ಬೆಂಗಳೂರಲ್ಲಿ ಭಾರಿ ಗಾಳಿ, ಮಳೆ; ಮರಗಳು ಧರೆಗೆ

ಬೆಂಗಳೂರು, ಜೂನ್ 25 : ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದೆ. ಕೆಲವು ಪ್ರದೇಶದಲ್ಲಿ ಮರಗಳು ಧರೆಗುರುಳಿವೆ. ಎರಡು ದಿನದಿಂದ ನಗರದಲ್ಲಿ ಸಂಜೆ ಮಳೆಯಾಗುತ್ತಿದೆ.

Recommended Video

      ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

      ಗುರುವಾರ ಸಂಜೆ 4.30ರ ಸುಮಾರಿಗೆ ಬೆಂಗಳೂರು ನಗರದಲ್ಲಿ ಮಳೆ ಆರಂಭವಾಯಿತು. 6.30ರ ತನಕ ಗಾಳಿ, ಗುಡುಗು ಮತ್ತು ಸಿಡಿಲಿನ ಜೊತೆಗೆ ಮಳೆ ಸುರಿದಿದೆ. ಜಯನಗರದ 7ನೇ ಬ್ಲಾಕ್‌ನಲ್ಲಿ ಮರವೊಂದು ಧರೆಗುರುಳಿದೆ.

      ಮೆಜೆಸ್ಟಿಕ್, ಮಲ್ಲೇಶ್ವರ, ಕಾಟನ್ ಪೇಟೆ, ಬಿನ್ನಿ ಮಿಲ್, ಓಕಳಿಪುರಂ, ವಿಧಾನಸೌಧ, ಶಿವಾಜಿನಗರ, ಆನಂದ್ ರಾವ್ ಸರ್ಕಲ್, ಕಾರ್ಪೋರೇಷನ್, ಹೆಬ್ಬಾಳ, ನಾಗವಾರ, ಯಲಹಂಕ, ಸಂಜಯ್ ನಗರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆಯಾಗಿದೆ.

      Heavy Rain Lashes Bengaluru June 25 Evening

      ಸಂಜೆ ಮಳೆ ಸುರಿದಿದ್ದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿದರು. ಮಳೆಯಿಂದ ರಕ್ಷಣೆ ಪಡೆಯಲು ಜನರು ಮರ, ಫ್ಲೈ ಓವರ್ ಕೆಳಗೆ ನಿಂತರು. ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿ ಇತ್ತು.

      ಜೂನ್ 24ರಿಂದ 30ರ ತನಕ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+