ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸಿದಂತೆ ಶಿರಾದಲ್ಲಿ ಕಮಲ ಅರಳಿಸಲು ಆಗಲ್ಲ!

ಬೆಂಗಳೂರು, ಅ. 21: ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಹೊರಟಿದ್ದಾರೆ. ಆದರೆ ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಹಣಬಲದಿಂದ ಶಿರಾ ಉಪ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಆಗುವುದಿಲ್ಲ. ಹಣಬಲದಿಂದ ಗೆಲ್ಲುತ್ತೇವೆ ಅನ್ನೋದು ಬಿಜೆಪಿ ನಾಯಕರ ಭ್ರಮೆಯಷ್ಟೇ. ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸಿದಂತೆ, ಶಿರಾದಲ್ಲಿಯೂ ಕಮಲ ಅರಳಿಸಲು ಆಗುವುದಿಲ್ಲ. ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರತಿ ದಿನವೂ ಭಾನುವಾರ ಆಗಲಾರದು ಎಂದು ಇಂಗ್ಲೀಷ್ ಗಾದೆಯನ್ನು ನೆನಪಿಸಿದರು.

HD Kumaraswamy said that BJP could not win in by poll with money power

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಅವರಿಗೆ ಘನತೆ ಎಂಬುದೇ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಹೇಗಿದ್ದೆ? ಎಂಬುದು ನಾಡಿನ ಜನತೆಗೆ ಗೊತ್ತು. ಜನಸಾಮಾನ್ಯರಿಗೆ ನನ್ನಷ್ಟು ಹತ್ತಿರವಾಗಿದ್ದ ಮುಖ್ಯಮಂತ್ರಿ ಯಾರೂ ಸಿಗುವುದಿಲ್ಲ. ಅಧಿಕಾರ ಇಲ್ಲದಿದ್ದರೂ ಜನ ನಮ್ಮ ಮನೆಗೆ ಬರುತ್ತಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಅವರು ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

HD Kumaraswamy said that BJP could not win in by poll with money power
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+