• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಸಜ್ಜಿತ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಕುಮಾರಸ್ವಾಮಿ

|

ಬೆಂಗಳೂರು, ನವೆಂಬರ್ 20: ಸರ್ಕಾರದ ವಿವಿಧ ಇಲಾಖೆಗಳ ಸಾಧನೆಯನ್ನು ಬಿತ್ತರಿಸಲು ಅತ್ಯುತ್ತಮ ವೇದಿಕೆಯಾಗಿರುವ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರವನ್ನು ಸದಾ ಚಟುವಟಿಕೆಗಳ ಕೇಂದ್ರವನ್ನಾಗಿ ರೂಪಿಸಲು ಯತ್ನಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸೌಧದ ಮೂರನೇ ಮಹಡಿಯಲ್ಲಿ 3.6 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ವಿರುದ್ಧ ರಾಜ್ಯವ್ಯಾಪಿ ಹೋರಾಟಕ್ಕೆ ಯಡಿಯೂರಪ್ಪ ಕರೆ

ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಸಹೋದ್ಯೋಗಿಗಳ ಸಹಕಾರ ಪಡೆಯುವುದಾಗಿ ತಿಳಿಸಿದ ಅವರು ತಮ್ಮ ಈ ಆಶಯಕ್ಕೆ ಪುಷ್ಠಿ ನೀಡಲು ತಾವೇ ಪ್ರಮುಖ ಸಭೆ-ಸಮಾರಂಭಗಳನ್ನು ಆಯೋಜಿಸುವುದರ ಜೊತೆಗೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಮಾಧ್ಯಮ ಮಿತ್ರರನ್ನು ಆಕರ್ಷಿಸಲು ಯತ್ನಿಸುವುದಾಗಿ ಪ್ರಕಟಿಸಿದರು. ಅಲ್ಲದೆ, ಈ ಸಭಾಂಗಣವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿ ಸಭಾಂಗಣವನ್ನು ಸಾರ್ಥಕಪಡಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಪತ್ರಕರ್ತರಾಗಿದ್ದ ಮಹಾತ್ಮಾ ಗಾಂಧಿ

ಪತ್ರಕರ್ತರಾಗಿದ್ದ ಮಹಾತ್ಮಾ ಗಾಂಧಿ

ಪತ್ರಕರ್ತರೂ ಆಗಿದ್ದ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಮೈದೇಳಿರುವ ಈ ಸಭಾಂಗಣವನ್ನು ಮಹಾತ್ಮಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಉದ್ಘಾಟಿಸುವ ಸೌಭಾಗ್ಯ ತಮ್ಮದಾಗಿರುವುಕ್ಕೆ ತಾವು ಭಾಗ್ಯಶಾಲಿ ಎಂದು ಭಾವಿಸುವುದಾಗಿ ತಿಳಿಸಿದ ಕುಮಾರಸ್ವಾಮಿ ಅವರು ಈ ಮುನ್ನ 2007 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧ ಕಟ್ಟಡವನ್ನು ಲೋಕಾರ್ಪಣೆ ಮಾಡಿದುದನ್ನು ಸ್ಮರಿಸಿದರು.

ದೆಹಲಿಯ ನಂತರದ ಸ್ಥಾನ ಬೆಂಗಳೂರಿಗೆ

ದೆಹಲಿಯ ನಂತರದ ಸ್ಥಾನ ಬೆಂಗಳೂರಿಗೆ

ನವದೆಹಲಿಯನ್ನು ಹೊರತುಪಡಿಸಿದರೆ ಮಾಧ್ಯಮಗಳ ಅಗತ್ಯ ಪೂರೈಸುವ ಸುಸಜ್ಜಿತ ಸಭಾಂಗಣ ಬೆಂಗಳೂರಿನಲ್ಲಿಯೇ ಇದೆ ಎಂಬುದು ಅಭಿಮಾನದ ಸಂಗತಿಯಾಗಿದೆ. ಒಂದು ಎಲ್ ಇ ಡಿ ಗೋಡೆ, ಮೂರು ಎಲ್ ಸಿ ಡಿ ಪರದೆ, ವೈ-ಫೈ ಹಾಗೂ ನೇರ ಪ್ರಸಾರ ವ್ಯವಸ್ಥೆ, ಪ್ರತಿ ಆಸನದ ಮುಂದೆ ಮೈಕ್ ಒಳಗೊಂಡ 125 ಆಸನಗಳ ಸಂಪೂರ್ಣ ಹವಾನಿಯಂತ್ರಿತ ಹಾಗೂ ಮಾಧ್ಯಮ-ಸ್ನೇಹೀ ಈ ಸಭಾಂಗಣವನ್ನು ಬಳಸಲು ಪ್ರಾರಂಭಿಸಿದರೆ ಭದ್ರತೆಯ ಹೆಸರಿನಲ್ಲಿ ವಿಧಾನ ಸೌಧದಲ್ಲಿ ಅನಗತ್ಯವಾಗಿ ಮುಜುಗುರಕ್ಕೆ ಒಳಗಾಗುವ ಮಾಧ್ಯಮ ಮಿತ್ರರ ಕಷ್ಟವನ್ನು ತಪ್ಪಿಸಬಹುದಾಗಿದೆ. ಸರ್ಕಾರದ ಈ ಕ್ರಮವನ್ನು ಅನ್ಯಥಾ ಭಾವಿಸಬಾರದು ಎಂದು ಮುಖ್ಯಮಂತ್ರಿ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದರು.

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಟಿಬಿ ಜಯಚಂದ್ರ ಅಸಮಾಧಾನ

ಎಂ.ಆರ್.ಶ್ರೀನಿವಾಸಮೂರ್ತಿ ವರದಿ ಅನುಷ್ಠಾನ

ಎಂ.ಆರ್.ಶ್ರೀನಿವಾಸಮೂರ್ತಿ ವರದಿ ಅನುಷ್ಠಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಾಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಇಲಾಖಾ ಪುನಾರಚನೆ ಕುರಿತು ಸರ್ಕಾರ ರಚಿಸಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವರದಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಕುಮಾರಸ್ವಾಮಿ ಅವರ ಚಿತ್ರಗಳ ಉಡುಗೊರೆ

ಕುಮಾರಸ್ವಾಮಿ ಅವರ ಚಿತ್ರಗಳ ಉಡುಗೊರೆ

ಇದೇ ಸಂದರ್ಭದಲ್ಲಿ ಇಲಾಖೆಯ ಚಿತ್ರ ಭಂಡಾರದಿಂದ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳ ಪೋಟೋ ಆಲ್ಬಂ ಶಾಸಕರ ದಿನಾಚರಣೆಯ ಸಂದರ್ಭದಲ್ಲಿ ಕ್ರಿಕೆಟ್ ಆಟದಲ್ಲಿ ಬ್ಯಾಟ್ ಹಿಡಿದು ಚೆಂಡನ್ನು ಹೊಡೆದ ವಿಶೇಷ ಛಾಯಾಚಿತ್ರದ ಪಟವನ್ನು ಇಲಾಖಾ ನಿರ್ದೇಶಕರು ಕೊಡುಗೆಯಾಗಿ ನೀಡಿದರು.

ಸಂಪುಟ ಸಭೆಯಲ್ಲಿ ಎಚ್ದಿಕೆಗೆ ರಮೇಶ್ ಜಾರಕಿಹೊಳಿ ಕೊಟ್ಟ ಪತ್ರದಲ್ಲಿ ಇದ್ದದ್ದಾದರೂ ಏನು?

ವಾರ್ತಾ ಇಲಾಖೆ ಎಲ್ಲರ ಮನ್ನಣೆ ಗಳಿಸಿದೆ

ವಾರ್ತಾ ಇಲಾಖೆ ಎಲ್ಲರ ಮನ್ನಣೆ ಗಳಿಸಿದೆ

ಈ ಮುನ್ನ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ವೃತ್ತಿ ನೈಪುಣ್ಯತೆ ಹಾಗೂ ವೃತ್ತಿಪರತೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಲ್ಲರ ಮನ್ನಣೆ ಗಳಿಸಿದೆ ಎಂದರು.

ಮಾಧ್ಯಮಗಳಲ್ಲಿ ಸಿಬ್ಬಂದಿ ಕೊರತೆ

ಮಾಧ್ಯಮಗಳಲ್ಲಿ ಸಿಬ್ಬಂದಿ ಕೊರತೆ

ಆಡಳಿತ ವಿಭಾಗದ ಜಂಟಿ ನಿರ್ದೇಶಕ ಹೆಚ್ ಬಿ ದಿನೇಶ್ ಅವರು ಮಾತನಾಡಿ ಒಂದೆಡೆ ಮಾಧ್ಯಮಗಳ ಸಂಖ್ಯೆ ಬೆಳೆಯುತ್ತಿದೆ. ಮತ್ತೊಂದೆಡೆ ಸಿಬ್ಬಂದಿ ಕೊರತೆ ಇಲಾಖೆಯನ್ನು ಕಾಡುತ್ತಿದೆ ಎಂಬ ಅಂಶವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಂದೇಶ ಸಾರುವ ಮಹತ್ತರ ಕಾರ್ಯ ನಿರ್ವಹಿಸುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗಾಂಧಿ ಭವನದ ನಿರ್ಮಾಣ ಕಾರ್ಯ ಚುರುಕುಗೊಳ್ಳಲಿ ಎಂದು ಆಶಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ ಸಿದ್ದರಾಜು, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರೂ ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು.

ಬೆಳಗಾವಿ, ಬಾಗಲಕೋಟೆ ರೈತರ ಜೊತೆ ಇಂದು ಕುಮಾರಸ್ವಾಮಿ ಸಭೆ

English summary
CM HD Kumaraswamy today inaugurated a Mahatma Gandhi information center building in information and public relation building in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X