ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru weather: ಬೆಂಗಳೂರಲ್ಲಿ ನ. 20ರ ವರೆಗೆ ಚಳಿ, ಬಳಿಕ 2 ದಿನ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ನವೆಂಬರ್ 18: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಅತ್ಯಧಿಕ ಚಳಿ ಕಂಡು ಬರುತ್ತಿದ್ದು, ಇದು ಮುಂದಿನ ಎರಡು ದಿನ ಮುಂದುವರಿಯಲಿದೆ. ನಂತರ ಎರಡು ದಿನ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ನಗರದಲ್ಲಿ ಕೆಲವು ದಿನಗಳಿಂದ ಹಂತ ಹಂತವಾಗಿ ಚಳಿ, ಬೆಳಗ್ಗೆ ಮಂಜಿನ ವಾತಾವರಣದಲ್ಲಿ ಏರಿಕೆ ಆಗುತ್ತಿದೆ. ಗುರುವಾರವು ದಟ್ಟ ಮಂಜು ನಗರವನ್ನು ಆವರಿಸಿತ್ತು. ಅದೇ ರೀತಿ ಎರಡು ಮೂರು ದಿನ ಅಂದರೆ ನವೆಂಬರ್ 20ರವರೆಗೆ ಬೆಳಗ್ಗೆ ಮತ್ತು ಸಂಜೆ ನಂತರ ಚಳಿಯ ಪ್ರಮಾಣ ಹೀಗೆ ಮುಂದುವರಿಯಲಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಈಗಾಗಲೇ ಬೆಳಗ್ಗೆ ಮತ್ತು ಸಂಜೆ ನಂತರ ಓಡಾಟ ಕಡಿಮೆ ಮಾಡುತ್ತಿರುವ ಜನರು ಇನ್ನೂ ಕೆಲವು ದಿನ ಬೆಚ್ಚಗಿನ ಧಿರಿಸಿನ ಮೊರೆ ಹೋಗಬೇಕಿದೆ.

ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ: ಎಲ್ಲಿಂದ ಎಲ್ಲಿಗೆ? ಯಾವಾಗ? ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ: ಎಲ್ಲಿಂದ ಎಲ್ಲಿಗೆ? ಯಾವಾಗ?

ಕಳೆದೊಂದು ವಾರದಿಂದ ನಗರಲ್ಲಿ ದಾಖಲಾಗುತ್ತಿರುವ ತಾಪಮಾನದಲ್ಲಿ ಇಳಿಕೆ ಕಂಡು ಬಂದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶುಕ್ರವಾರ ನಿರೀಕ್ಷಿತ ಕನಿಷ್ಠ ತಾಪಮಾನಕ್ಕಿಂತ ಶೇ.2ರಷ್ಟು ಕಡಿಮೆಯೇ 15.6ಡಿಗ್ರಿ ಸೆಲಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಇನ್ನಷ್ಟು ಇಳಿಕೆ ಕಾಣುವ ಲಕ್ಷಣಗಳು ಇದೆ.

Heavy fog and cold till November 20 in Bengaluru city

ಮಂಜು ಬಳಿಕ 2ದಿನ ಮಳೆ ಸಾಧ್ಯತೆ

ನವೆಂಬರ್ 20ರ ಭಾನುವಾರದ ನಂತರ ನಗರದಲ್ಲಿ ಮತ್ತೆ ಎರಡು ದಿನ ಮಳೆ ಅಬ್ಬರ ಕಂಡು ಬರಲಿದೆ. ಹಲವು ಪ್ರದೇಶಗಳಲ್ಲಿ ತುಂತುರು ಮಳೆಯಾದರೆ, ಇನ್ನು ಕೆಲವು ಕಡೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದೆ. ಇದಾದ ಬಳಿಕ ಚಳಿ ಕಡಿಮೆಯಾಗಿ ಉಷ್ಟಾಂಶ ಹೆಚ್ಚುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸಾಮಾನ್ಯವೆಂಬಂತೆ ಕನಿಷ್ಠ ತಾಪಮಾನ 17-18ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.

ಶುಕ್ರವಾರ ಬೆಂಗಳೂರು ಎಚ್‌ಎಲ್‌ ಏರ್‌ಫೋರ್ಟ್‌ನಲ್ಲಿ ಶೇ.2ರಷ್ಟು ಕಡಿಮೆ ಅಂದರೆ 18.4ಡಿಗ್ರಿ ಸೆಲ್ಸಿಯ್ಸಸ್ ಕನಿಷ್ಠ ತಾಪಮಾನ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 16.5ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
Heavy fog and cold weather create till November 20 in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X