Bengaluru Rains: ಬೆಂಗಳೂರಿನಲ್ಲಿ ಶುಕ್ರವಾರ ಮುಂಜಾನೆಯೇ ಧಾರಾಕಾರ ಮಳೆ

ಬೆಂಗಳೂರು, ಆ.26: ರಾಜ್ಯದ ಹಲವು ಭಾಗಗಳಲ್ಲಿ ಬಿಡುವು ನೀಡಿರುವ ಮಳೆ ಬೆಂಗಳೂರಿನಲ್ಲಿ ಮಾತ್ರ ಬಿಟ್ಟೂ ಬಿಡದೆ ಸುರಿಯುತ್ತಿದೆ. ಗುರುವಾರ ರಾತ್ರಿಯಿಂದಲೇ ಆರಂಭವಾದ ವರ್ಷಧಾರೆ ಶುಕ್ರವಾರ ಬೆಳಂಬೆಳಗ್ಗೆಯೂ ಧಾರಾಕಾರ ಮುಂದುವರಿದಿದೆ.

ಬೆಂಗಳೂರಿನ ಮಳೆ ಎಂದರೆ ಬಹುತೇಕ ಮಧ್ಯಾಹ್ನದ ನಂತರ ಆರಂಭವಾಗಿ ರಾತ್ರಿವರೆಗೂ ಸುರಿದು ತಣ್ಣಗಾಗುತ್ತದೆ. ಆದರೆ, ಶುಕ್ರವಾರ ಬೆಳಗ್ಗೆಯೇ ಸುರಿಯುತ್ತಿರುವ ಮಳೆಯಿಂದ ಜನರು ಮನೆಯಿಂದ ಹೊರಬರುವುದೇ ಅಪರೂಪವಾಗಿದೆ.

Heavy rain in Bengaluru early Friday morning

ಬೆಳಗಿನ ಜಾವ ತರಕಾರಿ, ಹೂ-ಹಣ್ಣುಗಳನ್ನು ತರಲು ಮಾರುಕಟ್ಟೆಗೆ ಹೋಗುವ ವ್ಯಾಪಾರಿಗಳು, ಮುಂಜಾನೆಯ ಶಿಫ್ಟ್‌ಗೆ ತೆರಳುವಂತ ನೌಕರ ವರ್ಗವರು, ವಾಕಿಂಗ್ ಮಾಡುವವರು, ಜಿಮ್‌ಗಳಿಗೆ ತೆರಳುವವರು ಮಳೆಯಿಂದಾಗಿ ತೊಂದರೆ ಅನುಭವಿಸಬೇಕಾಯಿತು. ಇಂದಿನ ವ್ಯಾಪಾರಕ್ಕೆ ಕಲ್ಲು ಬಿತ್ತು ಎಂತಲೇ ಅನೇಕ ದಿನಗೂಲಿ ನೌಕರರು ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

Heavy rain in Bengaluru early Friday morning

ಇನ್ನು ರೈಲು ನಿಲ್ದಾಣ, ಬಸ್‌ನಿಲ್ದಾನಗಳಲ್ಲಿ ದೂರದ ಊರುಗಳಿಂದ ಬಂದ ಪ್ರಯಾಣಿಕರೂ ಸಹ ಮಳೆಯಿಂದಾಗಿ ಪರದಾಡಿದರು. ಬಿಎಂಟಿಸಿ ಬಸ್‌ಗಳನ್ನು ಹಿಡಿಯಲು ಮಳೆಯಲ್ಲಿ ನೆನೆದುಕೊಂಡೇ ಓಡುತ್ತಿದ್ದರು. ಮಳೆ ನಿರಂತರವಾಗಿರುವುದರಿಂದ ಆಟೋಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಅದರಲ್ಲೂ ಕೆಲವರು ದುಪ್ಪಟ್ಟು ದರ ಕೇಳಿ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವುದು ಅಲ್ಲಲ್ಲಿ ಕೇಳಿಬರುತ್ತಿದೆ.

ಮುನ್ಸೂಚನೆ:
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಮೋಡಕವಿದ ವಾತಾವರಣ ಇರುತ್ತದೆ. ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+