• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮಾರ್ಟ್ ಏಷ್ಯಾ ಎಕ್ಸ್ ಪೋ ಉದ್ಘಾಟಿಸಿದ ಸಿಎಂ ಕುಮಾರಸ್ವಾಮಿ

|

ಬೆಂಗಳೂರು, ಅಕ್ಟೋಬರ್ 04, 2018: ಸ್ಮಾರ್ಟ್ ಏಷ್ಯಾ ಎಕ್ಸ್ ಪೋ ಶೃಂಗಸಭೆ ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬಿಶನ್ ಸೆಂಟರ್ (ಬಿಐಇಸಿ)ನಲ್ಲಿ ತೈಪೆ ವರ್ಲ್ಡ್ ಟ್ರೇಡ್ ಸೆಂಟರ್(ಟಿಡಬ್ಲ್ಯೂಟಿಸಿ) ಆಯೋಜಿಸಿರುವ ಎಕ್ಸ್ ಪೋವನ್ನು ಮುಖ್ಯಮತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇಂದು ಉದ್ಘಾಟಿಸಿದರು.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಜೇಮ್ಸ್ ಸಿ.ಎಫ್.ಹಾಂಗ್, ತೈಪೆ ವಲ್ರ್ಡ್ ಟ್ರೇಡ್ ಸೆಂಟರ್(ಟಿಡಬ್ಲ್ಯೂಟಿಸಿ) ಅಧ್ಯಕ್ಷ; ಕರ್ನಾಟಕ ರಾಜ್ಯ ಕೌನ್ಸಿಲ್ ಅಧ್ಯಕ್ಷ (ಎಫ್‍ಐಸಿಸಿಐ) ಶೇಖರ್ ವಿಶ್ವನಾಥನ್ ಮತ್ತು ಯು.ಡಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಉಪಸ್ಥಿತರಿದ್ದರು.

ಈ ವ್ಯಾಪಾರ ಮೇಳದಲ್ಲಿ ಹಲವಾರು ಮುಂಚೂಣಿಯ ತೈವಾನಿನ ಬ್ರಾಂಡ್‍ಗಳು ಅತ್ಯಾಧುನಿಕ ಪರಿಕರಗಳನ್ನು ಸ್ಮಾರ್ಟ್ ಸಿಟಿ, ಸ್ಮಾರ್ಟ್ ಸಾರಿಗೆ, ಸ್ಮಾರ್ಟ್ ಎನರ್ಜಿ, ಸ್ಮಾರ್ಟ್ ಹೆಲ್ತ್ ಕೇರ್, ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ) ಪರಿಕರಗಳು ಮತ್ತು ಸ್ಮಾರ್ಟ್-ಲೈಫ್ ಸಾಧನಗಳ ಉದ್ಯಮಗಳು ಇದ್ದವು.

ಕರ್ನಾಟಕ ನಗರ ಅಭಿವೃದ್ಧಿ ನಿಗಮ, ಭಾರತ ಸರ್ಕಾರದ ಕಾಯಿರ್ ಬೋರ್ಡ್, ಟಾಟಾ ಗ್ರೂಪ್, ಲೋಧಾ ಗ್ರೂಪ್, ಮಿಜುಹೋ ಬ್ಯಾಂಕ್, ಇಂಡಿಯನ್ ನ್ಯಾಶನಲ್ ಇನ್ಪಾಮ್ರ್ಯಾಟಿಕ್ಸ್ ಸೆಂಟರ್, ನಾಶಿಕ್ ಇಂಜಿನಿಯರಿಂಗ್ ಕೈಗಾರಿಕಾ ಕ್ಲಸ್ಟರ್ ಒಳಗೊಂಡಂತೆ 50 ಪ್ರದರ್ಶಕರಿಂದ 100ಕ್ಕೂ ಹೆಚ್ಚು ಬೂತ್‍ಗಳಿಂದ ಪ್ರದರ್ಶನ ಕಾಣಬಹುದು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಮೇಳದಲ್ಲಿ ಹೈ-ಎಂಡ್ ಪೋನ್ ಸೇರಿದಂತೆ ಹಲವಾರು ರೀತಿಯ ಅತ್ಯಾಧುನಿಕ ಪರಿಕರಗಳಾದ ಲ್ಯಾಪ್ ಟಾಪ್‍ಗಳು, ಸ್ಕ್ಯಾನರ್‍ಗಳು, ಹಾರ್ಡ್ ಡಿಸ್ಕ್‍ಗಳು, ಸ್ಮಾರ್ಟ್ ಹೆಲ್ತ್ ಕೇರ್ ಉತ್ಪನ್ನಗಳು, ಸ್ಮಾರ್ಟ್-ಲೈಫ್ ಸಾಧನಗಳು, ಮಾರ್ಜಕಗಳು, ಗೋಡೆ ಅಲಂಕಾರಕ ವಸ್ತುಗಳು, ರೀಡಿಂಗ್ ದೀಪಗಳು, ರೌಟರ್ ಗಳು ಹೀಗೆ ನವೀನ ಸಂಶೋಧನೆ, ಗುಣಮಟ್ಟ, ವಿನ್ಯಾಸ ಹಾಗೂ ಮಾರ್ಕೆಟಿಂಗ್‍ನಿಂದ ಎಕ್ಸೆಲೆನ್ಸ್ ಪ್ರಶಸ್ತಿಗೆ ಭಾಜನರಾದ ಬ್ರ್ಯಾಂಡ್ಸ್ ಗಲಾದ ಆಸಸ್, ಏಸರ್, ಎಂಎಸ್‍ಐ, ಎಐಎಫ್‍ಎ, ಸೈಬರ್ ಪವರ್, ಅಡಾಟಾ, ಪ್ಲುಸ್ಟೆಕ್, ಟ್ರಾನ್ಸೆಂಡ್, ಟೊಕುಯೊ, ಫೇಕಾ, ಡಿ ಲಿಂಕ್, ಒಫ್ರಾ 9, ಬೆನ್‍ಕ್ಯೂ ತೈವಾನ್ ಎಕ್ಸಲೆನ್ಸ್ ಬೂತ್‍ನ ಭಾಗವಾಗಿದೆ.

ಹೊಸ ತಂತ್ರಜ್ಞಾನವನ್ನು ಪ್ರದರ್ಶಿಸುವುದರ ಹೊರತಾಗಿ ತೈವಾನ್‍ನ ಸಂಕೇತ ತೈವಾನ್ ಎಕ್ಸೆಲೆನ್ಸ್, ವಿಶ್ವದಾದ್ಯಂತ ಬಳಕೆದಾರರಿಗೆ ಅದ್ಭುತ ಮೌಲ್ಯ ತಂದುಕೊಡುತ್ತಿದೆ.

ಸ್ಮಾರ್ಟ್ ಐಸಿಟಿ, ಸ್ಮಾರ್ಟ್ ಹೆಲ್ತ್‍ಕೇರ್, ಇಂಟರ್ನೆಟ್ ಪರಿಕರಗಳು, ಸ್ಮಾರ್ಟ್ ಲೈಫ್ ಸಾಧನಗಳ ಉದ್ಯಮಕ್ಕೆ ಸೇರಿದ ಉತ್ಪನ್ನಗಳನ್ನು ಸ್ಮಾರ್ಟ್ ಏಷ್ಯಾ 2018ರಲ್ಲಿ ಪ್ರದರ್ಶನ, ಪ್ರತಿ ವರ್ಷ ತೈವಾನ್ ಎಕ್ಸೆಲೆನ್ಸ್ ಪ್ರಶಸ್ತಿಗೆ ಪುರಸ್ಕಾರವಾದ ತೈವಾನ್‍ನ ಉತ್ತಮ ಕಂಪನಿಗಳ ಹೊಸ ಉತ್ಪನ್ನಗಳನ್ನು ವಿಶ್ವಾದ್ಯಂತ ಪ್ರದರ್ಶಿಸುತ್ತದೆ.

English summary
The SMART ASIA India Expo & Summit is celebrating its opening ceremony today at the Bangalore International Exhibition Centre (BIEC), and unveiling the largest smart cities event in Southern India. Organized by the Taipei World Trade Centre (TWTC), the Expo was inaugurated today by CM H. D. Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X