ಹೆಬ್ಬಾಳ-ಶಿವಾಜಿನಗರ ರಸ್ತೆ ದುರಸ್ತಿ ಕಾಮಗಾರಿ ಮಾರ್ಚ್‌ನಲ್ಲಿ ಆರಂಭ

ಬೆಂಗಳೂರು, ಜನವರಿ 10: ಶಾಂತಿನಗರ, ಪುಲಕೇಶಿನಗರ, ಸಿವಿ ರಾಮನ್‌ ನಗರ, ಹೆಬ್ಬಾಳ, ಶಿವಾಜಿನಗರದ ಜನರು ಮಾರ್ಚ್ ವೇಳೆಗೆ ರಸ್ತೆಗುಂಡಿ, ಒಳಚರಂಡಿ ಸಮಸ್ಯೆಯಿಂದ ಮುಕ್ತಿ ಪಡೆಯಲಿದ್ದಾರೆ.

ದೊಡ್ಡನಗರ, ಅಂಬೇಡ್ಕರ್ ಕಾಲೇಜು ರಸ್ತೆ ಹಾಗೂ ಆರ್‌ಎಂವಿ ಕ್ಲಬ್‌ ರಸ್ತೆಯಲ್ಲಿ ಒಳಚರಂಡಿ ತುಂಬಿಕೊಂಡು ದೊಡ್ಡ ಸಮಸ್ಯೆಯಾಗಿತ್ತು.

ಒಂದು ಪುಲಕೇಶಿನಗರ, ಹೆಬ್ಬಾಳ ಮತ್ತೊಂದು ಸಿವಿ ರಾಮನ್ ನಗರ, ಶಾಂತಿನಗರ, ಶಿವಾಜಿನಗರದಲ್ಲಿ ಒಟ್ಟು ಎರಡು ಪ್ಯಾಕೇಜ್‌ನಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಒಟ್ಟು 8 ಸಾವಿರ ಕೋಟಿ ಬಿಬಿಎಂಪಿಯಿಂದ ಮಂಜೂರಾಗಿದೆ. ಟೆಂಡರ್‌ ಕೂಡ ನವೆಂಬರ್‌ನಲ್ಲೇ ಒಪ್ಪಿಗೆ ದೊರೆತಿದೆ.

Hebbal, Shivajinagar roads to get a makeover in March

ಡಿಸೆಂಬರ್‌ನಲ್ಲೇ ಕಾಮಗಾರಿ ಆರಂಭಿಸಬೇಕಿತ್ತು ಆದರೆ ಅದಕ್ಕೂ ಮುನ್ನ ಚುನಾವಣೆಗಳು ಬಂದ ಕಾರಣ ತಡವಾಗಿದೆ, ಆರು ರಸ್ತೆಗುಂಡಿ ಮುಚ್ಚುವ ಯಂತ್ರಗಳನ್ನು ಆರು ಕಡೆಗಳಲ್ಲಿ ಇರಿಸಲಾಗಿದೆ ಎಂದು ಬಿಬಿಎಂಪಿ ಎಂಜಿನಿಯರ್ ತಿಳಿಸಿದ್ದಾರೆ.ಬಿಬಿಎಂಪಿಯು ಮಲ್ಲೇಶ್ವರದಲ್ಲಿ ಹೊಸ ಟೆಂಡರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಮಲ್ಲೇಶ್ವರದ ಮಾರ್ಗೋಸ ರಸ್ತೆ ಮತ್ತು ಕೆಜಿ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಒಂದೆರೆಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಮಲ್ಲೇಶ್ವರದ ಮಾರಮ್ಮ ದೇವಸ್ಥಾನದಿಂದ ಕೆಸಿ ಜನರಲ್ ಆಸ್ಪತ್ರೆವರೆಗಿನ 1685 ಮೀಟರ್ ಉದ್ದದ ರಸ್ತೆ ಮತ್ತು ಕೆಜಿ ರಸ್ತೆಯಲ್ಲಿ ಮೈಸೂರು ಬ್ಯಾಂಕ್ ವೃತ್ತದಿಂದ ಉಪ್ಪಾರಪೇಟೆ ಪೊಲೀಸ್‌ ಠಾಣೆವರೆಗೆ 865 ಮೀಟರ್ ಉದ್ದದ ರಸ್ತೆಯನ್ನು ಟೆಂಡರ್‌ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+