ಶಿಕ್ಷಕರ ದಿನದಂದು ದೇವೇಗೌಡರು ನೆನೆದ ಗುರು ಯಾರು?
Recommended Video

ಬೆಂಗಳೂರು, ಸೆಪ್ಟೆಂಬರ್ 05: ಮಾಜಿ ರಾಷ್ಟ್ರಪತಿ, ಮಹಾನ್ ಶಿಕ್ಷಕ ದಿ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನವನ್ನು ಇಂದು(ಸೆ.05) ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಈ ಶುಭದಿನವನ್ನು ಪ್ರತಿಯೊಬ್ಬರೂ ತಮ್ಮ ಗುರುವಿನ ನೆನೆಕೆಗಾಗಿ ಮೀಸಲಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಟ್ವಿಟ್ಟರ್ ಲೋಕಕ್ಕೆ ಪದಾರ್ಪಣೆ ಮಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸಹ ಟ್ವಿಟ್ಟರ್ ಮೂಲಕ ತಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವಾಗಿ ತಮಗೆ ರಾಜಕೀಯದ ಪಾಠ ಕಲಿಸಿದ ಗುರುಗಳಾದ ಎ.ಜಿ.ರಾಮಚಂದ್ರ ರಾವ್ ಅವರನ್ನು ದೇವೇಗೌಡರು ನೆನಪಿಸಿಕೊಂಡು, ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಜೊತೆಗೆ, 'ಕೈ ಹಿಡಿದು ಬರೆಯುವುದನ್ನು ಕಲಿಸಿ, ನೂರಾರು ಜನರ ಮುಂದೆ ನಿಂತು ಮಾತನಾಡುವುದನ್ನೂ ಕಲಿಸುವ ಅಸಾಮಾನ್ಯ ವ್ಯಕ್ತಿ ಗುರು. ಅಂತಹ ಎಲ್ಲ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು' ಎಂದು ಸಹ ದೇವೇಗೌಡರು ಟ್ವೀಟ್ ಮಾಡಿ, ತಮ್ಮೆಲ್ಲ ಆಚಾರ್ಯ ದೇವರನ್ನೂ ನೆನಪಿಸಿಕೊಂಡಿದ್ದಾರೆ.
ಕೈ ಹಿಡಿದು ಬರೆಯುವುದನ್ನು ಕಲಿಸಿ, ನೂರಾರು ಜನರ ಮುಂದೆ ನಿಂತು ಮಾತನಾಡುವುದನ್ನೂ ಕಲಿಸುವ ಅಸಾಮಾನ್ಯ ವ್ಯಕ್ತಿ ಗುರು.
— H D Devegowda (@H_D_Devegowda) September 5, 2018
ಅಂತಹ ಎಲ್ಲ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.#TeachersDay
ಈ ಸಂದರ್ಭದಲ್ಲಿ ನನಗೆ ರಾಜಕೀಯದ ಪಾಠ ಕಲಿಸಿದ ನನ್ನ ಗುರುಗಳಾದ ಎ.ಜಿ. ರಾಮಚಂದ್ರ ರಾಯರನ್ನು ಸಹ ನೆನಪಿಸಿಕೊಳ್ಳುತ್ತೇನೆ.











Click it and Unblock the Notifications