಾಡ್ ಮತ್ತು ವಿಮಾನ ನಿಲ್ದಾಣಗಳನ್ನು ಬಳಕೆ ಮಾಡಿಕೊಂಡು ಬೇಡಿಕೆ ಇರುವ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್ ಸೇವೆ ಆರಂಭಿಸುವುದು ಯೋಜನೆಯಾಗಿತ್ತು. ಆದರೆ ಬಳಿಕ ಸಚಿವರು ಬದಲಾವಣೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+