Bengaluru Rain: ಭಾರಿ ಮಳೆಗೆ ಬೆಂಗಳೂರು ತತ್ತರ; ತುಂಬಿ ಹರಿದ ರಸ್ತೆಗಳು, ಪರದಾಡಿದ ಜನ
ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವು ಕಡೆಗಳಲ್ಲಿ 50 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದ್ದು ರಸ್ತೆಗಳು ತುಂಬಿದ ಪರಿಣಾಮ ಭಾರಿ ಟ್ರಾಫಿಕ್ ಉಂಟಾಗಿತ್ತು.
ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣ ರಸ್ತೆ - ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆ, ಸುಮನಹಳ್ಳಿ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್, ಹೆಬ್ಬಾಳದಿಂದ ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿಗೆ ಹೋಗುವ ಹೊರವರ್ತುಲ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಭಾರಿ ಟ್ರಾಫಿಕ್ ಉಂಟಾಗಿತ್ತು.

ನಂದಿನಿ ಲೇಔಟ್ 51ಮಿ.ಮೀ, ಹಂಪಿ ನಗರ 50 ಮಿ.ಮೀ, ನಾಗಾಪುರ 49 ಮಿ.ಮೀ, ಮಾರುತಿ ಮಂದಿರ 48 ಮಿ.ಮೀ, ಕೊಟ್ಟಿಗೆಪಾಳ್ಯ 40 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಟ್ರಾಫಿಕ್ ಪೊಲೀಸರು ಹಗಲಿರುಳು ಸಾಕಷ್ಟು ಶ್ರಮವಹಿಸಿದರು. ಆದರೆ ನಿಂತ ನೀರು ಸರಾಗವಾಗಿ ಹರಿಯದ ಕಾರಣ ಮತ್ತು ನಿರಂತರವಾಗಿ ಮಳೆಯಾದ ಕಾರಣ ಸಂಚಾರ ದಟ್ಟಣೆ ಹೆಚ್ಚಿತ್ತು.
Inundated strech from yelahanka airforce to MVIT cross.... pic.twitter.com/LTiCOTlrpT
— SUDEEP kannadiga_2001 (@sudeepkannadiga) May 9, 2024
ಈ ಪ್ರದೇಶಗಳಲ್ಲಿ ಉತ್ತಮ ಮಳೆ
ಕಂಟೋನ್ಮೆಂಟ್ ಪ್ರದೇಶ, ರಾಜಾಜಿನಗರ, ಮಲ್ಲೇಶ್ವರ, ಸದಾಶಿವನಗರ, ಶೇಷಾದ್ರಿಪುರಂ, ವಸಂತ ನಗರ, ಸಿವಿ ರಾಮನ್ ನಗರ, ಹೆಬ್ಬಾಳ, ಜಾಲಹಳ್ಳಿ, ಮತ್ತಿಕೆರೆ, ಪೀಣ್ಯ, ಯಶವಂತಪುರ, ಬಸವನಗುಡಿ, ಅಂಜನಾಪುರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ಮಹಾಲಕ್ಷ್ಮಿ ಲೇಔಟ್, ನಾಯಂಡಹಳ್ಳಿ, ರಾಜಾಜಿನಗರ, ರಾಜರಾಜೇಶ್ವರಿ ನಗರ, ವೈಟ್ ಫೀಲ್ಡ್, ಮಹದೇವಪುರ, ಕಲ್ಯಾಣ ನಗರ, ಬೊಮ್ಮನಹಳ್ಳಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಅರೆಕೆರೆ, ಬೇಗೂರು, ಗೊಟ್ಟಿಗೆರೆ, ಹುಳಿಮಾವು, ಕೊತ್ನೂರು, ವಿಜನಗರದಲ್ಲಿ ಭಾರಿ ಮಳೆಯಾಗಿದೆ.
ಜಯನಗರ, ಇಂದಿರಾನಗರ, ಶಿವಾಜಿನಗರ, ಕೆಆರ್ ಪುರ, ಮಾರತ್ ಹಳ್ಳಿ, ಬೊಮ್ಮಸಂದ್ರ, ಕಮ್ಮನಹಳ್ಳಿ, ಕೋರಮಂಗಲ, ಜೆಪಿ ನಗರ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಪದ್ಮನಾಭನಗರ, ಕೆಐಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.












Click it and Unblock the Notifications