ರಸ್ತೆಗುಂಡಿ ಮುಚ್ಚುವ ಗಂಡಾಗುಂಡಿ ತಡೆಗೆ ಕೋರ್ಟ್ ಕಮಿಷನ್ ನೇಮಕ

ಬೆಂಗಳೂರು, ಸೆಪ್ಟೆಂಬರ್ 25: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗುಂಡಿಗಳನ್ನು ಮುಚ್ಚಲು ಸೆ.24ರವರೆಗೆ ಹೈಕೋರ್ಟ್ ಗಡುವು ನೀಡಿತ್ತು. ಸೋಮವಾರ ನಡೆಸಿದ ವಿಚಾರಣೆಯಲ್ಲಿ ಕೇವಲ 300 ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಬಿಬಿಎಂಪಿ ಹೇಳಿತ್ತು, ಅದನ್ನು ಮುಚ್ಚಲು ಎರಡು ಗಂಟೆಗಳ ಗಡುವು ನೀಡಲಾಗಿತ್ತು.

ನಗರದಲ್ಲಿರುವ ಎಲ್ಲಾ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲಾಗಿದೆಯೇ , ಈ ಭರ್ತಿ ಮಾಡಿರುವ ಗುಂಡಿಗಳನ್ನು ಪರಿಶೀಲಿಸಲು ಇಬ್ಬರು ಸದಸ್ಯರನ್ನೊಳಗೊಂಡ ಕೋರ್ಟ್ ಕಮಿಷನ್ ನೇಮಕ ಮಾಡಲಾಗಿದೆ.

ಬಿಬಿಎಂಪಿ ಸಂಪೂರ್ಣವಾಗಿ ಗುಂಡಿ ಮುಚ್ಚಲಾಗಿದೆ ಎನ್ನಲಾದ ಪಶ್ಚಿಮ ವಲಯದ ಯಲಹಂಕ, ಮಲ್ಲೇಶ್ವರ ಮತ್ತು ಮಹಾಲಕ್ಷ್ಮೀ ಲೇಔಟ್ ಪ್ರದೇಶವನ್ನು ಪರಿಶೀಲಿಸಿ, ಪ್ರಾಥಮಿಕ ವರದಿ ಸಲ್ಲಿಸಬೇಕು. ಕಮಿಷನ್ ಮಂಗಳವಾರ ಮಧ್ಯಾಹ್ನ 3.30ರ ನಂತರ ಕಾರ್ಯಾರಂಭ ಮಾಡಬೇಕು.

HC forms court commission on pothole filling in Bengaluru

ಮುಚ್ಚಿರುವ ಗುಂಡಿಗಳನ್ನು ಪರಿಶೀಲಿಸಿಪ್ರತಿ ಸೂಕ್ಷ್ಮ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು, ಅಗತ್ಯ ಕೋರ್ಟ್ ಕಮಿಷನ್ ದಿನವೂ ಕಾಮಗಾರಿ ಪರಿಶೀಲಿಸಿ ಅಂತಿಮವಾಗಿ ಸಮಗ್ರ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.

ಅಲ್ಲದೆ, ಕೋರ್ಟ್ ಕಮಿಷನ್ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ನ್ಯಾಯಾಲಯವು ಅಗತ್ಯ ಆದೇಶ ಹೊರಡಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳು, ಐಐಎಸ್ ಸಿ ಎಂಜಿನಿಯರ್ ಗಳು ತಮ್ಮ ಅನಿಸಿಕೆಗಳನ್ನು ಕಮಿಷನರ್‌ ಗೆ ತಿಳಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+