ಆರು ಬೋಗಿಗಳ ಮತ್ತೊಂದು ಮೆಟ್ರೋ ರೈಲು ಸೇವೆಗೆ ಕುಮಾರಸ್ವಾಮಿ ಚಾಲನೆ
ಬೆಂಗಳೂರು, ನವೆಂಬರ್ 22: ಆರು ಬೋಗಿಗಳ ಮೂರನೇ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು ಚಾಲನೆ ನೀಡಿದರು.
ವಿಧಾನಸೌಧ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಲಾಯಿತು.
ಮೆಟ್ರೋದಲ್ಲಿ ಜನ ದಟ್ಟಣೆ ಕಡಿಮೆ ಮಾಡಲು ಆರು ಬೋಗಿಗಳ ಮೆಟ್ರೋವನ್ನು ಆರಂಭಿಸಲಾಗಿದೆ. ಈಗಾಗೇ ಎರಡು ಬೋಗಿಗಳು ತನ್ನ ಕಾರ್ಯ ಆರಂಭಿಸಿದ್ದು ಇದೀಗ ಮೂರನೇ ಬೋಗಿಯ ಸಂಚಾರ ಆರಂಭವಾಗಿದೆ.

1421 ಕೋಟಿ ರೂ ವೆಚ್ಚದಲ್ಲಿ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ನಿಂದ 150 ಬೋಗಿಗಳನ್ನು ಹಸ್ತಾಂತರವಾಗಿ, ಕಾರ್ಯಾಚರಿಸುತ್ತಿದ್ದ ಮೂರು ಬೋಗಿಗಳನ್ನು ಎರಡು ರೈಲಿಗೆ ಜೋಡಿಸಲಾಗಿದೆ. ಈ ಎರಡೂ ರೈಲುಗಳು ಬೈಯಪ್ಪನಹಳ್ಳಿ-ಮೈಸೂರು ರಸ್ತೆಯ ನೇರಳೆ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಒಂದು ರೈಲು ಮತ್ತೊಂದೆಡೆಗೆ ಸಂಚರಿಸಲು 40 ನಿಮಿಷ ಬೇಕಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಿದೆ.
ಪ್ರತಿ ತಿಂಗಳು ಆರು ಬೋಗಿಗಳ ಒಂದು ಅಥವಾ ಎರಡು ರೈಲುಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ತಿಂಗಳು ಆರು ಬೋಗಿಗಳ ಎರಡನೇ ರೈಲು ಸಂಚಾರ ಆರಂಭಿಸಿತ್ತು. ವೈಟ್‌ಫೀಲ್ಡ್ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗದಲ್ಲಿ ನಿತ್ಯ ಸರಾಸರಿ 1.87 ಲಕ್ಷ ಮಂದಿ ಸಂಚರಿಸುತ್ತಾರೆ.
ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 1.60 ಲಕ್ಷ ಜನರು ಪ್ರಯಾಣಿಸುತ್ತಾರೆ. ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸರುವುದರಿಂದ ಅಲ್ಲಿಗೆ ಆರು ಬೋಗಿಗಳ ಮೂರನೇ ರೈಲನ್ನು ನೀಡಲಾಗುತ್ತಿದೆ.












Click it and Unblock the Notifications